ಭದ್ರಾವತಿ-ರಾಜ್ಯದ ಸಮಗ್ರ ಅಭಿವೃದ್ಧಿಗೆ ಸಿಎಂ ಕೊಡುಗೆ ಅಪಾರ: ಫ್ರಾನ್ಸಿಸ್

ವಿಜಯ ಸಂಘರ್ಷ ನ್ಯೂಸ್ 
ಭದ್ರಾವತಿ: ಸಾಮಾಜಿಕ ನ್ಯಾಯದ ಪ್ರತಿಪಾದಕರು,ರಾಜ್ಯದ ಅತಿ ಹೆಚ್ಚು ಅವಧಿಯ ಇತಿಹಾಸ ಸೃಷ್ಟಿಸುತ್ತಿರುವ ಮುಖ್ಯಮಂತ್ರಿಗಳು, ಆಡಳಿತದಲ್ಲಿ ಸ್ಥಿರತೆ, ಸಾಮಾಜಿಕ ನ್ಯಾಯ, ಜನಪರ ಕಾರ್ಯಕ್ರಮ ಗಳು ಹಾಗೂ ರಾಜ್ಯದ ಸಮಗ್ರ ಅಭಿವೃದ್ಧಿಗೆ ಅಪಾರ ಕೊಡುಗೆ ನೀಡಿರುವ ಸಿದ್ದ ರಾಮಯ್ಯ ರವರ ಕಾರ್ಯ ಶ್ಲಾಘನೀಯ ವಾಗಿದೆ ಎಂದು ಶಿವಮೊಗ್ಗ- ಭದ್ರಾವತಿ ನಗರಾಭಿವೃದ್ಧಿ ಪ್ರಾಧಿಕಾರದ ಸದಸ್ಯರು ಹಾಗೂ ನಗರಸಭಾ ಮಾಜಿ ಸದಸ್ಯ ಫ್ರಾನ್ಸಿಸ್ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಈ ನಾಡು ಕಂಡ ದಮನಿತ ವರ್ಗಗಳ, ಶೋಷಿತ ಸಮುದಾಯಗಳ ಆಶಾ ಕಿರಣವಾಗಿದ್ದ ಮಾಜಿ ಸಿಎಂ ಅರಸು ಅವರ ದಾಖಲೆಯನ್ನು ಸರಿಗಟ್ಟಿದ ಸಿದ್ದರಾಮಯ್ಯ ಸಂವಿಧಾನ, ಪ್ರಜಾ ಪ್ರಭುತ್ವ, ಸಮಾಜವಾದಿ ಮೌಲ್ಯಗಳ ರಕ್ಷಣೆಗೆ ಕಟ್ಟಿಬದ್ದರಾಗಿ, ಬಡ ಜನರ, ಹಿಂದುಳಿದ, ದೀನ-ದಲಿತರ ಆಶೋತ್ತರಗಳಿಗೆ ಅನು ಗುಣವಾಗಿ ಮತ್ತಷ್ಟು ಈ ನಾಡಿಗೆ ತಮ್ಮ ಸೇವೆ ಸಲ್ಲಿಸಲಿ ಎಂದು ಹಾರೈಸಿದ್ದಾರೆ.

ಜನಸಾಮಾನ್ಯರ ಹಿತಾಸಕ್ತಿಯನ್ನು ಕೇಂದ್ರ ಬಿಂದುವಾಗಿಟ್ಟುಕೊಂಡು, ಬಡವರು, ರೈತರು, ಮಹಿಳೆಯರು, ದಲಿತರು ಮತ್ತು ಹಿಂದುಳಿದ ವರ್ಗಗಳ ಪರವಾಗಿ ತೆಗೆದು ಕೊಂಡ ನಿರ್ಧಾರ ಗಳು ಕರ್ನಾಟಕದ ಇತಿಹಾಸದಲ್ಲಿ ಸದಾ ಸ್ಮರಣೀಯವಾಗಿವೆ.

ದೂರದೃಷ್ಟಿಯ ನಾಯಕತ್ವ, ಪ್ರಾಮಾಣಿಕ ಆಡಳಿತ ಹಾಗೂ ಜನತೆಯ ಮೇಲಿನ ಅಚಲ ನಿಷ್ಠೆ ಯಿಂದ ರಾಜ್ಯವು ಅಭಿವೃದ್ಧಿಯ ದಾರಿ ಯಲ್ಲಿ ಮುನ್ನಡೆಯುತ್ತಿದೆ. ಇಂತಹ ದೀರ್ಘ ಕಾಲದ ಸಮರ್ಪಿತ ಸೇವೆಗೆ ಫ್ರಾನ್ಸಿಸ್ ಕೃತಜ್ಞತೆ ಸಲ್ಲಿಸಿದ್ದಾರೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು