ಮಕ್ಕಳ ದಿನಾಚರಣೆಯ ಸಂಭ್ರಮಕ್ಕೆ ಪೋಷಕ -ಶಿಕ್ಷಕರ ಸಮಾಗಮದ ಸಡಗರ

ವಿಜಯ ಸಂಘರ್ಷ ನ್ಯೂಸ್ 
ಭದ್ರಾವತಿ: ತಾಲ್ಲೂಕಿನ ಯರೇಹಳ್ಳಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಯಲ್ಲಿ ಶುಕ್ರವಾರ ಮಕ್ಕಳ ದಿನಾಚರಣೆಯ ಸಂಭ್ರಮಕ್ಕೆ ಪೋಷಕ -ಶಿಕ್ಷಕರ ಸಮಾಗಮದ ಸಡಗರದಿಂದ ಕೂಡಿತ್ತು.

ಶಾಲೆಯಲ್ಲಿ ನಿತ್ಯ ಗಾದೆ, ವಾರ್ತೆ, ಒಗಟು, ದಿನಕ್ಕೊಂದು ಪ್ರಶ್ನೆ, ದಿನ ಕ್ಕೊಂದು ಪುಸ್ತಕ ಪರಿಚಯದೊಂದಿಗೆ ಆರಂಭ ವಾಗುವ ಶಾಲೆಯಲ್ಲಿ ಸಂಜೆ ವರೆಗೂ ಕಲಿಕೆಯ ಕಲರವ ನಡೆಯುತ್ತಲೇ ಇರುತ್ತದೆ.ಇದರಿಂದ
ಶಾಲೆಯ ಪ್ರಗತಿಯ ಹೆಜ್ಜೆ ಗುರುತು ರಾಜ್ಯಾ ದ್ಯಂತ ಸಾರಿ ಹೇಳುವಂತಾಗಿದೆ ಎಂದು ಮುಖ್ಯ ಶಿಕ್ಷಕ ಕೋಗಲೂರು ತಿಪ್ಪೇಸ್ವಾಮಿ ಹೇಳಿದರು.

ಶಾಲೆಯಲ್ಲಿ ನಲಿಕಲಿ, ಸಮೃದ್ಧ ಕಲಿಕೆ, ಎಲ್ ಕೆ ಜಿ ಯಿಂದ ಪರಿಸರ ಸ್ನೇಹಿ ಕಲಿಕೆ, ಉನ್ನತ ತರಗತಿಗಳ ಪ್ರಯೋಗ ಶೀಲ ಮಾದರಿ ಕಲಿಕೆಗಳ ಉತ್ಸುಕತೆ ಮಕ್ಕಳಲ್ಲಿ ಮಾದರಿಯಾಗಿದೆ. 

ಶಾಲೆಗೆ ಗ್ರಾನೈಟ್ ಅಳವಡಿಕೆ, ಬಣ್ಣದ ವ್ಯವಸ್ಥೆ, ಶೀಟ್ ವ್ಯವಸ್ಥೆ, ಶೌಚಾಲಯ, ಕಾಂಪೌಂಡ್ ಮೊದಲಾದ ಕಾಮಗಾರಿ ಗಳ ಪ್ರಗತಿಯಿಂದ ಶಾಲೆ ಭೌತಿಕ ಹಾಗೂ ಬೌದ್ಧಿಕ ಪ್ರಗತಿ ಯಾಗಿದ್ದು, ಉತ್ತಮ ಶಾಲೆ ಗೌರವ ಸಿಕ್ಕ ಮಾಹಿತಿ ಹಂಚಿಕೊಂಡರು.

ಶಿಕ್ಷಕಿ ವಾಣಿಶ್ರೀ ಬಾಲ್ಯ ವಿವಾಹದ
ದುಷ್ಪರಿಣಾಮ, ಪೋಸ್ಕೋ ಬಗ್ಗೆ ಕಲಿಕಾ ವಿಧಾನಗಳ ಬಗ್ಗೆ ಮಾಹಿತಿ ನೀಡಿದರು.

ಪ್ರತಿಭಾ ಕಾರಂಜಿ ಹಾಗೂ ಕ್ರೀಡಾ ಕೂಟದ ವಿಜೇತರಿಗೆ ಬಹುಮಾನ ವಿತರಿಸಲಾಯಿತು.

ವೇದಿಕೆಯಲ್ಲಿ ಗ್ರಾಮ ಪಂಚಾಯತಿ ಅಧ್ಯಕ್ಷರಾದ ಮಾಲತಿ, ಉಪಾಧ್ಯಕ್ಷ ರಾದ ಶೋಭಾ,ಸದಸ್ಯರಾದ ಬಸವರಾಜ್, ಪರುಶುರಾಮ್, ವರ್ಣ, ರೂಪ, ಹೇಮಾವತಿ, ಶ್ರೀನಿವಾಸ್, ಲೀಲಾವತಿ,ಎಸ್ ಡಿ ಎಂ ಸಿ ಅಧ್ಯಕ್ಷ ಲೋಕೇಶ್, ಅರಿವು ಕೇಂದ್ರದ ಮೇಲ್ವಿಚಾರಕಿ ಮಾಲಾ, ಸಿಆರ್ ಪಿ ಲಲಿತ ಕುಮಾರಿ ಇತರರಿದ್ದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು