ಭದ್ರಾವತಿ-ವೆಕ್ಸಾನ್ ಪ್ರೆವೇಟ್ ಲಿಮಿಟೆಡ್ ಕಂಪನಿಯ ವಿರುದ್ದ ಕ್ರಮಕ್ಕೆ ಆಗ್ರಹಿಸಿ ಪ್ರತಿಭಟನೆ

ವಿಜಯ ಸಂಘರ್ಷ ನ್ಯೂಸ್ 
ಭದ್ರಾವತಿ: ನಗರದಲ್ಲಿ ವೆಕ್ಸಾನ್ ಪ್ರೆವೇಟ್ ಲಿಮಿಟೆಡ್ ಕಂಪನಿಯು ಪ್ರೊಡೆಕ್ಟ್ ಎಂಬ ಹೆಸರಿನಲ್ಲಿ ನೂರಾರು ಯುವಕ,ಯುವತಿಯರಿಗೆ ವಂಚಿಸುತ್ತಿ ದ್ದಾರೆ ಎಂದು ಆರೋಪಿಸಿ ಶನಿವಾರ ನಗರಸಭಾ ಸದಸ್ಯ ಬಿ.ವಿ.ಸಂತೋಷ್ ಕುಮಾರ್ ನೇತೃತ್ವದಲ್ಲಿ ಹುತ್ತಾ ಕಾಲೋನಿಯ ವೆಕ್ಸಾನ್ ಪ್ರೆವೇಟ್ ಲಿಮಿಟೆಡ್ ಕಚೇರಿ ಮುಂಭಾಗ ಪ್ರತಿಭಟನೆ ಹಮ್ಮಿಕೊಳ್ಳಲಾಯಿತು.

   ರಾಜ್ಯದ ಧಾರವಾಡ, ಹುಬ್ಬಳ್ಳಿ, ರಾಯಚೂರು ಸೇರಿದಂತೆ ಸುತ್ತ ಮುತ್ತಲ ಜಿಲ್ಲೆಗಳಿಂದ ನೂರಾರು ಯುವಕ, ಯುವತಿ ಯರನ್ನು ಕರೆತಂದು ಅವರಿಂದ 51 ಸಾವಿರ ರೂ, ಹಣ ಪಡೆದು ಪ್ರೊಡೆಕ್ಟ್ ಹೆಸರಲ್ಲಿ ವಂಚಿಸ ಲಾಗುತ್ತಿದೆ ಎಂದು ಪ್ರತಿಭಟನಾ ಕಾರರು ಆರೋಪಿಸಿದರು.

  ಈ ಕಂಪನಿಯ ಗುಟ್ಟು ಹೊರಬರ ಬಾರದು ಎಂದು ಸ್ಥಳೀಯರಿಗೆ ಉದ್ಯೋಗ ನೀಡದೆ ವಂಚಿಸುತ್ತಿದ್ದಾರೆ. ಅಲ್ಲದೆ ಕರ್ತವ್ಯ ನಿರ್ವಹಿಸುತ್ತಿರುವ ಯುವಕರಿಗೆ ಯಾವುದೇ ಸಾರಿಗೆ, ಸಂಬಳ, ಭತ್ಯೆ ಇತ್ಯಾದಿ ಭದ್ರತೆ ಇರುವುದಿಲ್ಲ. ಕಾರ್ಮಿಕ ಇಲಾಖೆಯ ನೋಂದಣಿ ಯಾಗಲಿ ಇರುವುದಿಲ್ಲ. ಈ ಹಿನ್ನಲೆಯಲ್ಲಿ ತಕ್ಷಣ ಈ ಕಂಪನಿಯ ವಿರುದ್ದ ದೂರು ದಾಖಲಿಸಿ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಗ್ರೇಡ್-2 ತಹಸೀಲ್ದಾರ್ ಮಂಜನಾಯ್ಕ್ ರವರಿಗೆ ಮನವಿ ಸಲ್ಲಿಸಿದರು.

ಪ್ರತಿಭಟನೆಯಲ್ಲಿ ಬ್ಲಾಕ್ ಕಾಂಗ್ರೆಸ್ ಉಪಾಧ್ಯಕ್ಷ ಕೆ.ಮಂಜುನಾಥ,ಯುವ ಕಾಂಗ್ರೆಸ್ ಅಧ್ಯಕ್ಷ ಅಭಿಲಾಶ್ (ಅಭಿ) ಪಕ್ಷದ ಮುಖಂಡರಾದ ಮಂಜುನಾಥ್, ಕೃಷ್ಣ, ಮುಶ್ರೂಫ್, ರಫಿ,ಚೇತನ್ ಕುಮಾರ್, ಲೋಕಾನಂದ, ಮಸೂದ್, ಇರ್ಫಾನ್, ಶೇಖರ್ ಇನ್ನಿತರರು ಭಾಗವಹಿಸಿದ್ದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು