ಕೆ.ಆರ್.ಪೇಟೆ-ಕಲಾಸಕ್ತರಿಂದ ಯಶಸ್ವಿ ಯತ್ತ ಅದ್ದೂರಿ ನಾಟಕೋತ್ಸವ

ವಿಜಯ ಸಂಘರ್ಷ ನ್ಯೂಸ್ 
ಕೆ.ಆರ್.ಪೇಟೆ: ಪಟ್ಟಣದ ಶ್ರೀ ರಂಗ ಚಿತ್ರಮಂದಿರ ಆವರಣದಲ್ಲಿ ಡಾ:ರಾಜ್ ರಂಗ ಕಲಾ ವೇದಿಕೆ ವತಿಯಿಂದ 23 ದಿನಗಳ ಕಾಲ ಏರ್ಪಡಿಸಿರುವ ಪೌರಾಣಿಕ ನಾಟಕೋತ್ಸವಕ್ಕೆ ಸೇರುತ್ತಿರುವ ಜನರನ್ನು ನೋಡಿದಾಗ ಒಳ್ಳೆಯದನ್ನು ಆಸ್ವಾದಿಸುವ ಜನರೂ ಇದ್ದಾರೆ ಎಂಬುದನ್ನು ಸಾರಿ ಹೇಳುವಂತಿದೆ.ನಿತ್ಯ ನಾಟಕ ಪ್ರದರ್ಶನಕ್ಕೆ ಕಲಾಸಕ್ತರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ.

ಪೌರಾಣಿಕ ನಾಟಕಗಳಿಗೆ ರಂಗಾಸಕ್ತರು ಕಡಿಮೆಯಾಗಿರುವ ಈ ದಿನಗಳಲ್ಲಿ ಮತ್ತೆ ರಂಗಭೂಮಿಯತ್ತ ಅವರನ್ನು ಸೆಳೆಯಲು ತಾಲ್ಲೂಕು ಕೇಂದ್ರದಲ್ಲಿ ಎರಡನೇ ಬಾರಿಗೆ ಆಯೋಜಿಸಿರುವ 23 ದಿನಗಳ ಹಗಲು ಹೊತ್ತಿನ ಪೌರಾಣಿಕ ನಾಟಕೋತ್ಸವಕ್ಕೆ ಕಲಾಸಕ್ತರಿಂದ ಪ್ರೋತ್ಸಾಹ ಸಿಗುತ್ತಿದೆ. ಈ ಪ್ರಯತ್ನ ಯಶಸ್ವಿ ಎನ್ನಿಸಿದೆ.

ಪಟ್ಟಣದ ಡಾ:ರಾಜ್ ರಂಗ ಕಲಾ ಸಂಘ ಮತ್ತು ಮಂಡ್ಯ ಉಮೇಶ್ ಡ್ರಾಮಾ ಸಿನರಿ ಸಹಕಾರದಿಂದ ನಾಟಕೋತ್ಸವ ಸಾಕಾರ ಗೊಂಡಿದೆ. ಕನ್ನಡ ರಾಜ್ಯೋತ್ಸವದ ಪ್ರಯುಕ್ತ ಶಾಸಕ ಹೆಚ್ ಟಿ ಮಂಜು ಸಮಾಜ ಸೇವಕ ಆರ್ ಟಿ ಓ ಮಲ್ಲಿಕಾರ್ಜುನ್, ಮನ್ಮುಲ್ ನಿರ್ದೇಶಕರಾದ ಡಾಲು ರವಿ,ಎಂ ಬಿ ಹರೀಶ್,ಡಿ.ಸಿ.ಸಿ ಬ್ಯಾಂಕ್ ನಿರ್ದೇಶಕ ಅಂಬರೀಷ್ ಕಾಂಗ್ರೆಸ್ ಮುಖಂಡ ಬೂಕನಕೆರೆ ವಿಜಯ ರಾಮೇಗೌಡ, ರಾಜ್ಯ ಮಾರಾಟ ಮಹಾಮಂಡಳಿ ನಿರ್ದೇಶಕ ಶೀಳನೆರೆ ಮೋಹನ್,ಸಮಾಜ ಸೇವಕ ಗದ್ದೆಹೊಸೂರು ಜಗದೀಶ್, ಅನೇಕ ಗಣ್ಯರ ದಿವ್ಯ ಹಸ್ತದಿಂದ ನವೆಂಬರ್ 8ನೇ ತಾರೀಖಿ ನಿಂದ ಆರಂಭಗೊಂಡ ನಾಟಕೋತ್ಸವ. ಪೌರಾಣಿಕ ನಾಟಕ ಎಂದಾಕ್ಷಣ ಸಾಮಾನ್ಯ ವಾಗಿ ರಾತ್ರಿ ಆರಂಭವಾಗಿ ಬೆಳಗಿನವರೆಗೆ ನಡೆಯುತ್ತದೆ ಎಂಬ ಸಂಪ್ರದಾಯ ಇದೆ. ಆದರೆ ಇಲ್ಲಿ ಹಗಲು ಹೊತ್ತಿನಲ್ಲಿ ನಾಟಕ ಪ್ರದರ್ಶನವಾಗುತ್ತಿದೆ.

ನಿರೀಕ್ಷೆಗೂ ಮೀರಿ ಪ್ರೇಕ್ಷಕರಿಂದ ಬೆಂಬಲ ವ್ಯಕ್ತವಾಗುತ್ತಿದೆ. ನಿತ್ಯ ಮಧ್ಯಾಹ್ನ 12ಕ್ಕೆ ಆರಂಭವಾಗುವ ನಾಟಕ ರಾತ್ರಿ 10ಕ್ಕೆ ಮುಕ್ತಾಯವಾಗುತ್ತದೆ. ಆಸನಗಳ ವ್ಯವಸ್ಥೆ ಕಡಿಮೆ ಇದ್ದರೂ ಕೆಲವೊಮ್ಮೆ ಜನರು ನಿಂತುಕೊಂಡೇ ನಾಟಕ ವೀಕ್ಷಿಸುತ್ತಿರುವುದು ಕಲಾಸಕ್ತರಿಗೆ ಕೊರತೆ ಇಲ್ಲ ಎಂಬುದನ್ನು ತೋರಿಸುತ್ತದೆ.

23 ದಿನಗಳ ಕಾಲ ಹಲವು ತಂಡಗಳ ಕಲಾವಿದರು ಕುರುಕ್ಷೇತ್ರ, ದೇವಿಮಹಾತ್ಮೆ, ಸಂಪೂರ್ಣ ರಾಮಾಯಣ, ದಕ್ಷಯಜ್ಞ ನಾಟಕಗಳಲ್ಲಿ ಅಭಿನಯಿಸುತ್ತಿದ್ದಾರೆ. ಹೆಚ್ಚಿನ ಸಂಖ್ಯೆಯಲ್ಲಿ ಕುರುಕ್ಷೇತ್ರ ನಾಟಕ ಪ್ರದರ್ಶಿತವಾಗುತ್ತಿದೆ. ನ: 8 ರಿಂದ ಆರಂಭ ವಾಗಿರುವ ನಾಟಕೋತ್ಸವ ಡಿಸೆಂಬರ್ 3 ಮುಕ್ತಾಯವಾಗುತ್ತದೆ. ಪ್ರತಿದಿನ ನಾಟಕದಲ್ಲಿ ಅಭಿನಯಿಸುವ ಕಲಾವಿದರಿಗೆ ಸಾಮೂಹಿಕ ವಾಗಿ ಡಾ ರಾಜ್ ಕಲಾ ಕಲಾಸಂಘ ಗೌರವಿಸಲಾಗುತಿದೆ.

ಆಯಾ ಊರಿನ ಕಲಾವಿದರ ಅಭಿನಯದ ನಾಟಕಗಳಿಗೆ ಆ ಊರಿನವರು ಬಂದು ಪ್ರೋತ್ಸಾಹ ನೀಡುತ್ತಾರೆ. ಅದರಲ್ಲೂ ಮಹಿಳಾ ಪ್ರೇಕ್ಷಕರು ಸಹ ಬರುತ್ತಿರುವುದು ವಿಶೇಷ. ನೆಚ್ಚಿನ ಕಲಾವಿದರು ವೇದಿಕೆಗೆ ಪ್ರವೇಶ ಮಾಡುತ್ತಿದ್ದಂತೆ ಶಿಳ್ಳೆ, ಚಪ್ಪಾಳೆ ಮೂಲಕ ಸ್ವಾಗತಿಸುವ ದೃಶ್ಯ ಕಂಡು ಬರುತ್ತದೆ.

ನಾಟಕೋತ್ಸವದಲ್ಲಿ ಸ್ಥಳೀಯ ಕೆ.ಆರ್.ಪೇಟೆ ಕಲಾವಿದರುಗಳಿಗೆ ಮೊದಲ ಆದ್ಯತೆ ನೀಡಿ ಪಾಂಡುಪುರ,ಮೈಸೂರು, ರಾಮನಗರ, ಚನ್ನರಾಯಪಟ್ಟಣ,ತಂಡದ ಕಲಾವಿದರು ನಾಟಕಗಳಲ್ಲಿ ಅಭಿನಯಿಸುತ್ತಿದ್ದಾರೆ. ಪ್ರತಿದಿನ ಒಂದು ನಾಟಕ ಮಾತ್ರ ಪ್ರದರ್ಶನ ಇರುತ್ತದೆ. ನಾಟಕದ ಆಯೋಜಕರಿಂದ ರಂಗಸಜ್ಜಿಕೆ,ವಾದ್ಯಗೋಷ್ಠಿ ಶ್ರೀ ಪಾತ್ರಧಾರಿ ಕಲಾವಿದರ ವ್ಯವಸ್ಥೆ ಮಾಡಲಾಗುತ್ತದೆ. ಒಟ್ಟಾರೆ ಹೇಳಬೇಕೆಂದರೆ ಕೆಆರ್ ಪೇಟೆ ಡಾ: ರಾಜ್ ರಂಗ ಕಲಾ ಸಂಘ ಒಂದು ಸುಂದರ ನಾಟಕೋತ್ಸವದ ಯಶಸ್ವಿಗೆ ಸಾಕ್ಷಿಯಾಗಿ ದ್ದರು ಕೂಡ ಪ್ರಮುಖ ರೂವಾರಿ ಪತ್ರಕರ್ತ ಹಾಗೂ ಡಾ:ರಾಜ್ ರಂಗ ಕಲಾ ವೇದಿಕೆ ಸಂಘಟನಾ ಕಾರ್ಯದರ್ಶಿ ಹೊಸಹೊಳಲು ರಘು ಜೊತೆಗೆ ಡಾ: ರಾಜ್ ರಂಗ ಕಲಾ ಸಂಘದ ಅಧ್ಯಕ್ಷರಾಗಿ ಮುದ್ದನಹಳ್ಳಿ ದೇವರಾಜು,ಗೌರವಾಧ್ಯಕ್ಷ ತಂದ್ರೆಕೊಪ್ಪಲು ಮಂಜುನಾಥ್, ಉಪಾಧ್ಯಕ್ಷ ವಿಠಲಪುರ ಸಣ್ಣತಮ್ಮೆಗೌಡ, ಪ್ರಧಾನ ಕಾರ್ಯದರ್ಶಿ ಕೂಡಲಕುಪ್ಪೆ ದೇವರಾಜು,ಖಜಾಂಚಿ ಮರಟಿಕೊಪ್ಪಲು ಮಂಜುನಾಥ್, ಸಹಾ ಕಾರ್ಯದರ್ಶಿ ಮಂಜುನಾಥ್, ಸಂಘದ ಸದಸ್ಯರಾದ ಬಂಡಿಹೊಳೆ ಕಾಯಿ ಮಂಜೇಗೌಡ, ಹೊಸಹೊಳಲು ಯೋಗೇಶ್ ಎನ್. ಗೌಡ,ರವಿ ಕುಮಾರ್, ರುದ್ರೇಶ್, ಜಗದೀಶ್, ಡ್ರಾಮಾ ಮಾಸ್ಟರ್ ಅನಿಲ್ ಕುಮಾರ್,ಸಂಪತ್ ಸೇರಿದಂತೆ ಕಲಾಪೋಷಕರಿಗೆ ಯಶಸ್ವಿಗರಿ ಸಲ್ಲುತ್ತದೆ.

*✍️ವಿಶೇಷ ಸುದ್ದಿಯೊಂದಿಗೆ ಮನು ಮಾಕವಳ್ಳಿ ಕೆ ಆರ್ ಪೇಟೆ*

ಸುದ್ದಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ : 9743225795

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು