ಭದ್ರಾವತಿ-ಬಿಳಿಕಿ ಗ್ರಾ ಪಂವ್ಯಾಪ್ತಿಯಲ್ಲಿ ಶುದ್ಧ ಕುಡಿಯುವ ನೀರು ಸರಬರಾಜಿಗಾಗಿ ಮನವಿ

ವಿಜಯ ಸಂಘರ್ಷ ನ್ಯೂಸ್ 
ಭದ್ರಾವತಿ: ತಾಲೂಕಿನ ದೊಣಬಘಟ್ಟ ಹಾಗೂ ಬಿಳಿಕಿ ಗ್ರಾಮ ಪಂಚಾಯತಿ
ವ್ಯಾಪ್ತಿಯಲ್ಲಿ ಬರುವ ಹಳ್ಳಿಗಳಿಗೆ ಶುದ್ಧ ಕುಡಿಯುವ ನೀರು ಸರಬರಾಜು ಮಾಡಲು ಯೋಜನೆ ರೂಪಿಸಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸುವಂತೆ ಸಂಬಂಧಪಟ್ಟವರಿಗೆ ನಿರ್ದೇಶನ ನೀಡುವಂತೆ ಕರ್ನಾಟಕ ಗ್ರಾಮೀಣ ಕುಡಿಯುವ ನೀರು ಸರಬರಾಜು ಹಾಗೂ ನೈರ್ಮಲ್ಯ ಇಲಾಖೆ ಮುಖ್ಯ ಅಭಿಯಂತರ ಅಶೋಕ್ ಎಲ್. ವಾಸನದ್ ಅವರಿಗೆ ನಗರದ ಜನ್ನಾಪುರ ಶ್ರೀ ಡಿ.ದೇವರಾಜ ಅರಸು ಜನಸ್ಪಂದನ ಸೇವಾ ಟ್ರಸ್ಟ್ ವತಿಯಿಂದ ಮನವಿ ಸಲ್ಲಿಸಿ ಒತ್ತಾಯಿಸಲಾಗಿದೆ.

ಟ್ರಸ್ಟ್ ಛೇರ್ಮನ್ ಹಾಗೂ ನಗರಸಭೆ ಸ್ಥಾಯಿ ಸಮಿತಿ ಮಾಜಿ ಅಧ್ಯಕ್ಷ ಆ‌ರ್. ವೇಣುಗೋಪಾಲ್ ಮನವಿ ಸಲ್ಲಿಸಿದ್ದು, ಪ್ರಸ್ತುತ ದೊಣಬಘಟ್ಟ ಮತ್ತು ಬಿಳಿಕಿ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಬರುವ ಹಳ್ಳಿ ಗಳಿಗೆ ಬಿಳಿಕಿ ಕೆರೆಯಿಂದ ಕುಡಿಯುವ ನೀರು ಸರಬರಾಜಾಗು ತ್ತಿದ್ದು, ಈ ಕೆರೆಯಲ್ಲಿ ಮೀನು ಗಾರಿಕೆ ಇಲಾಖೆಯಿಂದ ಮೀನು ಸಾಕಾಣಿಕೆ ಮಾಡುತ್ತಿದ್ದು, ಕೆರೆಯಲ್ಲಿ ಕಲ್ಮಶದಿಂದ ಕೂಡಿದ ನೀರು ಸಂಗ್ರಹಣೆ ಯಾಗಿರು ತ್ತದೆ. ಅಲ್ಲದೆ ಈ ಕೆರೆಗೆ ಸಮೀಪದ ಜಮೀನು ಗಳಿಂದ ರಾಸಾಯನಿಕ ಔಷಧಗಳು ಸೇರ್ಪಡೆ ಗೊಳ್ಳುವ ಸಾಧ್ಯತೆಗಳು ಹೆಚ್ಚಾಗಿವೆ. ಗ್ರಾಮಸ್ಥರು ಈ ಕೆರೆಯ ನೀರು ವಾಸನೆ ಯಿಂದ ಕೂಡಿದೆ ಎಂದು ಆರೋಪಿಸುವ ಜೊತೆಗೆ ಕುಡಿಯಲು ನೀರನ್ನು ನಗರ ಪ್ರದೇಶಗಳಿಂದ ತರಲಾಗುತ್ತಿದೆ ಎಂದು ಟ್ರಸ್ಟ್‌ಗೆ ಮಾಹಿತಿ ನೀಡಿದ್ದಾರೆಂದು ಮನವಿಯಲ್ಲಿ ತಿಳಿಸಿದ್ದಾರೆ.

ಬಿಳಿಕಿ ಗ್ರಾಮ ಪಂಚಾಯತಿ ವ್ಯಾಪ್ತಿ ಯಲ್ಲಿ ಬರುವ ಹಳ್ಳಿಗಳಿಗೆ ಶುದ್ಧವಾದ ಕುಡಿಯುವ ನೀರು ಸರಬರಾಜು ಮಾಡಲು ಪ್ರಸ್ತುತ ಬಿಳಿಕಿ ಕೆರೆಯ ನೀರಿನ ಬದಲಿಗೆ ಸಮೀಪದ ಭದ್ರಾ ನದಿಯಿಂದ ನೀರನ್ನು ಕೊಳವೆ ಮಾರ್ಗ ಗಳ ಮೂಲಕ ಸರಬರಾಜು ಮಾಡಲು ಹಾಗೂ ಗ್ರಾಮಪಂಚಾಯತಿ ವ್ಯಾಪ್ತಿ ಯಲ್ಲಿ ಅಗತ್ಯವಿರುವ ಹೆಚ್ಚುವರಿ ಕುಡಿಯುವ ನೀರಿನ ಟ್ಯಾಂಕುಗಳ ನಿರ್ಮಾಣ ಸೇರಿದಂತೆ ಇನ್ನಿತರ ಕಾಮಗಾರಿಗಳ ನಿರ್ವಹಣೆಗೆ ಯೋಜನೆ ರೂಪಿಸುವ ಮೂಲಕ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸು ವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ನಿರ್ದೇಶನ ನೀಡುವಂತೆ ಮನವಿಯಲ್ಲಿ ಕೋರಲಾಗಿದೆ ಎಂದು ಟ್ರಸ್ಟ್ ಕಾರ್ಯದರ್ಶಿ ಬಿ.ವಿ.ಗಿರಿ ತಿಳಿಸಿದ್ದಾರೆ.

ಇದೆ ಸಂದರ್ಭದಲ್ಲಿ ಕರ್ನಾಟಕ ಗ್ರಾಮೀಣ ಕುಡಿಯುವ ನೀರು ಸರಬರಾಜು ಹಾಗೂ ನೈರ್ಮಲ್ಯ ಇಲಾಖೆ ಮುಖ್ಯ ಅಭಿಯಂತರರಾಗಿ ಅಧಿಕಾರ ಸ್ವೀಕರಿಸಿದ ಅಶೋಕ್ ಎಲ್.ವಾಸನದ್ ಅವರನ್ನು ಆ‌ರ್. ವೇಣುಗೋಪಾಲ್ ಸನ್ಮಾನಿಸಿ ಗೌರವಿಸಿದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು