ವಿಜಯ ಸಂಘರ್ಷ ನ್ಯೂಸ್
ಶಿವಮೊಗ್ಗ: ಭಾರತ ರಾಷ್ಟ್ರೀಯ ಕಾಂಗ್ರೆಸ್ ಪಕ್ಷವು ಇಡೀ ದೇಶದೆಲ್ಲೆಡೆ ಮತಗಳ್ಳನ ಕುರಿತಾದ "ವೋಟ್ ಚೋರ್ ಗದ್ದಿ ಚೋಡ್" ಮತ ಸಂಗ್ರಹಣೆ ಅಭಿಯಾನ ಆರಂಭಿಸಿದ್ದು, ಕರ್ನಾಟಕ ರಾಜ್ಯದಲ್ಲಿಯೂ ಈ ಅಭಿಯಾನ ಅತ್ಯಂತ ಯಶಸ್ವಿಯಾಗಿ ನಡೆಯುತ್ತಿದೆ. ಜಿಲ್ಲಾ ಕಾಂಗ್ರೆಸ್ ಸಮಿತಿ ಈಗಾಗಲೇ ಒಂದು ಹಂತದ ಅಭಿ ಯಾನವನ್ನು ಅತ್ಯಂತ ಯಶಸ್ವಿಯಾಗಿ ಮುಗಿಸಿದ್ದು, ಇನ್ನೂ ಸಹ ಜಿಲ್ಲೆಯಲ್ಲಿ ಸಹಿ ಸಂಗ್ರಹ ಕಾರ್ಯ ಮುಂದುವರೆ ದಿದ್ದು, ಜಿಲ್ಲಾ ಕಾಂಗ್ರೆಸ್ ಹಿಂದುಳಿದ ವರ್ಗಗಳ ವಿಭಾಗವೂ ಸಹ ಇಡೀ ಜಿಲ್ಲೆಯಾದ್ಯಂತ 15000 ಸಹಿ ಸಂಗ್ರಹ ಮಾಡಿದೆ.
ಜಿಲ್ಲಾ ಕಾಂಗ್ರೆಸ್ ಪಕ್ಷದ ಕಛೇರಿಯಲ್ಲಿ ಸಹಿ ಸಂಗ್ರಹ ಪ್ರತಿಯನ್ನು ಜಿಲ್ಲಾ ಹಿಂದುಳಿದ ವರ್ಗಗಳ ವಿಭಾಗದ ಅಧ್ಯಕ್ಷ ಎಂ.ರಮೇಶ್ ಶಂಕರಘಟ್ಟ, ಪ್ರಧಾನ ಕಾರ್ಯದರ್ಶಿಗಳು ಹಾಗೂ ಆಡಳಿತ ಉಸ್ತುವಾರಿ ಎಸ್ ಟಿ ಹಾಲಪ್ಪ ಇವರಿಗೆ ಹಸ್ತಾಂತರಿಸಿದರು.
ಸಹಿ ಸಂಗ್ರಹದಲ್ಲಿ ಅತೀ ಹೆಚ್ಚು ಭದ್ರಾವತಿಯಿಂದ 5000 ಮತ್ತು ಸೊರಬದಿಂದ 3000 ಸಂಗ್ರಹವಾಗಿದೆ.
ಈ ಕಾರ್ಯಕ್ಕೆ ಸಹಕರಿಸಿದ ರಾಜ್ಯ ಒಬಿಸಿ ಅಧ್ಯಕ್ಷರು, ಶಿಕ್ಷಣ ಸಚಿವರು ಆದ ಎಸ್ ಮಧು ಬಂಗಾರಪ್ಪ ನವರಿಗೂ, ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಆರ್ ಪ್ರಸನ್ನ ಕುಮಾರ್ ರವರಿಗೂ, ಜಿಲ್ಲೆಯ ಎಲ್ಲಾ ಶಾಸಕರು ಗಳಿಗೆ, ವಿವಿಧ ನಿಗಮ ಮಂಡಳಿಯ ಅಧ್ಯಕ್ಷರುಗಳಿಗೆ ಹಾಗೂ ಕಾಂಗ್ರೆಸ್ ಮುಖಂಡರುಗಳಿಗೆ ಜಿಲ್ಲಾಧ್ಯಕ್ಷರು ಧನ್ಯವಾದಗಳು ಅರ್ಪಿಸಿದ್ದಾರೆ.
ಈ ಸಂದರ್ಭದಲ್ಲಿ ಕೆಪಿಸಿಸಿ ಓಬಿಸಿ ರಾಜ್ಯ ಸಂಯೋಜಕರಾದ ಜಿ.ಡಿ. ಮಂಜುನಾಥ್, ಪ್ರಧಾನ ಕಾರ್ಯದರ್ಶಿ ಯು.ಶಿವಾನಂದ,ಓಬಿಸಿ ಸಂಘಟನಾ ಕಾರ್ಯದರ್ಶಿ ಎಸ್.ಬಸವರಾಜ್, ಪ್ರಧಾನ ಕಾರ್ಯದರ್ಶಿ ಎಂ.ಡಿ.ರವಿ ಕುಮಾರ್, ಕಾರ್ಯದರ್ಶಿ ಸಿದ್ದರಾಮ ಮೊದಲಾದವರಿದ್ದರು.
Tags
ಶಿವಮೊಗ್ಗ ವರದಿ