ವಿಜಯ ಸಂಘರ್ಷ ನ್ಯೂಸ್
ಭದ್ರಾವತಿ: ನಗರದ ಜನ್ನಾಪುರ ಫಿಲ್ಟರ್ ಶೆಡ್ ಸಮೀಪದ ವಿಐಎಸ್ಎಲ್ ಜಾಗದಲ್ಲಿ ಸಮುದಾಯ ಭವನ ನಿರ್ಮಿಸಿರುವ ಅಕ್ರಮ ಕಟ್ಟಡಕ್ಕೆ ವಿದ್ಯುತ್ ಸಂಪರ್ಕ ಕಲ್ಪಿಸಬಾರದು ಎಂದು ಆಗ್ರಹಿಸಿ ಮೆಸ್ಕಾಂ ಕಚೇರಿ ಮುಂಭಾಗ ಸಾಮಾಜಿಕ ಹೋರಾಟಗಾರ ಶಶಿ ಕುಮಾರ್ ಎಸ್ ಗೌಡ ನೇತೃತ್ವದಲ್ಲಿ ವಿವಿಧ ಸಂಘಟನೆಗಳ ಸಹಕಾರದಲ್ಲಿ ಮಂಗಳವಾರ ಪ್ರತಿಭಟನೆ ಹಮ್ಮಿಕೊಳ್ಳಲಾಗಿತ್ತು.
ವಿಐಎಸ್ಎಲ್ ಜಾಗದಲ್ಲಿ ಕೆಲವು ಪ್ರಭಾವಿಗಳು ಸಮುದಾಯ ಭವನ ನಿರ್ಮಿಸಿದ್ದು ಈ ಭವನಕ್ಕೆ ಯಾವುದೇ ದಾಖಲೆ ಇರುವುದಿಲ್ಲ. ಸದರಿ ಜಾಗವು ಸಮುದಾಯ ಭವನವನ್ನು ವಿಐಎಸ್ಎಲ್ ಗೆ ಸೇರಿದ್ದು, ಸಂಬಂಧಿತ ಅಧಿಕಾರಿಗಳು ವಶಕ್ಕೆ ಪಡೆದು ಸಾರ್ವಜನಿಕರಿಗೆ ರಿಯಾಯಿತಿ ದರದಲ್ಲಿ ನೀಡುವುದು ಅಥವಾ ಕಟ್ಟಡ ದ್ವoಸಗೊಳಿಸಲು ಆಗ್ರಹಿಸಿ ನಿರಂತರ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ.
ಈ ಹಿನ್ನೆಲೆ ಯಲ್ಲಿ ಮೆಸ್ಕಾಂ ಇಲಾಖೆಯು ಯಾವುದೇ ಕಾರಣಕ್ಕೂ ವಿದ್ಯುತ್ ಸಂಪರ್ಕ ಕಲ್ಪಿಸಿ ಕೊಡಲು ಮುಂದಾಗಬಾರದು. ಅಕಸ್ಮಾತ್ ಸಂಪರ್ಕ ನೀಡಿದ್ದಲ್ಲಿ ತಮ್ಮ ಕಚೇರಿ ಮುಂಭಾಗ ಉಗ್ರ ಪ್ರತಿಭಟನೆ ನಡೆಸಲಾಗುವುದು ಎಂದು ಮನವಿ ಪತ್ರದಲ್ಲಿ ಒತ್ತಾಯಿಸಿ ಮೆಸ್ಕಾಂ ಸಹಾಯಕ ಕಾರ್ಯಪಾಲಕ ಅಭಿಯಂತರಾದ ಬೀರಪ್ಪ ರವರಿಗೆ ಮನವಿ ಸಲ್ಲಿಸಿದರು.
ಪ್ರತಿಭಟನೆಯಲ್ಲಿ ಕರುನಾಡ ಹಿತರಕ್ಷಣಾ ಸಮಿತಿ ರಾಜ್ಯಾಧ್ಯಕ್ಷ ವೈ.ಶಶಿಕುಮಾರ್, ಪ್ರಮುಖರಾದ ಮಹಾದೇವಿ, ಇಂದ್ರಮ್ಮ, ದಿವ್ಯಶ್ರೀ, ಪ್ರಕಾಶ್ ಸೇರಿದಂತೆ ಅನೇಕರು ಭಾಗವಹಿಸಿದ್ದರು.