ಕೆ.ಆರ್.ಪೇಟೆ- ಜಯಕರ್ನಾಟಕ ಸಂಘಟನೆಯ ಹೋಬಳಿ ಘಟಕಗಳಿಗೆ ಪದಾಧಿಕಾರಿಗಳ ಆಯ್ಕೆ

ವಿಜಯ ಸಂಘರ್ಷ ನ್ಯೂಸ್ 
ಕೆ ಆರ್ ಪೇಟೆ: ತಾಲ್ಲೂಕು ಕಿಕ್ಕೇರಿ ಹೋಬಳಿ ಜಯಕರ್ನಾಟಕ ಸಂಘಟನೆ ಅಧ್ಯಕ್ಷರಾಗಿ ಸತೀಶ್ ಅವರನ್ನು ನೇಮಕಮಾಡಿ ಆದೇಶ ಪತ್ರವನ್ನು ತಾಲ್ಲೂಕು ಸಂಘಟನೆ ಅಧ್ಯಕ್ಷ ಹೊನ್ನೇನಹಳ್ಳಿ‌ ಸೋಮಶೇಖರ್ ಅಭಿನಂದಿಸಿದರು.

ಸಂಘಟನೆಗೆ ಹೊಸದಾಗಿ ಸೇರ್ಪಡೆ ಯಾದ ಸುಂದ್ರೇಶ್.ನಾಗರಾಜು. ಪ್ರತೀಶ್.ಯೋಗೇಶ್.ರವಿ.ಮಹಿಳೆಯರಾದ ಮಂಜುಳ ರಾಜೇಶ್ವರಿ ಸೇರಿಕೊಂಡರು.

ಬಳಿಕ ಮಾತನಾಡಿದ ‌ತಾಲ್ಲೂಕು‌ ಜಯ ಕರ್ನಾಟಕ ಸಂಘಟನೆ ಅಧ್ಯಕ್ಷ‌ ಹೊನ್ನೇನಹಳ್ಳಿ ಸೋಮಶೇಖರ್ ನಮ್ಮ ಸಂಘಟನೆಯು ಪ್ರಾರಂಭವಾಗಿ 17ನೇ ವರ್ಷಕ್ಕೆ ಕಾಲಿಟ್ಟಿದೆ.48ಲಕ್ಷ ಮಂದಿ ಸಂಘಟನೆಯಲ್ಲಿ‌ ಸದಸ್ಯರುನೋಂದಣಿ ಮಾಡಿಸಿದ್ದಾರೆ.17 ವರ್ಷಗಳಿಂದ ನಮ್ಮ ಸಂಘಟನೆಯ ಬಗ್ಗೆ ‌ಸಾರ್ವಜ ನಿಕರು ಪ್ರಶಂಸೆ ವ್ಯಕ್ತಪಡಿಸುತ್ತಿದ್ದಾರೆ. 

ನಾಡು,ನುಡಿ,ನೆಲ,ಜಲ‌ ವಿಚಾರದಲ್ಲಿ ಸಂಕಟ ಬಂದಾಗ ‌ನಮ್ಮ ಸಂಘಟನೆ ಯು ನಿರಂತರವಾಗಿ ಹೋರಾಟ ನಡೆಸಲು ಹಿಂಜರಿಯುವುದಿಲ್ಲ. ಆದ್ದರಿಂದ ‌ಸಂಘಟನೆಯಲ್ಲಿ‌ ಕ್ರಿಯಾಶೀಲವಾಗಿ ಭಾಗವಹಿಸಿ ಸಂಘಟನೆಯ ಉದ್ದೇಶಗಳನ್ನು ಅರ್ಥಮಾಡಿಕೊಂಡು ಒಳ್ಳೆಯದಕ್ಕೆ ಸಂಘಟನೆಯನ್ನು ಬಳಸಿಕೊಳ್ಳಬೇಕು ಎಂದು ಕರೆ ನೀಡಿದರು.

ಈ ಸಂದರ್ಭದಲ್ಲಿ ಜಯಕರ್ನಾಟಕ ಸಂಘಟನೆ ಯೂತ್ ಅಧ್ಯಕ್ಷ ಮಹೇಶ್, ಕಾರ್ಯಧ್ಯಕ್ಷ ಆನಂದ್.ಪ್ರಧಾನ ಕಾರ್ಯದರ್ಶಿ ಪ್ರಭು,ನಗರ ಅಧ್ಯಕ್ಷ ಅಕ್ಷಯ್,ವಿದ್ಯಾರ್ಥಿ ಘಟಕದ ಅಧ್ಯಕ್ಷ ಶಿವು,ನಗರ ಗೌರವಾಧ್ಯಕ್ಷ ಮೋಹನ್, ಕಾರ್ಯಧ್ಯಕ್ಷ ಹರೀಶ್, ಕಾರ್ಯದರ್ಶಿ ಶಂಕರ್,ಮಂಜು, ರವಿ ಮಹಿಳಾ ಅಧ್ಯಕ್ಷರಾದ ಜಯಲಕ್ಷ್ಮಿ. ಅನು. ಜಯಶೀಲ,ಗೌರಮ್ಮ,ರತ್ನಮ್ಮ. ದ್ರಾಕ್ಷಾಯಿಣಿ ಹಾಗೂ ಪದಾಧಿಕಾರಿ ಗಳು ಇದ್ದರು.

*✍️ಸುದ್ದಿಯೊಂದಿಗೆ ಮನು ಮಾಕವಳ್ಳಿ ಕೆ ಆರ್ ಪೇಟೆ*

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು