ವಿಜಯ ಸಂಘರ್ಷ ನ್ಯೂಸ್
ಭದ್ರಾವತಿ: ಹಳೆನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಸೆ. 26 ರಂದು ನಗರಸಭೆ ಮುಂಭಾಗದ ಭದ್ರಾ ಹೊಳೆಯ ನೀರಿನಲ್ಲಿ ಮಕಾಡೆ ಮಲಗಿದ್ದ ಸುಮಾರು 60-70 ವರ್ಷ ವಯಸ್ಸಿನ ಅನಾಮಧೇಯ ಹೆಂಗಸಿನ ಮೃತದೇಹ ಪತ್ತೆಯಾಗಿದೆ.
ಚಹರೆ 5 ಅಡಿ ಎತ್ತರ, ತಲೆಯಲ್ಲಿ 6 ಇಂಚು ಬಿಳಿ ಕೂದಲು ಇದ್ದು, ಸೊಂಟಕ್ಕೆ ಡಾಬು ಧರಿಸಿರುತ್ತಾರೆ. ಒಂದು ಕಪ್ಪು ಬಣ್ಣದ ಎಲೆ ಅಡಿಕೆ ಹಾಕುವ ಸಣ್ಣ ಚೀಲ ಸೊಂಟಕ್ಕೆ ಸಿಕ್ಕಿಸಿರುತ್ತದೆ. ಎಡಕೈಯಲ್ಲಿ ತಾಮ್ರ ದಂತಿರುವ ಬಳೆ ಇದ್ದು, ತೋರು ಬೆರಳಿನಲ್ಲಿ ತಾಮ್ರದಂತಿರುವ ಉಂಗುರು ಇರುತ್ತದೆ. ಎರಡು ಕಾಲು, ಕೈ, ಕಣ್ಣು, ಮುಖ, ಮೂಗು, ಎದೆ ನೀರಿನಲ್ಲಿ ಕೊಳೆತು ಚರ್ಮ ಸುಲಿದಿ ರುತ್ತೆ. ಮೈಮೇಲೆ ಕೆಂಪು ಸೀರೆ, ಕಪ್ಪು ಜಾಕೇಟ್ ಧರಿಸಿದೆ.
ಈ ಅನಾಮಧೆಯ ಹೆಂಗಸಿನ ಶವದ ವಾರಸುದಾರರು ಪತ್ತೆಯಾದಲ್ಲಿ ಭದ್ರಾವತಿ ಹಳೆ ನಗರ ಪೊಲೀಸ್ ಠಾಣೆಗೆ ಮಾಹಿತಿ ನೀಡುವಂತೆ ಪೊಲೀಸ್ ಸಬ್ ಇನ್ಸ್ ಪೆಕ್ಟರ್ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.
Tags
ಭದ್ರಾವತಿ ಅನಾಮದೇಯ ಶವ