ವಿಜಯ ಸಂಘರ್ಷ ನ್ಯೂಸ್
ಭದ್ರಾವತಿ: ತಾಲ್ಲೂಕಿನ ಬಿಳಿಕಿ ಗ್ರಾಮ ಪಂಚಾಯಿತಿ ನವಲೇ ಬಸಾಪುರ ಗ್ರಾಮದಲ್ಲಿ ಅಕ್ರಮವಾಗಿ ಕಟ್ಟಡ ನಿರ್ಮಾಣ ಮಾಡುತ್ತಿರುವ ವ್ಯಕ್ತಿಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸಿ ನ್ಯಾಯ ಒದಗಿಸುವಂತೆ ಆಗ್ರಹಿಸಿ ತಾಲ್ಲೂಕು ಪಂಚಾಯಿತಿ ಮುಂಭಾಗದಲ್ಲಿ ಕುಟುಂಬಸ್ಥರಿಂದ ಪ್ರತಿಭಟನೆ ನಡೆಸಲಾಯಿತು.
ನವಲೇ ಬಸಾಪುರ ಗ್ರಾಮದಲ್ಲಿ ಕುಂಟ ವೆಂಕಟಪ್ಪ ಬಿನ್ ಗುರುವಾ ಭೋವಿ ರವರ ಹೆಸರಿನಲ್ಲಿ ಖಾತೆ ಸಂಖ್ಯೆ : 52 ರಲ್ಲಿ 160*40 ವಿಸ್ತೀರ್ಣದ ನಿವೇಶನ ವಿದ್ದು,ಇದೇ ಗ್ರಾಮ ವಾಸಿ ಲೇಟ್ ಬಸಪ್ಪ ಬಿನ್ ಬಸಪ್ಪ ಎಂಬುವವರ ಹೆಸರಿನಲ್ಲಿ ಖಾತೆ ಇದೆ ಎಂದು ಪೌತಿ ಖಾತೆ ಮಾಡಿಸದೆ ಮನೆ ನಿರ್ಮಾಣ ಮಾಡುತ್ತಿದ್ದ ಬಗ್ಗೆ, ಬಿಳಿಕಿ ಗ್ರಾಮ ಪಂಚಾಯಿತಿ ಮತ್ತು ತಾಲ್ಲೂಕು ಪಂಚಾಯಿತಿ ಅಧಿಕಾರಿಗಳಿಗೆ ದೂರು ಸಲ್ಲಿಸಲಾಗಿತ್ತು.
ಆದರೆ ಇದುವರೆಗೂ ಸಂಬಂಧಪಟ್ಟ ಪಂಚಾಯತ್ ಅಧಿಕಾರಿಗಳು ಯಾವುದೇ ಕ್ರಮ ಕೈಗೊಂಡಿರುವುದಿಲ್ಲ. ಪ.ಜಾತಿಗೆ ಸೇರಿರುವ ನಾವು ಅನೇಕ ಬಾರಿ ಮನವಿ ಮಾಡಿದರು ಸ್ಪಂದಿಸದ ಅಧಿಕಾರಿಗಳ ಕ್ರಮವನ್ನು ಖಂಡಿಸಿ ಹಾಗೂ ನಮ್ಮ ಅಜ್ಜನ ಹೆಸರಿನ ದಾಖಲೆಯ ಪ್ರಕಾರ ನಮ್ಮ ಸ್ವತ್ತನ್ನು ನಮಗೆ ದೊರಕಿಸಿಕೊಡಬೇಕೆಂದು ತಹಸೀಲ್ದಾರ್ ರವರ ಮೂಲಕ ಮುಖ್ಯಮಂತ್ರಿಗಳಿಗೆ ಸಲ್ಲಿಸಿದ ಮನವಿ ಪತ್ರದಲ್ಲಿ ಒತ್ತಾಯಿಸಲಾಯಿತು.
ಮಾನವ ಹಕ್ಕುಗಳ ಹೋರಾಟ ಸಮಿತಿ ಅಧ್ಯಕ್ಷ ಬಿ ಎನ್ ರಾಜು ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ಕೃಷ್ಣಮೂರ್ತಿ ಕುಟುಂಬಸ್ಥರು ಪಾಲ್ಗೊಂಡಿದ್ದರು.
Tags
ಭದ್ರಾವತಿ ಸುದ್ದಿ