ವಿಜಯ ಸಂಘರ್ಷ ನ್ಯೂಸ್
ಭದ್ರಾವತಿ: ಜಿಲ್ಲೆಯ ವಿಶೇಷಚೇತನ ಮಕ್ಕಳ ಮುಖದಲ್ಲಿ ನಗು ಮೂಡಿಸಲು ಮತ್ತು ಅವರನ್ನು ಸಮಾಜದ ಮುಖ್ಯ ವಾಹಿನಿಗೆ ತರಲು SAIL-VISL ಎಲ್ಲಾ ಪ್ರಯತ್ನಗಳನ್ನು ಮಾಡಲಿದೆ ಮತ್ತು ಭವಿಷ್ಯದಲ್ಲಿ ಹೆಚ್ಚು ಸಾಮಾಜಿಕವಾಗಿ ಪ್ರಯೋಜನಕಾರಿಯಾದ CSR ಚಟುವಟಿಕೆಗಳನ್ನು ಯೋಜಿಸಲಾಗು ವುದು ಎಂದು ಕಾರ್ಖಾನೆಯ ಕಾರ್ಯ ಪಾಲಕ ನಿರ್ದೇಶಕ ಅನುಪ್ ಕುಮಾರ್ ಹೇಳಿದರು.
ಶುಕ್ರವಾರ ಮಕ್ಕಳ ದಿನಾಚರಣೆಯ ಅಂಗವಾಗಿ ಭದ್ರಾ ಅತಿಥಿಗೃಹದಲ್ಲಿ ಹಮ್ಮಿಕೊಳ್ಳಲಾಗಿದ್ದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಕ್ಷೇತ್ರ ಶಿಕ್ಷಣಾಧಿಕಾರಿ ಎ.ಕೆ. ನಾಗೇಂದ್ರಪ್ಪ ವಿಶೇಷಚೇತನ ಮಕ್ಕಳು ಉತ್ತಮ ಜೀವನ ನಡೆಸಲು ಸಹಾಯ ಮಾಡುವ ಉಪಕ್ರಮಗಳನ್ನು SAIL-VISL ಕಳೆದ ಕೆಲವು ವರ್ಷಗಳಿಂದ ಜಿಲ್ಲೆಯಾದ್ಯಂತ ನಿರಂತರ ವಾಗಿ ನೀಡುತ್ತಿರುವ ಕಾರಣ ಆಡಳಿತ ಮಂಡಳಿಗೆ ಧನ್ಯವಾದ ಅರ್ಪಿಸಿ, ಮುಂಬರುವ ದಿನಗಳಲ್ಲಿಯೂ ಸಹ ಇಂತಹ ಹೆಚ್ಚಿನ ಸಹಾಯ ವಿಸ್ತರಿಸ ಲಾಗುವುದೆಂದು ಆಶಿಸಿದರು.
ಹಣಕಾಸು ಮತ್ತು ಲೆಕ್ಕ ವಿಭಾಗದ ಮಹಾ ಪ್ರಬಂಧಕಿ ಶೋಭಾ ಶಿವಶಂಕರನ್, ಹೆಚ್ಚುವರಿ ಮುಖ್ಯ ವೈದ್ಯಾಧಿಕಾರಿಗಳಾದ ಡಾ: ಸುಜೀತ್ ಕುಮಾರ್ ಡಾ:ಎಸ್.ಎನ್. ಸುರೇಶ್, ಅಧಿಕಾರಿಗಳ ಸಂಘದ ಉಪಾಧ್ಯಕ್ಷ ಎಮ್.ಎಲ್. ಯೋಗೀಶ, ಕಿರಿಯ ಪ್ರಬಂಧಕ (HR & HR-L & D) ಕ್ಷೇತ್ರ ಸಂಪನ್ಮೂಲ ಸಂಯೋಜಕ ತೀರ್ಥಪ್ಪ, ಶಿಕ್ಷಣ ಸಂಯೋಜಕ ದಯಾನಂದ ವಿಶೇಷಚೇತನ ಮಕ್ಕಳಿಗೆ ಶ್ರವಣ ಸಾಧನ, ವೀಲ್‌ಚೇರ್ ಗಳು, MR ಕಿಟ್‌ಗಳು, CP ಚೇರ್‌ಗಳು, ರೋಲೇಟರ್‌ಗಳನ್ನು ಹಸ್ತಾಂತರಿಸಿದರು.
ಎಮ್.ಎಲ್. ಯೋಗೀಶ ಮಾತನಾಡಿ, ಕಳೆದ ಮೂರು ವರ್ಷಗಳಲ್ಲಿ ಶಿವಮೊಗ್ಗ ಜಿಲ್ಲೆಯ 400ಕ್ಕೂ ಹೆಚ್ಚು ವಿಶೇಷ ಚೇತನ ವಿದ್ಯಾರ್ಥಿಗಳು SAIL-VISL ನ CSR ಅಡಿಯಲ್ಲಿ ಸುಮಾರು 25 ಲಕ್ಷ ರೂಪಾಯಿ ಮೌಲ್ಯದ ವಿಶೇಷ ಸಹಾಯಕ ಸಾಧನಗಳನ್ನು ಪಡೆದಿದ್ದಾರೆ ಎಂದು ತಿಳಿಸಿದರು.
ಮಾನವ ಸಂಪನ್ಮೂಲ ಮತ್ತು ಸಾರ್ವಜನಿಕ ಸಂಪರ್ಕ ಮಹಾ ಪ್ರಬಂಧಕ ಎಲ್. ಪ್ರವೀಣ್ ಕುಮಾರ್ ವಂದಿಸಿದರು.