ವಿಜಯ ಸಂಘರ್ಷ ನ್ಯೂಸ್
ಕೆ.ಆರ್.ಪೇಟೆ: ತಾಲೂಕಿನ ಕಸಬಾ ಹೋಬಳಿಯ ಸಾಧುಗೋನಹಳ್ಳಿ ಬಳಿಯ ಹೇಮಾವತಿ 52ರ ಬಲದಂಡೆ ನಾಲೆಯ ಸಿಳು ಕಾಲುವೆಯಲ್ಲಿ ಸುಮಾರು 5 ವರ್ಷ ಗಳಿಂದ ನೀರಿನ ಒತ್ತಡಕ್ಕೆ ಹಾಗೂ ಹೇಮಾವತಿ ನೀರಾವರಿ ಇಲಾಖೆಯ ಅಧಿಕಾರಿಗಳ ನಿರ್ಲಕ್ಷದಿಂದ ಒಡೆದಿದ್ದು ಅಪಾರ ಪ್ರಮಾಣದ ನೀರು ಪೋಲಾಗಿರುತ್ತಿ ರುವುದನ್ನು ಖಂಡಿಸಿ ಕಾಲುವೆ ಬಳಿ ನಿಂತು ರೈತರು ಪ್ರತಿಭಟಿಸಿದರು.
ಬಳಿಕ ಮಾತನಾಡಿದ ಮುಖಂಡ ಎಸ್.ಎಂ ಲೋಕೇಶ್ ಪ್ರಸಕ್ತ ವರ್ಷ ಗೊರೂರು ಹೇಮಾವತಿ ಜಲಾಶಯದಲ್ಲಿ ನೀರಿಕ್ಷಿತ ಪ್ರಮಾಣದ ನೀರು ಸಂಗ್ರಹವಾಗಿದ ಹಿನ್ನೆಲೆ ಕಾಲುವೆಗೆ ನೀರು ಹರಿಸಲಾಗಿದೆ.ನೀರು ಬಿಡುವುದಕ್ಕೂ ಮುಂಚೆ ಕಾಲುವೆಯ ಸ್ಥಿತಿಗತಿಯನ್ನು ನೀರಾವರಿ ಇಲಾಖೆ ಅಧಿಕಾರಿಗಳು ಪರಿಶೀಲಿಸದೇ ಇರುವುದು ಕಾಲುವೆ ನೀರು ಪೋಲಗಲು ಕಾರಣವಾಗಿದೆ ಈ ಸಮಸ್ಯೆ ಕುರಿತು ಹಲವು ಬಾರಿ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳಿಗೆ ಮನವಿ ಮಾಡಿದರು ಉಡಾಫೆ ಉತ್ತರ ನೀಡಿದ ಪರಿಣಾಮವಾಗಿ ರೈತರ ಮುಖ್ಯ ರಸ್ತೆ ಹಾಗೂ ಹಳ್ಳ ಕೊಳ್ಳದಲ್ಲಿ ನೀರು ಪೋಲಾಗಿ ಕಾಲುವೆಯ ಕೊನೆ ಭಾಗದ ರೈತರಿಗೆ ಸಂಕಷ್ಟ ಎದುರಾಗಿರುವುದರ ಜೊತೆಗೆ ಕಾಲುವೆ ಒಡೆದು ಬೆಳೆಗಳು ನೀರುಪಾಲಾಗಿದ್ದು, ರೈತರು ಕಂಗಾಲಾಗಿದ್ದಾರೆ ಎಂದು ಕಿಡಿಕಾರಿ ಕೂಡಲೇ ಈ ಸಮಸ್ಯೆ ಬಗೆಹರಿಸದೆದ್ದಲ್ಲಿ ಮುಂದಿನ ದಿನಗಳಲ್ಲಿ ಹೇಮಾವತಿ ನೀರಾವರಿ ಇಲಾಖೆಯ ಮುಂದೆ ಉಗ್ರ ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಈ ಸಂದರ್ಭದಲ್ಲಿ ಅಣ್ಣೆಗೌಡ, ಸುಂದ್ರೆಗೌಡ, ತಿಮ್ಮೆಗೌಡ,ಉತ್ತಮ ಪ್ರಿಯ, ನಟೇಶ್, ಸೇರಿದಂತೆ ಉಪಸ್ಥಿತರಿದ್ದರು
*ಸುದ್ದಿಯೊಂದಿಗೆ ಮನು ಮಾಕವಳ್ಳಿ ಕೆ ಆರ್ ಪೇಟೆ*
Tags
ಕೆ ಆರ್ ಪೇಟೆ ವರದಿ