ವಿಜಯ ಸಂಘರ್ಷ ನ್ಯೂಸ್
ಕೆ.ಆರ್.ಪೇಟೆ: ಪೌರಾಣಿಕ ನಾಟಕ ಗಳು ಭಾರತೀಯ ಸಾಂಸ್ಕೃತಿಕ ಪ್ರತೀಕ. ಪುರಾಣ ಪ್ರವಚನಗಳನ್ನು ಜನತೆಗೆ ತಲುಪಿಸುವಲ್ಲಿ ಪೌರಾಣಿಕ ನಾಟಕಗಳು ಮಹತ್ವದ ಪಾತ್ರ ವಹಿಸುತ್ತವೆ ಎಂದು ಸಮಾಜ ಸೇವಕ ಆರ್‌ಟಿಓ ಮಲ್ಲಿಕಾರ್ಜುನ್ ತಿಳಿಸಿದರು.
ಪಟ್ಟಣದ ಶ್ರೀರಂಗ ಚಿತ್ರಮಂದಿರ ಆವರಣದಲ್ಲಿ ಡಾ.ರಾಜ್ ರಂಗ ಕಲಾ ವೇದಿಕೆ ವತಿಯಿಂದ ನಡೆಯುತ್ತಿರುವ ಜಿಲ್ಲಾ ಮಟ್ಟದ ಯಶಸ್ವಿ ನಾಟಕೋತ್ಸ ವದಲ್ಲಿ ಕೃಷ್ಣಾಪುರ ಗ್ರಾಮದ ಚಿಕ್ಕಮ್ಮ ದೊಡ್ಡಮ್ಮ ಹಾಗೂ ಭೀಮ್ ಸರ್ಕಲ್ ಕೃಪಾಪೋಷಿತ ನಾಟಕ ಮಂಡಳಿ ಯಿಂದ ಕುರುಕ್ಷೇತ್ರ ಅಥವಾ ಧರ್ಮರಾಜ್ಯ ಸ್ಥಾಪನೆ ಪೌರಾಣಿಕ ನಾಟಕ ಪ್ರದರ್ಶನಕ್ಕೆ ಚಾಲನೆ ನೀಡಿ ಮಾತನಾಡಿದರು.
ಕನ್ನಡ ರಾಜ್ಯೋತ್ಸವದ ಪ್ರಯುಕ್ತ ಡಾ. ರಾಜ್ ರಂಗ ಕಲಾ ವೇದಿಕೆ ಏರ್ಪಡಿಸಿರುವ ರಂಗಮಂದಿರದಲ್ಲಿ ಕಳೆದ ವಾರದಿಂದಲೂ ಸುಂದರ ಪೌರಾಣಿಕ ನಾಟಕ ಕಲಾವಿದರಿಂದ ಯಶಸ್ವಿಗೊಳಿಸಿದೆ. ನಾಟಕ ಕಲೆ ಹಾಗೂ ಕಲಾವಿದರನ್ನು ಉಳಿಸಿ ಬೆಳೆಸಬೇಕಾದ ಮಹತ್ತರವಾದ ಜವಾಬ್ದಾರಿ ಕಲಾ ಪೋಷಕರ ಮೇಲಿದೆ ಎಂದ ಅವರು,ಸಕ್ಕರೆ ನಾಡು ಮಂಡ್ಯ ಜಿಲ್ಲೆಯ ಕೆ.ಆರ್ ಪೇಟೆ ತಾಲೂಕು ಸಾಂಸ್ಕೃತಿಕ ಹಾಗೂ ಜಾನಪದ ಕಲೆಗಳ ತವರು, ಅದರಲ್ಲೂ ಪೌರಾಣಿಕ ನಾಟಕಗಳಿಗೆ ಇಲ್ಲಿ ಕೊರತೆ ಇಲ್ಲ. ಹಲವು ವರ್ಷಗಳಿಂದ ವರ್ಷಕ್ಕೆ ನೂರಾರು ಪೌರಾಣಿಕ ನಾಟಕಗಳ ಪ್ರದರ್ಶನಕ್ಕೆ ಮೀಸಲಾಗಿರುತ್ತದೆ. ಪೌರಾಣಿಕ ನಾಟಕಕ್ಕೆ ಸಿದ್ಧವಾದ ರಸ್ತೆ ಕಡೆಗೆ ತಿರುಗಿದರೆ ಸಾಕು, ಕಂದಪದ ಗಳು ನಾಲಗೆ ಮೇಲೆ ಬರುತ್ತವೆ. ಕಲಾವೇದಿಕೆಯಿಂದ ತೂರಿ ಬರುವ ಹಾರ್ಮೋನಿಯಂ, ತಬಲಾ, ಕ್ಲಾರಿಯೋನೆಟ್ ಸದ್ದು ದಾರಿಯಲ್ಲಿ ಓಡಾಡವವರ ತಲೆದೂಗಿಸುತ್ತವೆ. ತಿಂಗಳುಗಟ್ಟಲೇ ಪೌರಾಣಿಕ ನಾಟಕೋತ್ಸವ,ನಾಟಕ ಸ್ಪರ್ಧೆಗಳು ಅಲ್ಲಿ ಸಾಮಾನ್ಯವಾಗಿರುತ್ತವೆ. ನಾಟಕ ವೀಕ್ಷಿಸಿದ ಪ್ರತಿಯೊಬ್ಬರೂ ಮೌಲ್ಯ ಆಧಾರಿತ ಅಂಶಗಳನ್ನ ಮೈಗೂಡಿಸಿ ಕೊಂಡು ಸದೃಢ ಸಮಾಜಕ್ಕಾಗಿ ಜೀವಿಸಬೇಕು ಎಂದು ಸಲಹೆ ನೀಡಿದರು.
ಮನ್ಮುಲ್ ನಿರ್ದೇಶಕ ಎಂ.ಬಿ ಹರೀಶ್ ನಾಡಿನ ಸಂಸ್ಕೃತಿ, ಪರಂಪರೆ ಜೀವನದ ಮೌಲ್ಯದೊಂದಿಗೆ ಸಮಾಜಕ್ಕೆ ಒಳ್ಳೆಯ ಸಂದೇಶ ಮನೋರಂಜನೆ ನೀಡುವ ಸಾಮಾಜಿಕ ಮಾಧ್ಯಮವೇ ನಾಟಕ ಎಂದ ಅವರು ಹಿಂದಿನ ಕಾಲದಲ್ಲಿ ಚಲನಚಿತ್ರ, ಟಿವಿ ಮಾಧ್ಯಮ ಇರಲಿಲ್ಲ. ನಾಟಕಗಳೇ ಬಹುದೊಡ್ಡ ಮನರಂಜನೆ ಮಾಧ್ಯಮ ಗಳಾಗಿದ್ದವು. ಸಾವಿರಾರು ರಂಗ ಕಲಾವಿದರು ನಾಟಕವನ್ನು ಮುಖ್ಯ ಭೂಮಿಕೆಯಾಗಿಸಿಕೊಂಡಿದ್ದರು.ಬದಲಾದ ಪರಿಸ್ಥಿತಿಯಿಂದ ನಾಟಕ ಕಂಪನಿ ಮತ್ತು ಕಲಾವಿದರಿಗೆ ಹಿನ್ನಡೆಯಾಗಿದೆ. ನಾಟಕಗಳನ್ನು ಪ್ರೋತ್ಸಾಹಿಸುವ ಮೂಲಕ ನಾಟಕ ಸಂಸ್ಕೃತಿಯನ್ನು ಉಳಿಸಬೇಕು ಎಂದರು.
ಬಳಿಕ ಮಾತನಾಡಿದ ಟಿ.ಎ.ಪಿ.ಸಿ.ಎಂ. ಎಸ್ ನಿರ್ದೇಶಕ ಬಿ.ಎಂ ಕಿರಣ್ ಜನರ ಜೀವನದ ಮೌಲ್ಯಗಳನ್ನು ಪಾತ್ರಧಾರಿ ಗಳ ಮೂಲಕ ಕಾಣುತ್ತಿರುವ ನಾವು ಸಾಧನೆ ಮಾಡಲಾಗ ದಿದ್ದರೂ ನ್ಯಾಯ, ನೀತಿ, ಧರ್ಮ ಹಾಗೂ ಸತ್ಯದ ಮಾರ್ಗ ದಲ್ಲಿಯೇ ಸಾಗುವ ಮೂಲಕ ಗುರಿ ಮುಟ್ಟೋಣ ಎಂದು ಕರೆ ನೀಡಿದರು.
ಕುರುಕ್ಷೇತ್ರ ನಾಟಕದಲ್ಲಿ ದುರ್ಯೋಧನ ಪಾತ್ರದಲ್ಲಿ ಕೃಷ್ಣಾಪುರ ಗಿರೀಶ್, ಶ್ರೀ ಕೃಷ್ಣ ಕೆ.ಜೆ ರಾಮಸ್ವಾಮಿ, ಕರ್ಣ ರುದ್ರೇಶ್, ದುಶ್ಯಾಸನ ಪಾತ್ರದಲ್ಲಿ ಮಹೇಂದ್ರ ಭೀಷ್ಮ ಕುಮಾರ್ ಎಲ್ಲಾ ಪಾತ್ರಧಾರಿಗಳು ಅದ್ಭುತ ಕಲಾ ಹೊರಹಾಕಿ ಕಲಾ ರಸಿಕರ ಮೆಚ್ಚುಗೆಗೆ ಪಾತ್ರರಾದರು.
ಈ ಸಂದರ್ಭದಲ್ಲಿ ಟಿಎಪಿಸಿಎಂಎಸ್ ಬಿ.ಎಂ ಕಿರಣ್,ಗ್ರಾ.ಪಂ ಕೃಷ್ಣಪುರ ಗಿರೀಶ್, ಉಪನ್ಯಾಸಕ ಮಹೇಶ, ಚಿಕ್ಕಳಲೆ ರುದ್ರೇಶ್, ಗೋವಿಂದನಹಳ್ಳಿ ರೇಣುಕಾಸ್ವಾಮಿ, ಬೋಳಮಾರನಹಳ್ಳಿ ಕುಮಾರ್, ಕೃಷ್ಣಪುರ ಲೋಕೇಶ್, ಸಂಪತ್ ಕುಮಾರ್, ಶಂಕರ್ ನಾಯ್ಕ, ಮಂಜುನಾಥ, ಜಯಣ್ಣ, ರಾಮಸ್ವಾಮಿ, ಚಿಕ್ಕೆಗೌಡ, ಮಹೇಂದ್ರ, ಪ್ರಶಾಂತ್, ಸೇರಿದಂತೆ ಕಲಾಪೋಷಕರಿದ್ದರು.
*✍️ಸುದ್ದಿಯೊಂದಿಗೆ ಮನು ಮಾಕವಳ್ಳಿ ಕೆ ಆರ್ ಪೇಟೆ*
ಸುದ್ದಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: 9743225795
Tags
ಕೆ ಆರ್ ಪೇಟೆ ವರದಿ