ವಿಜಯ ಸಂಘರ್ಷ ನ್ಯೂಸ್
ಹೊಸನಗರ : ಮಾನ್ಯ ಶಿಕ್ಷಣ ಮಂತ್ರಿಗಳಾದ ಮದು ಬಂಗಾರಪ್ಪ ನವರೇ, ನೀವು ಈ ರಾಜ್ಯದ ಲಕ್ಷಾಂತರ ಮಕ್ಕಳ ಬದುಕನ್ನು ರೂಪಿಸುವ ಜವಾಬ್ದಾರಿ ಹೊತ್ತಿರುವ ಶಿಕ್ಷಣ ಇಲಾಖೆ ಮಂತ್ರಿಗಳಾಗಿದ್ದಿರಿ, ನಿಮಗೇ ಯಾರಿಗೆ ಹೇಗೆ ಏನು ಮಾತನಾಡ ಬೇಕು ಎನ್ನುವ ಅರಿವು ಇಲ್ಲದೇ ಇದ್ದರೇ ಆ ಲಕ್ಷಾಂತರ ಮಕ್ಕಳಿಗೆ ಏನೂ ಮಾರ್ಗದರ್ಶನ ಮಾಡುತ್ತೀರಿ ಎಂದು ಬಿಜೆಪಿ ಯುವ ಮುಖಂಡ ನಗರ ನಿತಿನ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕಳೆದ 50 ವರ್ಷಗಳ ರಾಜಕಾರಣದ ಅನುಭವ ಹೊಂದಿರುವ, ಪಕ್ಷಾತೀತ ವಾಗಿ ಕೇಂದ್ರ ಹಾಗೂ ರಾಜ್ಯದ ಎಲ್ಲಾ ಹಿರಿಯ ಕಿರಿಯ ರಾಜಕೀಯ ಮುಖಂಡರಿಂದ ಗೌರವ ಸಂಪಾದಿಸಿ ರುವ ಆರಗ ಜ್ಞಾನೇಂದ್ರ ರವರಿಗೆ ನೀವು ಮಾತನಾಡಿದ್ದು ಸರಿಯೇ ಎಂದು ಪ್ರಶ್ನಿಸಿಸಿದ್ದಾರೆ.
ಜ್ಞಾನೇಂದ್ರರವರು ಯಾವತ್ತೂ ಎಂದು ಯಾರಿಗೂ ತಳ ಮಟ್ಟದ ಮತ್ತು ವ್ಯಕ್ತಿತ್ವಕ್ಕೆ ಧಕ್ಕೆ ತರುವಂತ ಹೇಳಿಕೆ ಟೀಕೆ ಈ ವರೆಗೂ ಮಾಡಿದವರಲ್ಲ.ಒಂದು ಹಂತ ಮೀರಿ ಕೆಟ್ಟ ಶಬ್ದ ಭಾಷೆ ಬಳಿಸಿದ ಯಾವ ಉದಾಹರಣೆ ಇಲ್ಲಾ ಹೀಗಿರುವಾಗ ಏಕವಚನದ ಭಾಷೆ ಬಳಸೋದು ನಿಮ್ಮ ಜವಾಬ್ದಾರಿ ಮತ್ತು ವ್ಯಕ್ತಿತ್ವಕ್ಕೆ ಸರಿಯಾಗುತ್ತದೆಯೇ?
ಜ್ಞಾನೇಂದ್ರರವರು ಕುಟುಂಬ ರಾಜಕಾರಣದ ಹಿನ್ನೆಲೆಯಲ್ಲಿ ಬಂದವರಲ್ಲ, ಜನಸಾಮಾನ್ಯರ ನಡುವೆ ಜನಪರ ಹೊರಟಗಳಿಂದ ನಾಯಕರಾದವರು,ವಯಸ್ಸು ಹಿರಿತನಕ್ಕೆ ಗೌರವಿಸದೆ ವಾಚಮಗೋಚರವಾಗಿ ಬಾಯಿಗೆ ಬಂದ ಹಾಗೆ ಮಾತನಾಡಿದ ನಿಮ್ಮನ್ನು ಈ ಜಿಲ್ಲೆಯ ಪ್ರಜ್ಞಾವಂತ ಜನ ಸೂಕ್ಷ್ಮವಾಗಿ ಗಮನಿಸುತ್ತಾರೆ ಎನ್ನುವುದನ್ನು ಮರೆಯಬೇಡಿ.
ಈ ನೆಲದ ಧೀಮಂತ ನಾಯಕರಾದ ಬಂಗಾರಪ್ಪನವರ ಮಗನಾಗಿ ಹಿರಿಯರ ಬಗ್ಗೆ ಮಾತನಾಡುವಾಗ ಸ್ವಲ್ಪ ಯೋಚಿಸಿ ಬಂಗಾರಪ್ಪನವರ ಗೌರವಕ್ಕೆ ದಕ್ಕೆಯಾಗ ದಂತೆ ನಡೆದುಕೊಳ್ಳಿ ಎಂದಿದ್ದಾರೆ.
ನೀವು ಈ ರಾಜ್ಯದ ಭವಿಷ್ಯ ರೂಪಿಸುವ ಮಕ್ಕಳಿಗೆ ಶಿಕ್ಷಣ ಕೊಡುವ ಇಲಾಖೆ ಮಂತ್ರಿ ಎನ್ನುವುದು ಮರೆಯಬೇಡಿ ಮಾನ್ಯ ಶಿಕ್ಷಣ ಸಚಿವರೆ ಇನ್ನಾದರು ತಿದ್ದಿಕೊಳ್ಳಿ ಎಂದು ಹೇಳಿಕೆಯಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
Tags
ಹೊಸನಗರ ಸುದ್ದಿ