ಭದ್ರಾವತಿ-ಹೆದ್ದಾರಿಯಲ್ಲಿ ಸುಲಿಗೆ ಪ್ರಕರಣ ಇಬ್ಬರು ಆರೋಪಿಗಳ ಅರೆಸ್ಟ್..?

ವಿಜಯ ಸಂಘರ್ಷ ನ್ಯೂಸ್ 
ಭದ್ರಾವತಿ: ಸುಲಿಗೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಆರೋಪಿ ಗಳನ್ನ ಗ್ರಾಮಾಂತರ ಪೊಲೀಸರು ಬಂಧಿಸಿ ಸುಲಿಗೆ ಮಾಡಿದ್ದ 10 ಗ್ರಾಂ ಚಿನ್ನಾಭರಣ, ಬೈಕ್ ನ್ನ ವಶಕ್ಕೆ ಪಡೆದಿದ್ದಾರೆ. 

ದಿನಾಂಕ:30/01/2026 ರಂದು ಪಿರ್ಯಾದಿದಾರ ಜಯಂತ ತಾಲ್ಲೂಕಿನ ಶಂಕರಘಟ್ಟ ಸಮೀಪದ ಕುವೆಂಪು ನಗರ ಗ್ರಾಮದ ಹತ್ತಿರ ಶಿವಮೊಗ್ಗ-ತರಿಕೆರೆ ರಾಜ್ಯ ಹೆದ್ದಾರಿಯಲ್ಲಿ ಬೈಕ್ ನ್ನು ಚಾಲನೆ ಮಾಡಿಕೊಂಡು ಹೋಗುತ್ತಿದ್ದಾಗ ಯಾರೋ ಇಬ್ಬರು ಮೋಟಾರು ಬೈಕ್ ನಲ್ಲಿ ಬಂದು ಪಿರ್ಯಾದಿ ಯನ್ನು ಅಡ್ಡ ಹಾಕಿ ತಡೆದು ಹಲ್ಲೆ ಮಾಡಿ 1,50,000/- ರೂ ಬೆಲೆ ಬಾಳುವ ಸುಮಾರು 14 ಗ್ರಾಂ ಬಂಗಾರದ ಸರವನ್ನು ಸುಲಿಗೆ ಮಾಡಿಕೊಂಡು ಹೋಗಿದ್ದು, ಈ ಸಂಬಂಧ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. 

ಪ್ರಕರಣದಲ್ಲಿ ಆರೋಪಿ ಹಾಗೂ ಮಾಲು ಪತ್ತೆಗಾಗಿ ಪೊಲೀಸ್ ಅಧೀಕ್ಷಕ ನಿಖಿಲ್ ಬಿ ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ಕಾರಿಯಪ್ಪ ಎ. ಜಿ., ರಮೇಶ್ ಕುಮಾರ್ ಎಸ್, ರವರ ಮಾರ್ಗದರ್ಶನದಲ್ಲಿ, ಭದ್ರಾವತಿ DySP ಪ್ರಕಾಶ ರಾಠೋಡ್ ಮೇಲ್ವಿಚಾರಣೆ ಯಲ್ಲಿ, ಗ್ರಾಮಾಂತರ ಠಾಣೆಯ ಪಿ ಎಸ್ ಐ ಚಿದಾನಂದ ನೇತೃತ್ವದಲ್ಲಿ ಎ.ಎಸ್.ಐ ದಿವಾಕರ್ ರಾವ್, ಸಿಪಿಸಿ ಯದುನಂದನ, ಸಂತೋಷಕುಮಾರ ರವರನ್ನೊಳಗೊಂಡ ತನಿಖಾ ತಂಡ ವನ್ನು ರಚನೆ ಮಾಡಲಾಗಿರುತ್ತದೆ.

ತಂಡವು ಪ್ರಕರಣದ ಆರೋಪಿತರಾದ ಮಲ್ಲಿಗೇನ ಹಳ್ಳಿ ಕ್ಯಾಂಪ್ ಗ್ರಾಮದ ಚಂದನ್ ನಾಯ್ಕ (20) 2) ವೇಣು ಗೋಪಾಲ,(26), ಎಂಬುವರನ್ನು ಪತ್ತೆ ಮಾಡಿ ಸದರಿ ಆರೋಪಿತರಿಂದ ಸುಲಿಗೆ ಮಾಡಿದ 10ಗ್ರಾಂ ಬಂಗಾರದ ಸರ ಅಂದಾಜು ಮೌಲ್ಯ 1,50,000/- ರೂ ಸದರಿ ಆರೋಪಿತರು ಕೃತ್ಯಕ್ಕೆ ಬಳಸಿದ ಬೈಕ್ ನನ್ನು ಅಮಾನತ್ತು ಪಡಿಸಿರುತ್ತದೆ.  

ಸದರಿ ತನಿಖಾ ತಂಡದ ಉತ್ತಮವಾದ ಕಾರ್ಯವನ್ನು ಎಸ್ ಪಿ ಪ್ರಶಂಸಿಸಿ ಅಭಿನಂದಿಸಿರುತ್ತಾರೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು