ವಿಜಯ ಸಂಘರ್ಷ ನ್ಯೂಸ್
ಭದ್ರಾವತಿ : ಮೆಸ್ಕಾಂ ನಗರ ಉಪ ವಿಭಾಗ, ಘಟಕ-2ರ ಶಾಖಾ ವ್ಯಾಪ್ತಿ ಯಲ್ಲಿ ವಿದ್ಯುತ್ ಮಾರ್ಗ ನಿರ್ವಹಣಾ ಕಾಮಗಾರಿ ಹಮ್ಮಿಕೊಂಡಿರುವುದ ರಿಂದ ಡಿ.2 ರ ಇಂದು ಬೆಳಿಗ್ಗೆ 10 ಗಂಟೆ ಯಿಂದ ಸಂಜೆ 6 ಗಂಟೆ ವರೆಗೆ ವಿದ್ಯುತ್ ವ್ಯತ್ಯಯ ಉಂಟಾಗಲಿದೆ.
ಜಟ್‌ಪಟ್ ನಗರ, ಖಲಂದರ್ ನಗರ, ಮೊಮಿನ್ ಮೊಹಲ್ಲಾ, ಅನ್ವರ್ ಕಾಲೋನಿ, ಹಳೇಸೀಗೆಬಾಗಿ, ಅಮೀರ್‌ಜಾನ್ ಕಾಲೋನಿ, ಭದ್ರಾ ಅಕ್ಕಿ ಗಿರಣಿ ಇತ್ಯಾದಿ ಪ್ರದೇಶಗಳ ವ್ಯಾಪ್ತಿಯಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಲಿದೆ.
ಗ್ರಾಹಕರು ಸಹಕರಿಸುವಂತೆ ಮೆಸ್ಕಾಂ ನಗರ ಉಪವಿಭಾಗದ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರು ಪ್ರಕಟಣೆಯಲ್ಲಿ ಕೋರಿದ್ದಾರೆ.