ವಿಜಯ ಸಂಘರ್ಷ ನ್ಯೂಸ್
ಕೆ.ಆರ್.ಪೇಟೆ: ಹೇಮಾವತಿ ನೀರಾ ವರಿ ಅಧಿಕಾರಿಗಳ ನಿರ್ಲಕ್ಷ ಕಾಲುವೆಯ ನೀರು ರೈತರ ಜಮೀನಿಗೆ ನುಗ್ಗಿ ಕಬ್ಬು, ಸೇರಿದಂತೆ ಇನ್ನಿತರ ಬೆಳೆ ಹಾನಿ. ರೈತರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ತಾಲೂಕಿನ ಕಿಕ್ಕೇರಿ ಹೋಬಳಿಯ ಲಿಂಗಪುರ ಗ್ರಾಮದ ಬಳಿ ಇರುವ ಹೇಮಾವತಿ ಬಲದಂಡೆ ಸಿಳು ಕಾಲುವೆ ಯಲ್ಲಿ ಹಲವಾರು ವರ್ಷಗಳಿಂದ ನಾಲೆಯಲ್ಲಿ ನೀರು ಹೋಗ ಲಾಗದಷ್ಟು ನಾಲೆ ಉದ್ದಕ್ಕೂ ಗಿಡಗಂಟಿಗಳು ಬೆಳೆದು ನಾಲೆಯಲ್ಲಿ ಹೋಗಬೇಕಿದ್ದ ನೀರು. ನಾಲೆ ಏರಿ ಮೇಲೆ ಹರಿದು ಮಾಕವಳ್ಳಿ ಸಂತೋಷ್ ಎಂಬುವರ ಒಂದು ಎಕರೆಯಲ್ಲಿ ರುವ ಮೂರು ತಿಂಗಳ ಕಬ್ಬಿನ ಫಸಲು ಸೇರಿದಂತೆ ಅಕ್ಕ ಪಕ್ಕದ ರೈತರು ಬೆಳೆದ ರಾಗಿ,ಭತ್ತ ಬೆಳೆಗಳಿಗೆ ನೀರು ನುಗ್ಗಿ ಅವಾಂತರ ಸೃಷ್ಟಿಯಾಗಿದೆ.
ಬಳಿಕ ರೈತ ಸಂತೋಷ್ ಮಾತನಾಡಿ ಈ ಸೀಳುಗಾಲವೆ ಈ ಭಾಗದ ರೈತ ಜೀವನಾಡಿ ಯಾಗಿದೆ ಆದರೆ ಹೇಮಾವತಿ ಅಧಿಕಾರಿಗಳ ದಿವ್ಯ ನಿರ್ಲಕ್ಷದಿಂದ ಹಲವು ವರ್ಷಗಳಿಂದ ಕಾಲುವೆಯ ಒಳಭಾಗದಲ್ಲಿರುವ ಗಿಡಗಂಟಿ ಗಳನ್ನ ಸ್ವಚ್ಛಗೊಳಿಸದೆ ಹಿನ್ನೆಲೆ ನಾಲೆಯಲ್ಲಿ ನೀರು ಹೋಗದೆ ನಾಲೆ ಏರಿ ಮೇಲೆ ಹರಿದು. ನಮ್ಮ ಕಬ್ಬಿನ ಬೆಳೆಯಿದ್ದ ಜಮೀನು ಸೇರಿ ದಂತೆ ಅಕ್ಕಪಕ್ಕದ ರೈತರ ಜಮೀನಿನ ಮೇಲೆ ಸತತ ಒಂದು ವಾರದಿಂದ ಹರಿಯುತ್ತಿದ್ದರೂ ಸಂಬಂಧಪಟ್ಟ ಅಧಿಕಾರಿ ಗಳು ಕಣ್ಮುಚ್ಚಿ ಕುಳಿತಿದ್ದಾರೆ. ಸಂಬಂಧಪಟ್ಟ ಹೇಮಾವತಿ ಇಲಾಖೆ ಸಹಾಯಕ ಕಾರ್ಯಪಾಲಕ ಅಭಿಯಂತರರಾದ ಚಂದ್ರೇಗೌಡರಿಗೆ ಮನವಿ ಮಾಡಿದರು ಕೂಡ ಉಡಾಫೆ ಉತ್ತರ ನೀಡುತ್ತಿದ್ದಾರೆ ಎಂದು ಆರೋಪಿಸಿ ನಾಲೆಯಲ್ಲಿ ಬೆಳೆದ ಜಂಗಲ್ ಕೂಡಲೆ ತೆರುವುಗೊಳಿಸಿ ಈ ಭಾಗದ ರೈತರಿಗೆ ಅನುಕೂಲ ಮಾಡ ಬೇಕು ಎಂದು ಆಗ್ರಹಿಸಿದರು.
*✍️ಸುದ್ದಿಯೊಂದಿಗೆ ಮನು ಮಾಕವಳ್ಳಿ ಕೆ ಆರ್ ಪೇಟೆ*
Tags
ಕೆ ಆರ್ ಪೇಟೆ ವರದಿ