ಭದ್ರಾವತಿ-ಸ್ವಾಸ್ಥ ಸಮಾಜದ ನಿರ್ಮಾಣ ದಲ್ಲಿ ವಿದ್ಯಾರ್ಥಿಗಳ ಪಾತ್ರ ಮುಖ್ಯ

ವಿಜಯ ಸಂಘರ್ಷ ನ್ಯೂಸ್ 
ಭದ್ರಾವತಿ: ಸ್ವಾಸ್ಥ ಸಮಾಜದ ನಿರ್ಮಾಣದಲ್ಲಿ ವಿದ್ಯಾರ್ಥಿಗಳ ಪಾತ್ರ ಮುಖ್ಯವಾಗಿದ್ದು, ದುಶ್ಚಟಗಳಿಗೆ ಬಲಿ ಯಾಗದೆ, ಸಮಾಜದಲ್ಲಿ ಬದುಕುವ ರೀತಿ, ದುಶ್ಚಟಗಳಿಂದ ಆಗುವ ದುಷ್ಪರಿಣಾಮಗಳಿಂದ ದೂರವಿರ ಬೇಕು ಎಂದು ಜನಪದ ಕಲಾವಿದ ತಮಟೆ ಜಗದೀಶ್ ಹೇಳಿದರು.

ಭದ್ರಾ ಕಾಲೋನಿಯ ಭದ್ರಾಪ್ರೌಢ ಶಾಲೆಯಲ್ಲಿ ಧರ್ಮಸ್ಥಳ ಗ್ರಾಮಾಭಿ ವೃದ್ಧಿ ಯೋಜನೆ. ಬಿ.ಸಿ.ಟ್ರಸ್ಟ್ ಭದ್ರಾವತಿ-2 ಯೋಜನಾ ಕಛೇರಿ ವತಿಯಿಂದ ಹಮ್ಮಿ ಕೊಳ್ಳಲಾಗಿದ್ದ ಸ್ವಾಸ್ಥ್ಯ ಸಂಕಲ್ಪ ಅರಿವು ಕಾರ್ಯಕ್ರಮ ದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಪಾಲ್ಗೊಂಡು ಜಾಗೃತಿ ಗೀತೆಗಳ ಮೂಲಕ ಅರಿವು ಮೂಡಿಸಿದರು.

ಶಾಲೆಯ ಮುಖ್ಯೋಪಾಧ್ಯಾಯ ಶೀವ್ಯಾನಾಯ್ಕ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ನಾಗತಿ ಬೆಳಗಲು ವಲಯದ ಮೇಲ್ವಿಚಾರಕಿ ಎಸ್.ದೀಪಿಕಾ, ಸೇವಾಪ್ರತಿ ನಿಧಿ ರಾಧಾ,ಒಕ್ಕೂಟದ ಪದಾಧಿಕಾರಿ ಪವಿತ್ರ, ಶಾಲಾ ಶಿಕ್ಷಕವೃಂದ ಮತ್ತು ವಿದ್ಯಾರ್ಥಿ/ವಿದ್ಯಾರ್ಥಿನಿಯರು ಉಪಸ್ಥಿತರಿದ್ದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು