ವಿಜಯ ಸಂಘರ್ಷ ನ್ಯೂಸ್
ಶಿವಮೊಗ್ಗ: ಮನುಷ್ಯನ ಸ್ವಾರ್ಥ, ದುರಾಸೆ ಗಳಿಂದಾಗಿ ಅತಿಯಾದ ಹವಾಮಾನ ವೈಪರಿತ್ಯಗಳನ್ನು ಎದುರಿಸುತ್ತಿದ್ದೇವೆ. ಇಂದು ಪರಿಸರ ಉಳಿಸಿಕೊಳ್ಳುವ ಬಹುದೊಡ್ಡ ಹೊಣೆಗಾರಿಕೆಗೆ ನಾವು ಮುಂದಾಗ ಬೇಕಿದೆ. ಅದಕ್ಕಾಗಿ ನಮಗೆ ಪ್ರಬಲ ಇಚ್ಛಾ ಶಕ್ತಿ ಬೇಕಾಗುತ್ತದೆ ಎಂದು ಕುವೆಂಪು ವಿಶ್ವವಿದ್ಯಾಲಯದ ರಾಷ್ಟ್ರೀಯ ಸೇವಾ ಯೋಜನೆಯ ಸಂಯೋಜನಾಧಿಕಾರಿ ಡಾ.ಶುಭಾ ಮರವಂತೆ ಹೇಳಿದರು.
ರೋಟರಿ ಉತ್ತರ 3182 ಹಾಗೂ ಅಂತಾರಾಷ್ಟ್ರೀಯ ರೋಟರಿ ಮೊಡೆಷ್ಟೋ ಯುನೈಟೆಡ್ ಸ್ಟೇಟ್ಸ್ ನ ಆಶ್ರಯದಲ್ಲಿ ರೋಟರಿ ಕ್ಲಬ್ ಕೈಗೊಂಡ ತುಂಗಾ ಮೇಲ್ದಡೆ ಜೀವ ವೈವಿಧ್ಯ ಅರಣ್ಯ ಯೋಜನೆಯಲ್ಲಿ ಅಧಿಕಾರಿಗಳನ್ನು ತರಬೇತಿ ನೀಡುವ ಒಂದು ದಿನದ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದರು.
ಪಶ್ಚಿಮಘಟ್ಟಗಳ ಸಮೃದ್ಧಿ ಜೀವ ವೈವಿಧ್ಯತೆಯ ಕಕ್ಷೆ ಶಿವಮೊಗ್ಗ ಜಿಲ್ಲೆಯು ಪರಿಸರ ಸಂರಕ್ಷಣೆಯ ವಿಷಯದಲ್ಲಿ ತುಂಬಾ ಅಪಾಯದಲ್ಲಿದೆ. ನಿರಂತರ ಕಾಡು ನಾಶದಿಂದಾಗಿ ಪರಿಸದ ಜೀವ ಸಂಕುಲಗಳು ಅಳಿವಿನ ಅಂಚಿಗೆ ತಲುಪಿವೆ ಎಂದರು.
ರೋಟರಿ ಉತ್ತರದ ಅಧ್ಯಕ್ಷ ಆರ್. ಬಸವ ರಾಜಪ್ಪ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ,ತುಂಗಾ ಮೇಲ್ದಡೆ ಯೋಜನೆ ಯ ಪರಿಸರವನ್ನು ಜೀವ ವೈವಿಧ್ಯತೆಯ ತಾಣವಾಗಿ ರೂಪಿಸಲು ನಾವೆಲ್ಲರೂ ಶ್ರಮಿಸ ಬೇಕಾಗಿದೆ. ರೋಟರಿ ಹಾಗು ಇತರ ಪರಿಸರಾಸಕ್ತರು ಮತ್ತು ಕುವೆಂಪು ವಿವಿ ಯ ರಾಷ್ಟ್ರೀಯ ಸೇವಾ ಯೋಜನೆಯ ಕಾರ್ಯ ಕ್ರಮಾಧಿಕಾರಿಗಳು ಹಾಗೂ ಸ್ವಯಂಸೇವಕರ ಸಹಯೋಗದಲ್ಲಿ ಕಾರ್ಯಯೋಜನೆ ರೂಪಿಸಲಾಗುತ್ತಿದೆ ಎಂದರು.
ಕಾರ್ಯಾಗಾರದ ಸಂಪನ್ಮೂಲ ವ್ಯಕ್ತಿಗಳಾಗಿ ಕುವೆಂಪು ವಿವಿಯ ಪರಿಸರ ಅಧ್ಯಯನ ವಿಭಾಗದ ಮುಖ್ಯಸ್ಥರಾದ ಪ್ರೊ. ಯೋಗೀಂದ್ರ ಪರಿಸರ ಸಂರಚನೆಯ ಮೂಲ ಪರಿಕಲ್ಪನೆಗಳನ್ನು ವಿವರಿಸಿದರು.
ಉಪ ಅರಣ್ಯಾಧಿಕಾರಿ ಶರತ್ ಜೀವವೈವಿಧ್ಯತೆ ಹಾಗೂ ಸಂರಕ್ಷಣೆಯ ಕುರಿತು ಮಾತನಾಡಿದರು. ಕೃಷಿ ವಿವಿಯ ಪ್ರಾಧ್ಯಾಪಕ ಡಾ. ಉಲ್ಲಾಸ್ ನವಿಲೆ ಕಳೆ ನಿರ್ವಹಣೆ ಕುರಿತು ಮಾತನಾಡಿದರು.
ರೊ. ಪ್ರೊ.ಎ.ಎಸ್. ಚಂದ್ರಶೇಖರ ಪ್ರಾಸ್ತಾವಿಕ ನುಡಿಗಳನ್ನಾಡಿದರು. ರೋ, ಸಹ ಗವರ್ನರ್ ರೊ.ಕೆ. ಪಿ.ಶೆಟ್ಟಿ, ರೊ.ವಿಜಯ ಕುಮಾರ್, ರೊ.ಹರ್ಷ ಕಾಮತ್, ರೊ.ವಾರಿಜ ಜಗದೀಶ್ ಉಪಸ್ಥಿತರಿದ್ದರು. ರೊ.ಜಗದೀಶ ಸರ್ಜಾ ಸ್ವಾಗತಿಸಿದರೆ, ರೊ.ರವೀಂದ್ರ ಐತಾಳ್ ನಿರೂಸಿ,ರೊ. ಆನಂದ ಮೂರ್ತಿ ವಂದಿಸಿದರು.
>ಸುದ್ದಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ<
ವಿಜಯ ಸಂಘರ್ಷ ಡಿಜಿಟಲ್ ನ್ಯೂಸ್:
9743225795
Tags
ಶಿವಮೊಗ್ಗ ಸುದ್ದಿ