ವಿಜಯ ಸಂಘರ್ಷ ನ್ಯೂಸ್
ಭದ್ರಾವತಿ: ನಗರದ ಜೆಪಿಎಸ್ ಕಾಲೋನಿ ಮೆಸ್ಕಾಂ ವಿತರಣಾ ಕೇಂದ್ರದ 11 ಕೆ ವಿ ಮಾರ್ಗಗಳ ತುರ್ತು ಕಾಮಗಾರಿ ನಿಮಿತ್ತ ಮತ್ತು ಕುಡಿಯುವ ನೀರು ಮಾರ್ಗದ ಹೊಸ ಕಾಮಗಾರಿ ಗಾಗಿ ವ್ಯಾಪ್ತಿಯಲ್ಲಿ ವಿದ್ಯುತ್ ಮಾರ್ಗ ನಿರ್ವಹಣಾ ಕಾಮಗಾರಿ ಹಮ್ಮಿಕೊಂಡಿ ರುವುದರಿಂದ ಡಿ:3 ರ ಬುಧವಾರ ಬೆಳಿಗ್ಗೆ 10.00ಘಂಟೆಯಿಂದ ಸಂಜೆ 6.00 ಘಂಟೆವರೆಗೆ ವಿದ್ಯುತ್ ವ್ಯತ್ಯೆಯ ವಾಗಲಿದೆ.
ದೊಡ್ಡರಿ, ಗಂಗೂರು, ಅಂತರಗಂಗೆ ಕೆ.ಜಿ ಹಳ್ಳಿ, ಉಕ್ಕುಂದ,ಯರೇಹಳ್ಳಿ ದೇವರ ನರಸೀಪುರ, ಗಾಂಧಿನಗರ, ಶಿವಪುರ ಶ್ರೀನಿವಾಸಪುರ ಮತ್ತು ಸುತ್ತ ಮುತ್ತ ಗ್ರಾಮಗಳಲ್ಲಿ ಐಪಿ ಸೆಟ್ ಮತ್ತು ನಿರಂತರ ಜ್ಯೋತಿ ಲೈನ್ ಹಾಗೂ ಭದ್ರಾ ಪೇಪರ್ ಮಿಲ್ ಮಾರ್ಗದಲ್ಲಿ ವಿದ್ಯುತ್ ಸರಬರಾಜು ಇರುವುದಿಲ್ಲ ಎಂದು ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರು ಪ್ರಕಟಣೆಯಲ್ಲಿ ಕೋರಿದ್ದಾರೆ.