ವಿಜಯ ಸಂಘರ್ಷ ನ್ಯೂಸ್
ಭದ್ರಾವತಿ: ಪ್ರಕೃತಿ ಮತ್ತು ಮಾರುಕಟ್ಟೆ ಏರಿಳಿತಗಳ ನಡುವೆಯೂ ನಿತ್ಯ ಶ್ರಮಿಸುವ ರೈತ ಸಮುದಾಯಕ್ಕೆ ಬೃಹತ್ ಸವಾಲಾಗಿ ಪರಿಣಮಿಸಿವೆ. ಈ ಹಿನ್ನಲೆಯಲ್ಲಿ ರೈತರು ಎದುರಿಸುತ್ತಿರುವ ಗಂಭೀರ ಸಮಸ್ಯೆಗಳನ್ನು ಪರಿಹರಿಸಲು ರಾಜ್ಯ ಸರ್ಕಾರ ವಿಫಲವಾಗಿದೆ ಎಂದು ವಿಧಾನ ಪರಿಷತ್ ಮಾಜಿ ಸದಸ್ಯ ಆರ್.ಕೆ.ಸಿದ್ರಾಮಣ್ಣ ರಾಜ್ಯ ಸರ್ಕಾರದ ವಿರುದ್ದ ಕಿಡಿಕಾರಿದರು.
ಅವರು ಸೋಮವಾರ ಭಾರತೀಯ ಜನತಾ ಪಕ್ಷ ನಗರ ಹಾಗೂ ಗ್ರಾಮಾಂತರ, ಹೊಳೆಹೊನ್ನೂರು ಮಂಡಲಗಳ ವತಿಯಿಂದ ತಹಸಿಲ್ದಾರ್ ಕಛೇರಿ ಮುಂಭಾಗ ಹಮ್ಮಿಕೊಳ್ಳಲಾ ಗಿದ್ದ ಪ್ರತಿಭಟನೆಯಲ್ಲಿ ಮಾತನಾಡಿದರು.
ವಿದ್ಯುತ್ ಪೂರೈಕೆ ಮತ್ತು ನೀರಾವರಿ ಸಮಸ್ಯೆ: ಕೃಷಿ ಪಂಪ್‌ಸೆಟ್‌ಗಳಿಗೆ ಅನಿಯಮಿತ ಮತ್ತು ಕಳಪೆ ಗುಣ ಮಟ್ಟದ ವಿದ್ಯುತ್ ಪೂರೈಕೆ, ಘೋಷಿಸಿದ ಅವಧಿ ಯಲ್ಲಿ ವಿದ್ಯುತ್ ಸಿಗದಿರುವುದು, ಲೋ-ವೋಲ್ಟಜ್ ನಿಂದ ಪಂಪ್‌ಸೆಟ್‌ಗಳು ಸುಡುವುದು ಸಾಮಾನ್ಯವಾಗಿದೆ. ಕೃಷಿಗೆ ನಿಗದಿತ ಸಮಯದಲ್ಲಿ (ಕನಿಷ್ಠ 7 ಗಂಟೆ) ಮತ್ತು ಗುಣಮಟ್ಟದ ತ್ರಿಫೇಸ್ ವಿದ್ಯುತ್ ಪೂರೈಕೆ ಮಾಡಲು ಮೆಸ್ಕಾಂಗೆ ಕಟ್ಟುನಿಟ್ಟಿನ ಸೂಚನೆ ನೀಡಬೇಕು. ಕೆರೆ, ಕಟ್ಟೆಗಳ ಹೂಳೆತ್ತುವ ಕೆಲಸವನ್ನು ಕೂಡಲೇ ಆರಂಭಿಸಬೇಕು ಎಂದು ಆಗ್ರಹಿಸಿದರು.
ಅಡಿಕೆ ಬೆಳೆ ಮತ್ತು ರೋಗ ಬಾಧೆ:
ಜಿಲ್ಲೆಯ ಪ್ರಮುಖ ವಾಣಿಜ್ಯ ಬೆಳೆ ಯಾದ ಅಡಿಕೆಗೆ ಹಳದಿ ಎಲೆ ರೋಗ ಮತ್ತು ಕೊಳೆ ರೋಗದ ಹಾವಳಿ ಹೆಚ್ಚಾಗಿದ್ದು, ರೈತರು ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದಾರೆ. ರೋಗಗ್ರಸ್ತ ಬೆಳೆಗಳ ಸಮೀಕ್ಷೆ ನಡೆಸಿ ಸೂಕ್ತ ಪರಿಹಾರ (ನಷ್ಟ ಪರಿಹಾರ) ಮತ್ತು ರೋಗ ನಿಯಂತ್ರ ಣಕ್ಕೆ ವೈಜ್ಞಾನಿಕ ತಾಂತ್ರಿಕ ನೆರವು ನೀಡಬೇಕು. ರೋಗ ನಿರೋಧಕ ಆಡಿಕೆ ತಳಿಗಳ ಅಭಿವೃದ್ಧಿಗೆ ಒತ್ತು ನೀಡಬೇಕು ಎಂದು ಒತ್ತಾಯಿಸಿದರು.
ಪ್ರಮುಖ ಬೆಳೆಗಳಾದ ಭತ್ತ, ಜೋಳ, ರಾಗಿಗೆ ಕನಿಷ್ಠ ಬೆಂಬಲ ಬೆಲೆ ಸಮರ್ಪಕವಾಗಿ ಸಿಗುತ್ತಿಲ್ಲ. ವಿಮಾ ಕಂಪನಿಗಳಿಗೆ ತ್ವರಿತವಾಗಿ ಮತ್ತು ಪಾರದರ್ಶಕವಾಗಿ ಪರಿಹಾರ ವಿತರಿಸಲು ಆದೇಶ ನೀಡಬೇಕು. ಸರ್ಕಾರದ ಕನಿಷ್ಠ ಬೆಂಬಲ ಬೆಲೆಯಡಿ ರೈತರಿಂದ ಧಾನ್ಯಗಳನ್ನು ಖರೀದಿಸಲು ಸೂಕ್ತ ವ್ಯವಸ್ಥೆ ಮತ್ತು ಖರೀದಿ ಕೇಂದ್ರಗಳನ್ನು ಹೆಚ್ಚಿಸಬೇಕು ಎಂದರು.
ಕಾಡಾನೆ ಮತ್ತು ವನ್ಯಜೀವಿಗಳ ಹಾವಳಿ:ಮಲೆನಾಡು ಭಾಗಗಳಲ್ಲಿ ಕಾಡಾನೆ. ಹಂದಿ ಮತ್ತು ಇತರೆ ವನ್ಯಜೀವಿಗಳ ಹಾವಳಿಯಿಂದ ಬೆಳೆ ಹಾನಿಯಾಗುವುದು ಹೆಚ್ಚಿದೆ. ಇದಕ್ಕೆ ಪರಿಹಾರ ವಿತರಣೆ ಕಷ್ಟ ಮತ್ತು ವಿಳಂಬ ವಾಗುತ್ತಿದೆ. ಅರಣ್ಯ ಇಲಾಖೆ ವತಿಯಿಂದ ರೈತರ ಜಮೀನುಗಳ ಸುತ್ತ ತಡೆಗೋಡೆ ಅಥವಾ ಸೌರ ಬೇಲಿ ನಿರ್ಮಾಣಕ್ಕೆ ಸಹಾಯ ನೀಡಬೇಕು ಮತ್ತು ಬೆಳೆ ಹಾನಿ ಪರಿಹಾರವನ್ನು ತ್ವರಿತವಾಗಿ ವಿತರಿಸಬೇಕು.
ಮೆಕ್ಕೆಜೋಳ ಬೆಳೆದಂತ ರೈತರಿಗೆ ಸರಿಯಾದ ಬೆಂಬಲ ಬೆಲೆ ಸಿಗುತ್ತಿಲ್ಲ ಕೇಂದ್ರ ಸರ್ಕಾರ 2,400 ನಿಗದಿ ಮಾಡಿದ್ದಾಗಿಯೂ ಕೂಡ ಮಾರುಕಟ್ಟೆ ಯಲ್ಲಿ 1,700 ರಿಂದ 1800 ರೂಪಾಯಿ ದರ ಇದೆ, ಅದನ್ನ ಬೆಂಬಲ ಬೆಲೆ ಯೋಜನೆ ಆಡಿ ಖರೀದಿ ಮಾಡಬೇಕು. ಮಾರುಕಟ್ಟೆಯಲ್ಲಿ ಮೆಕ್ಕೆಜೋಳಕ್ಕೆ ಖರೀದಿ ಕೇಂದ್ರವನ್ನು ತೆರೆಯಬೇಕು. ಜಿಲ್ಲಾಧಿಕಾರಿ ಗಳು ರೈತಪರ ಸಮಸ್ಯೆ ಗಳನ್ನು ಗಂಭೀರ ವಾಗಿ ಪರಿಗಣಿಸಿ, ಸಂಬಂಧಪಟ್ಟ ಇಲಾಖೆಗಳಿಗೆ ಸೂಕ್ತ ನಿರ್ದೇಶನ ನೀಡಿ, ರೈತ ಸಮುದಾಯಕ್ಕೆ ನ್ಯಾಯ ಒದಗಿಸಬೇಕೆಂದು
ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ಮಂಡಲಗಳ ಅಧ್ಯಕ್ಷರು ಗಳಾದ ಧರ್ಮಪ್ರಸಾದ್, ಕೆ.ಎಚ್. ತೀರ್ಥಯ್ಯ, ಮಲ್ಲೇಶಪ್ಪ ಎಂ, ಜಿಲ್ಲಾ ರೈತ ಮೋರ್ಚಾ ಪ್ರಧಾನ ಕಾರ್ಯದರ್ಶಿ ಗಣೇಶ್ ಬಿಳಕಿ, ಮುಖಂಡರಾದ ಮುಂಗೋಟೆ ರುದ್ರೇಶ್,ಸತೀಶ್ ಗೌಡ, ಶ್ರೀನಿವಾಸ್, ಸರಸ್ವತಿ, ಚನ್ನೇಶ್, ಮೊಸರಳ್ಳಿ ಅಣ್ಣಪ್ಪ, ರಘುರಾವ್, ಶಂಕರ್ ಮೂರ್ತಿ,ನಾಗೇಶ್, ಸುಬ್ರಮಣಿ, ಮಂಜುನಾಥ್, ಜಿಲ್ಲಾ ಹಾಗೂ ಮಂಡಲ, ಮೋರ್ಚಗಳ ಹಾಗೂ ಮಹಾಶಕ್ತಿ ಕೇಂದ್ರದ ಪದಾಧಿಕಾರಿ ಗಳು, ಮಹಿಳಾ ಪ್ರಮುಖರು ಪ್ರತಿಭಟನೆಯಲ್ಲಿ ಭಾಗವಹಿಸಿ ಗ್ರೇಡ್ -2 ತಹಸೀಲ್ದಾರ್ ಮಂಜನಾಯ್ಕ ರವರ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಿದರು.