ಮಮ್ಮಿ,ಡ್ಯಾಡಿ ಸಂಸ್ಕೃತಿ ಯಿಂದ ಹೊರ ಬಂದು ಕನ್ನಡದ ಅಭಿಮಾನ ಬೆಳೆಸಿಕೊಳ್ಳಿ: ಕೋಗಲೂರು ತಿಪ್ಪೇಸ್ವಾಮಿ

ವಿಜಯ ಸಂಘರ್ಷ ನ್ಯೂಸ್ 
ಭದ್ರಾವತಿ: ಕನ್ನಡ ದ ಅಭಿಮಾನ ಇಂದು ಹಳ್ಳಿಗಳಲ್ಲಿ ಉಳಿದಿದೆ ಎಂದು ಕನ್ನಡ ಸಾಹಿತ್ಯ ಪರಿಷತ್ ನಿಕಟ ಪೂರ್ವ ಅಧ್ಯಕ್ಷರು ಹಾಗೂ ಯರೇಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕ ಕೋಗಲೂರು ತಿಪ್ಪೇಸ್ವಾಮಿ ಹೇಳಿದರು.
ಅವರು ತಾಲೂಕಿನ ಲಕ್ಷ್ಮೀ ಪುರದಲ್ಲಿ ಕನ್ನಡ ರಾಜ್ಯೋತ್ಸವದ ಸಮಾರಂಭ ದಲ್ಲಿ ಮಾತನಾಡುತ್ತಾ, ಬೆಂಗಳೂರು ಸೇರಿದಂತೆ ಮತ್ತು ಅನೇಕ ನಗರಗಳಲ್ಲಿ ಕನ್ನಡಿಗರ ಹಾಗೂ ಕನ್ನಡ ಮಾತನಾಡು ವವರ ಸಂಖ್ಯೆ ತುಂಬಾ ಕಡಿಮೆ ಆಗುತ್ತಿದೆ.ಇಂಗ್ಲಿಷ್ ಮತ್ತಿತರೆ ಭಾಷಾ ವ್ಯಾಮೋಹ ಅತಿಯಾಗುತ್ತಿದ್ದು ಕನ್ನಡ ಮಾತನಾಡುವವರನ್ನು ಕೀಳಾಗಿ ಕಾಣುವ ಸಂಸ್ಕೃತಿ ಬೆಳೆಯುತ್ತಿರು ವುದು ವಿಷಾಧನಿಯ ಎಂದರು.

ಇತ್ತೀಚೆಗೆ ಹಳ್ಳಿಹಳ್ಳಿಗಳಲ್ಲಿ ಕನ್ನಡ ರಾಜ್ಯೋತ್ಸವವನ್ನು ಸಡಗರ ದಿಂದ ಆಚರಿಸುತ್ತಿದ್ದಾರೆ. ಮಮ್ಮಿ,ಡ್ಯಾಡಿ
ಸಂಸ್ಕೃತಿಯಿಂದ ಹೊರ ಬಂದು ಕನ್ನಡದ ಅಭಿಮಾನ ಬೆಳೆಸಿಕೊಳ್ಳಿ. ವಿಶ್ವದ ಸುಂದರ ಲಿಪಿಯುಳ್ಳ 3 ನೇ ಸುಂದರ ಭಾಷೆ ಇದಾಗಿದ್ದು 2000 ವರ್ಷಗಳ ಇತಿಹಾಸ ಇದಕ್ಕಿದ್ದು, ಬರೆದಂತೆ ಓದಬಲ್ಲ ಭಾಷೆ ಇದು.
ಸ್ಪಷ್ಠ, ಶುದ್ಧ ಓದು ಬರಹ ರೂಢಿಸಿ ಕೊಂಡು ಕನ್ನಡ ಉಳಿಸಿ ಬೆಳೆಸಿ ಎಂದು ಕರೆಕೊಟ್ಟರು.

ಗ್ರಾಮದಲ್ಲಿ ಎಲ್ಲರೂ ಸಂಭ್ರಮದಿಂದ ಪಾಲ್ಗೊಂಡಿದ್ದ ಸಮಾರಂಭದಲ್ಲಿ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶ್ರೀಧರ್ ಗೌಡ, ಬಡ್ತಿ ಮುಖ್ಯ ಶಿಕ್ಷಕ ಮೈಲಾರಪ್ಪ, ಶಿಕ್ಷಕಿಯರಾದ ದೇವಕರಣಮ್ಮ, ಶೋಭಾ, ಲಿಂಗಮೂರ್ತಿ, ಕನ್ನಡ ಯುವಕ ಸಂಘದ ಪದಾಧಿಕಾರಿಗಳು, ಊರಿನ ಹಿರಿಯರು, ಮಹಿಳೆಯರು, ಮಕ್ಕಳು ಪಾಲ್ಗೊಂಡಿದ್ದ ಸಮಾರಂಭ ದಲ್ಲಿ ಮಕ್ಕಳು ಸಾಂಸ್ಕೃತಿಕ ಕಾರ್ಯಕ್ರಮ ನಡೆಸಿ ಕೊಟ್ಟರು.

ಅಶೋಕ್, ದಿವಾಕರ್, ಆನಂದ್, ಸೋಮಶೇಖರ್, ವೆಂಕಟೇಶ್ ಸೇರಿದಂತೆ ಇನ್ನಿತರರು ಪಾಲ್ಗೊಂಡಿದ್ದರು.

ಸುದ್ದಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ:9743225795

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು