ವಿಜಯ ಸಂಘರ್ಷ ನ್ಯೂಸ್
ಭದ್ರಾವತಿ: ಗೃಹರಕ್ಷಕ ದಳದ ವತಿ ಯಿಂದ ನ್ಯೂಟೌನ್ ಗೃಹರಕ್ಷಕ ದಳದ ಕಚೇರಿಯಲ್ಲಿ ಶಿವಮೊಗ್ಗ ರೆಡ್ ಕ್ರಾಸ್ ಸಂಜೀವಿನಿ ರಕ್ತ ಕೇಂದ್ರ ಹಾಗೂ ಜಿಲ್ಲಾ ಪೊಲೀಸ್ ನ ಸಹಯೋಗದಲ್ಲಿ 63 ನೇ ಸ್ವಯಂಪ್ರೇರಿತ ರಕ್ತದಾನ ಶಿಬಿರ ಆಯೋಜಿಸಲಾಗಿತ್ತು.
ಈ ಸಂದರ್ಭದಲ್ಲಿ ಪೊಲೀಸ್ ಇಲಾಖೆಯ ಸಂಚಾರಿ ಪೊಲೀಸ್ ಠಾಣೆಯ ಹೆಡ್ ಕಾನ್ಸ್ ಟಬಲ್ ಹಾಲೇಶಪ್ಪ, ಗೃಹ ರಕ್ಷಕ ದಳದ ಅಧಿಕಾರಿ ಜಗದೀಶ್ ನೇತೃತ್ವ ವಹಿಸಿದ್ದರು.
ಶಿಬಿರದಲ್ಲಿ ಗೃಹರಕ್ಷಕ ದಳದ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಸೇರಿದಂತೆ 17 ಜನ ರಕ್ತದಾನ ಮಾಡಿದ್ದಾರೆ.