ಭದ್ರಾವತಿ-ವಿದ್ಯುತ್ ವಿತರಣಾ ಕೇಂದ್ರದ ಸಮೀಪವೇ ಕತ್ತಲು..?

ವಿಜಯ ಸಂಘರ್ಷ ನ್ಯೂಸ್ 
ಭದ್ರಾವತಿ: ನಗರದ ಜೆಪಿಎಸ್ ಕಾಲೋನಿಯ ವಿದ್ಯುತ್ ವಿತರಣಾ ಕೇಂದ್ರದ ಮುಂಭಾಗ ಕಾರ್ಗತ್ತಲು ಕವಿದಿದ್ದರೂ ಸಂಬಂಧ ಪಟ್ಟ ಅಧಿಕಾರಿಗಳು ಗಮನ ಹರಿಸದಿರು ವುದು ದುರಂತ.

ಹಲವಾರು ವರ್ಷಗಳಿಂದಲೂ ಈ ಮಾರ್ಗದಲ್ಲಿ ಕಾರ್ಗತ್ತಲಿನಿಂದ ಕೂಡಿದ್ದು, ಮಾಧ್ಯಮಗಳ ಮೂಲಕ ಎಚ್ಚರಿಸಿದ ನಂತರ ನಗರಸಭೆ ವಿದ್ಯುತ್ ದೀಪ ಅಳವಡಿಸಿತ್ತು. ಆದರೆ ಅಳವಡಿಸಿದ ಕೆಲವೆ ದಿನಗಳಲ್ಲಿ ಈ ರಸ್ತೆಯಲ್ಲಿ ಕಾರ್ಗತ್ತಲು ಆವರಿಸಿದೆ.

ಇದೆ ಮಾರ್ಗದಲ್ಲಿ ಶಾಲಾ, ಕಾಲೇಜು, ಪಾಲಿಟೆಕ್ನಿಕ್ ಗಳಿದ್ದು, ಪ್ರತಿನಿತ್ಯ ಸಹಸ್ರಾರು ವಿದ್ಯಾರ್ಥಿಗಳು, ಕಾರ್ಮಿಕರು ಸಂಚಾರಿಸುತ್ತಾರೆ. ಅಲ್ಲದೆ ಸಂಜೆ ಮನೆಪಾಠ ಮುಗಿಸಿ ಕೊಂಡು ಹೋಗುವ ವಿದ್ಯಾರ್ಥಿ, ಸಾರ್ವಜನಿ ಕರುಗಳಿಗೆ ಅನಾನುಕೂಲವಾಗಿದ್ದು, ಭಯದಲ್ಲಿ ಓಡಾಡುವ ಸ್ಥಿತಿ ನಿರ್ಮಾಣ ವಾಗಿದೆ.

ಕಳೆದ ವರ್ಷ ಇದೆ ಮಾರ್ಗದಲ್ಲಿ ಸಂಜೆ ಸಮಯದಲ್ಲಿ ಓರ್ವ ವ್ಯಕ್ತಿ ಮೊಬೈಲ್ ನಲ್ಲಿ ಮಾತನಾಡುತ್ತಾ ಬರುವ ಸಂದರ್ಭದಲ್ಲಿ ಅಪರಿಚಿತ ವ್ಯಕ್ತಿಗಳು ಬೈಕ್ ನಲ್ಲಿ ಬಂದು ಮೊಬೈಲ್ ಕಸಿದು ಕೊಂಡು ಪರಾರಿಯಾಗಿದ್ದಾರೆ. ಇದಕ್ಕೆಲ್ಲಾ ಕಾರಣ ಬೀದಿ ದೀಪ ಇಲ್ಲದಿರುವುದೇ ಕಾರಣ. ಈ ಹಿನ್ನಲೆ ಯಲ್ಲಿ ಕೂಡಲೇ ಬೀದಿ ದೀಪ ಅಳವಡಿಸಿ ಅನುಕೂಲ ಮಾಡಿಕೊಡು ವಂತೆ ಇಲ್ಲಿನ ಕಾಲೇಜು ವಿದ್ಯಾರ್ಥಿ ಗಳು,ಸಾರ್ವಜನಿಕರು ಮನವಿ ಮಾಡಿದ್ದಾರೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು