ಭದ್ರಾವತಿ-ನಾಳೆ ಈ ಭಾಗಗಳಲ್ಲಿ ಬೆಳಿಗ್ಗೆಯಿಂದ ಕರೆಂಟ್ ಇರಲ್ಲ

ವಿಜಯ ಸಂಘರ್ಷ ನ್ಯೂಸ್ 
ಭದ್ರಾವತಿ: ಮೆಸ್ಕಾಂ ನಗರ ಉಪ ವಿಭಾಗ ಘಟಕ-3 ರ ಶಾಖಾ ವ್ಯಾಪ್ತಿ ಯಲ್ಲಿ ವಿದ್ಯುತ್ ಮಾರ್ಗ ನಿರ್ವಹಣಾ ಕಾಮಗಾರಿಯನ್ನು ಹಮ್ಮಿಕೊಂಡಿರುವು ದರಿಂದ ಡಿ:6 ರ ಶನಿವಾರದಂದು ಬೆಳಗ್ಗೆ 10:30 ರಿಂದ ಮಧ್ಯಾಹ್ನ 02.30 ಘಂಟಿಯವರೆಗೆ ವಿದ್ಯುತ್ ವ್ಯತ್ಯಯ ಉಂಟಾಗಲಿದೆ ಎಂದು ನಗರ ಉಪ ವಿಭಾಗದ ಸಹಾಯಕ ಕಾರ್ಯ ನಿರ್ವಾಹಕ ಅಭಿಯಂತರರು ಪ್ರಕಟಣೆ ಯಲ್ಲಿ ತಿಳಿಸಿದ್ದಾರೆ.

ಎಲ್ಲೆಲ್ಲಿ:-

ಕಡದಕಟ್ಟೆ, ಭಂಡಾರಹಳ್ಳಿ, ಹಳೇ ಭಂಡಾರಹಳ್ಳಿ, ನಾಗಮ್ಮ ಬಡಾವಣೆ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಅಡಚಣೆಯಾಗಲಿದ್ದು ಗ್ರಾಹಕರು ಸಹಕರಿಸಲು ಕೋರಲಾಗಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು