ಶೈಕ್ಷಣಿಕ ಸಂಸ್ಥೆಗಳೊoದಿಗೆ ಸೈಲ್-ವಿಐಎಸ್ಎಲ್ ಸಂವಹನ

ವಿಜಯ ಸಂಘರ್ಷ ನ್ಯೂಸ್ 
ಭದ್ರಾವತಿ: ಕೊಲ್ಲಾಪುರದ ಸಂಜಯ್ ಘೋಡಾವತ್ ವಿಶ್ವವಿದ್ಯಾಲಯದ ಎಲೆಟ್ರಾನಿಕ್ ಮತ್ತು ಕಮ್ಯುನಿಕೇಷನ್ ಎಂಜಿನಿಯರಿoಗ್ 32 ವಿದ್ಯಾರ್ಥಿ ಗಳೊಂದಿಗೆ ಕೈಗಾರಿಕೆಗಳ ಕುರಿತು ಸಂವಹನ ಕಾರ್ಯಕ್ರಮದ ನಡೆಯಿತು.

ಇದರ ಅಂಗವಾಗಿ ಸೈಲ್ ಆಡಳಿತದ ಪ್ರೈಮರಿಮಿಲ್, ಬಾರ್ ಮಿಲ್, ಹೀಟ್ ಟ್ರೀಟ್‌ಮೆಂಟ್ ಶಾಪ್, ಫೋರ್ಜ್ ಪ್ಲಾಂಟ್ ಮತ್ತು ಮಿಶಿನ್ ಶಾಪ್ ಸಂವಹನದಲ್ಲಿ ಭಾಗಿಯಾಗಿ ತಂತ್ರಜ್ಞ ರಿoದ ಮಾಹಿತಿ ಪಡೆದು ಮಾನವ ಸಂಪನ್ಮೂಲ ಇಲಾಖೆಯ ಅಧಿಕಾರಿ ಗಳೊಂದಿಗೆ ಸಂವಹನ ನಡೆಸಿದರು.

ಸೈಲ್ ಆಡಳಿತಕ್ಕೆ ಅವಕಾಶ ಕಲ್ಪಿಸಿದ ಸಂಜಯ್ ಘೋಡಾವತ್ ವಿಶ್ವವಿದ್ಯಾ ಲಯದ ಆಡಳಿತ ಮಂಡಳಿ ಮತ್ತು ಅಧ್ಯಾಪಕರು ಹಾಗೂ ವಿದ್ಯಾರ್ಥಿಗಳಿಗೆ ಧನ್ಯವಾದ ಅರ್ಪಿಸಲಾಯಿತು.

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು