ವಿಜಯ ಸಂಘರ್ಷ ನ್ಯೂಸ್
ಭದ್ರಾವತಿ: ಬಿಎಲ್ಓ ಗಳು ಮತದಾರರ ಪಟ್ಟಿಯ ಮ್ಯಾಪಿಂಗ್ ಕಾರ್ಯವನ್ನು ಮುಂದಿನ ಒಂದು ವಾರದಲ್ಲಿ ಚುರುಕು ಗೊಳಿಸಿ ಕಾರ್ಯ ದಲ್ಲಿ ಪ್ರಗತಿ ಸಾಧಿಸದಿದ್ದರೆ ಅಂತಹವರ ವಿರುದ್ಧ ಸೂಕ್ತಕ್ರಮ ಕೈಗೊಳ್ಳ ಬೇಕಾಗುತ್ತದೆ ಎಂದು ಜಿಲ್ಲಾಧಿಕಾರಿ ಪ್ರಭುಲಿಂಗ ಕವಳಕಟ್ಟಿ ಹೇಳಿದರು.
ಸೋಮವಾರ ತಾಲೂಕು ಕಚೇರಿಯಲ್ಲಿ ಕೆರೆಯಲಾಗಿದ್ದ ವಿಧಾನಸಭಾ ಕ್ಷೇತ್ರದ 2002 ರ ಮತದಾರರ ಪಟ್ಟಿಯೊಂದಿಗೆ 2025ರ ಮತದಾರರಪಟ್ಟಿಯ ಮ್ಯಾಪಿಂಗ್ ಮತ್ತು ಪ್ರೊಜೆನ್ಸಿ ಕಾರ್ಯಕ್ಕೆ ನಿಯೋಜಿತರಾದ ಬಿಎಲ್ ಓ ಗಳ ಸಭೆಯಲ್ಲಿ ಮಾತನಾಡಿದರು.
ನೀವು ಮಾಡುವ ಈ ಕಾರ್ಯದಲ್ಲಿ ನಿರೀಕ್ಷಿತ ಪ್ರಗತಿ ಕಂಡುಬಂದಿಲ್ಲವಾದ್ದ ರಿಂದ ಇದೇ ರೀತಿ ಮಂದಗತಿಯಲ್ಲಿ ಕಾರ್ಯನಿರ್ವಹಿಸಿದರೆ ಅನಿವಾರ್ಯ ವಾಗಿ ನಿಮ್ಮ ವಿರುದ್ದ ಸೂಕ್ತ ಕ್ರಮಕ್ಕೆ ಮುoದಾಗ ಬೇಕಾಗುತ್ತದೆ. ಅದಕ್ಕೆ ಅವಕಾಶ ಮಾಡದೆ ಕಾರ್ಯದಲ್ಲಿ ಪ್ರಗತಿ ಸಾಧಿಸಿ ಎಂದರು.
ಸಭೆಯಲ್ಲಿ ಉಪವಿಭಾಗಾಧಿಕಾರಿ ಸತ್ಯನಾರಾಯಣ, ತಹಶೀಲ್ದಾರ್ ಪರಸಪ್ಪ ಕುರುಬರ ಹಾಗೂ ಬಿಎಲ್ಓ ಗಳು ಹಾಜರಿದ್ದರು.