ಭದ್ರಾವತಿ-ಸಿಂಗನಮನೆ ಗ್ರಾ ಪಂ ಸದಸ್ಯ ನಿಂದಲೇ ಅಹೋರಾತ್ರಿ ಧರಣಿ..?

ವಿಜಯ ಸಂಘರ್ಷ ನ್ಯೂಸ್ 
ಭದ್ರಾವತಿ : ತಾಲ್ಲೂಕಿನ ಅತಿ ದೊಡ್ಡ ಪಂಚಾಯಿತಿಯಾದ ಸಿಂಗನಮನೆ ಗ್ರಾಮ ಪಂಚಾಯಿತಿ ಅವ್ಯವಹಾರ ಖಂಡಿಸಿ ಮಂಜುನಾಥ್ ಎಂಬ ಸದಸ್ಯನಿಂದಲೇ ಗ್ರಾಮ ಪಂಚಾಯಿತಿ ಕಛೇರಿಯಲ್ಲಿ ಅಹೋರಾತ್ರಿ ಧರಣಿ ನಡೆಸುತ್ತಿದ್ದಾರೆ.

ಘಟನೆಗೆ ಕಾರಣವೇನು.?

ಗ್ರಾಮ ಪಂಚಾಯಿತಿ ವ್ಯಾಪ್ತಿಯ ಶಾಂತಿ ನಗರ ಗ್ರಾಮದಲ್ಲಿ ಕೆಲವು ದಿನಗಳಿಂದ ಕುಡಿಯುವ ನೀರನ್ನು ಸಮರ್ಪಕವಾಗಿ ಬಿಡದೆ ಇರುವುದರಿಂದ, ಸಾರ್ವಜನಿ ಕರ ಹಾಗೂ ಗ್ರಾಮಸ್ಥರ ಪ್ರಶ್ನೆಗೆ ಉತ್ತರಿ ಸಲಾಗದೆ, ಶಾಂತಿನಗರ ವಾರ್ಡಿಗೆ ಸಂಬಂಧ ಪಟ್ಟ ಪಂಚಾಯಿತಿ ಸದಸ್ಯ ಮಂಜುನಾಥ್ ಎಂಬುವವರು ಕಛೇರಿಯಲ್ಲಿ ಅಹೋರಾತ್ರಿ ಧರಣಿ ಸತ್ಯಾಗ್ರಹ ನಡೆಸುತ್ತಿದ್ದು, ಅಧ್ಯಕ್ಷೆ ಮಂಜುಳಾ ರವರು ದ್ವೇಷದ ರಾಜಕಾರಣ ಮಾಡುತ್ತ, ಕಾಮಗಾರಿ ಗಳ ಬಿಲ್ ಪಾವತಿಸದೆ, ಯಾವುದೆ ಅಭಿವೃದ್ದಿ ಕೆಲಸ, ಹಾಗೂ ಕಾರ್ಯ ಕ್ರಮಗಳನ್ನು ಮಾಡದೆ ಸಾರ್ವಜನಿಕರ ಹಣವನ್ನು ದುರುಪಯೋಗ ಮಾಡ ಲಾಗಿದೆ ಎಂದು ಆರೋಪಿಸಿದ್ದಾರೆ.

ಇವರ ಅವಧಿಯಲ್ಲಿ ಸರಕಾರಿ ಜಾಗ ಮಾರಾಟ, ಲೇಔಟ್ ಗಳಲ್ಲಿ CA ಸೈಟ್ ಗಳನ್ನು ಮಾರಾಟ, ಬೀದಿ ದೀಪಗಳ ಖರೀದಿಯಲ್ಲಿ ಅಕ್ರಮ, ಕುಡಿಯುವ ನೀರಿನ ಪೈಪ್ ರಿಪೇರಿ ಮಾಡಲು ಖರೀದಿಸಿರುವ ಅಕ್ರಮ ಬಿಲ್ಲುಗಳು ಮಾಡಿರುವ ಅಕ್ರಮಗಳ ಆರೋಪ ಮಾಡಿದ್ದಾರೆ. 

ಸಮಸ್ಯೆ ಬಗೆಹರಿಸುವವರೆಗೂ ಅಹೋರಾತ್ರಿ ಧರಣಿ ಸತ್ಯಾಗ್ರಹ ಮುಂದುವರೆಸುವುದಾಗಿ ತಿಳಿಸಿದ್ದಾರೆ.

ಪಂಚಾಯಿತಿಯಲ್ಲಿ ನರೇಗಾ ಕಾಮ ಗಾರಿ, ಹಾಗೂ 15 ನೇ ಹಣಕಾಸು ವಾರ್ಷಿಕ ಲೆಕ್ಕ ಪರಿಶೋಧನೆಯಲ್ಲಿ ಅಕ್ರಮವಾಗಿರುವುದು ಸಾಬೀತಾ ಗಿರುತ್ತದೆಎಂದು ಆರೋಪಿಸಿದ್ದಾರೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು