ವಿಜಯ ಸಂಘರ್ಷ ನ್ಯೂಸ್
ಕೆ.ಆರ್.ಪೇಟೆ: ಅಲಂಬಾಡಿ ಕಾವಲು ಗ್ರಾಮ ಹಿಂದೂ ಮುಸ್ಲಿಂ ಭಾವೈಕ್ಯತೆ ಯ ಕೇಂದ್ರ ಸ್ಥಳವಾಗಿದೆ ಎಂದು ವಿಧಾನಪರಿಷತ್ ಸದಸ್ಯರು ಹಾಗೂ ಬಿಜೆಪಿ ಹಿರಿಯ ನಾಯಕ ಹೆಚ್.ವಿಶ್ವನಾಥ್ ಹೇಳಿದರು.
ತಾಲ್ಲೂಕಿನ ಅಕ್ಕಿಹೆಬ್ಬಾಳು ಹೋಬಳಿಯ ಅಲಂಬಾಡಿ ಕಾವಲು ಗ್ರಾಮದ ಶ್ರೀ ಮಾರಮ್ಮ ತಾಯಿ ದೇವಾಲಯ ಉದ್ಘಾಟನಾ ವಿಶೇಷ ಪೂಜಾ ಕಾರ್ಯಕ್ರಮಕ್ಕೆ ದಂಪತಿ ಸಮೇತರಾಗಿ ಪಾಲ್ಗೊಂಡ ಬಳಿಕ ಮಾತನಾಡಿದರು. ಆಲಂಬಡಿ ಕಾವಲು ಗ್ರಾಮ ಹಿಂದೂ ಮುಸ್ಲಿಂ ಭಾವೈಕ್ಯತೆ ಒಳಗೊಂಡ ಗ್ರಾಮವಾಗಿದೆ, ಕೆ.ಆರ್. ಪೇಟೆ ತಾಲ್ಲೂಕಿನಲ್ಲಿ ಸಮಾಜ ಸೇವೆ ಮೂಲಕ ಜನಾನುರಾಗಿ ಉತ್ತಮ ಆರ್.ಟಿ.ಓ ಅಧಿಕಾರಿಯಾಗಿರುವ ಮಲ್ಲಿಕಾರ್ಜುನ್ ಗ್ರಾಮದ ಎರಡು ಧರ್ಮ ಗಳ ಹಿರಿಯ ಮತ್ತು ಹಿರಿಯ ಮುಖಂಡ ರನ್ನು ಜೊತೆಗೂಡಿಸಿ ಕೊಂಡು ಈ ದೇವಾಲಯನಿರ್ಮಾಣಕ್ಕೆ ಪ್ರಮುಖ ಕಾರಣಕರ್ತರಾಗಿ ಗ್ರಾಮದ ಅಭಿವೃದ್ಧಿಗೆ ಸಹಕರಿಸುತ್ತಿದ್ದಾರೆ ,ಆ ನಿಟ್ಟಿನಲ್ಲಿ ಗ್ರಾಮ ದೇವತೆ ಶ್ರೀ ಮಾರಮ್ಮ ಸುಂದರ ದೇವಾಲಯ ನಿರ್ಮಿಸಿ ಉದ್ಘಾಟನೆ ಗೊಂಡಿದೆ, ಉದ್ಘಾಟನೆಗೆ ಗ್ರಾಮದಲ್ಲಿರುವ ಮುಸ್ಲಿಂ ಸಮುದಾಯದ ಜನತೆ ಇದು ಹಿಂದೂಗಳ ದೇವಾಲಯ ಎಂಬ ಬೇದ ಭಾವವಿಲ್ಲದೆ ಸೌಹಾರ್ದತೆಯಿಂದ ಪಾಲ್ಗೊಂಡು ಜಾತಿ ಧರ್ಮ ಹೆಸರಿನಲ್ಲಿ ಕೋಮು ಗಲಭೆ ಸೃಷ್ಟಿಸುವ ಕೋಮುವಾದಿಗಳಿಗೆ ಆಲಂಬಾಡಿ ಕಾವಲು ಮಾದರಿ ಕೇಂದ್ರ ಸ್ಥಳವಾಗಿದೆ. ಈ ಗ್ರಾಮದಲ್ಲಿ ನನಗೆ ಸಂಬಂಧಿಕರೇ ಹೆಚ್ಚು ಏಕೆಂದರೆ ನನ್ನ ಧರ್ಮಪತ್ನಿಯ ಹುಟ್ಟೂರು ಹಾಗಾಗಿ ಈ ಗ್ರಾಮದ ಮೇಲೆ ವಿಶೇಷ ಪ್ರೀತಿಯ ಅಭಿಮಾನ ವಿದೆ. ಗ್ರಾಮಗಳಲ್ಲಿ ದೇವಾಲಯ ಗಳಿದ್ದರೆ ಜನರು ಭಯ,ಭಕ್ತಿಯಿಂದ ಜೀವನ ನಡೆಸುತ್ತಾರೆ ಅಲ್ಲದೆ ಸಂಸ್ಕೃತಿ, ಸಂಸ್ಕಾರ, ಶಿಸ್ತು, ಸಂಯಮ, ಮಾತೃಭಾವನೆ ಕಲಿಸುವ ದೇವಾಲಯ ಗಳು ನಾಡಿನ ಆಚಾರ ಕೇಂದ್ರಗಳಾಗಿ ಪ್ರತಿಯೊಂದು ಗ್ರಾಮಗಳಲ್ಲಿರ ಬೇಕು.ಪೂರ್ವಿಕರು ಹಾಕಿಕೊಟ್ಟ ಹಾದಿ ಯಲ್ಲಿ ಎಲ್ಲರೂ ಸಾಗಬೇಕು ಎಂದು ಹೇಳಿದ ಅವರು ಆಚಾರಕ್ಕೆ ದೇವಾಲಯ, ವಿಚಾರಕ್ಕೆ ಶಾಲೆ, ಜೀವ ಜಲಕ್ಕೆ ಕೆರೆ ಕಟ್ಟೆಗಳಿದ್ದರೆ, ಗ್ರಾಮೀಣ ಭಾಗವು ಸಮೃದ್ಧಿಯಾಗಿ ಸಮತೋಲನದಿಂದ ಕೂಡಿರುತ್ತದೆ ನಮ್ಮ ಹಿರಿಯರ ಸಂಪ್ರದಾಯವನ್ನು ಇಂದಿನ ಯುವ ಜನತೆ ಪಾಲಿಸಬೇಕು. ನಮ್ಮಿಂದ ಸಾಧ್ಯವಾದಷ್ಟು ಮತ್ತೊಬ್ಬ ರಿಗೆ ದಾನ ನೀಡುವುದರಿಂದ ಘನತೆ ಜತೆಗೆ ಜೀವನದಲ್ಲಿ ಯಶಸ್ಸು ಸಿಗಲಿದೆ ಎಂದ ಹೆಚ್ ವಿಶ್ವನಾಥ್ ಅವರು ಭಕ್ತರಿಗೆ ಸ್ವತಹ ಪ್ರಸಾದ ಬಡಿಸಿದರು.
ನೂತನ ಶ್ರೀ ಮಾರಮ್ಮ ದೇವಾಲಯದ ಸಂಪೂರ್ಣ ನಿರ್ಮಾಣದ ಕಾರ್ಯ ವನ್ನು ಸಮಾಜ ಸೇವಕ ಆರ್.ಟಿ.ಓ ಮಲ್ಲಿಕಾರ್ಜುನ್ ವಹಿಸಿಕೊಂಡಿದ್ದರು, ದೇವಾಲಯ ಉದ್ಘಾಟನೆಯ ಪ್ರಯುಕ್ತ ವಿಶೇಷ ಪೂಜಾ ಕಾರ್ಯಕ್ರಮಕ್ಕೆ ಆಗಮಿಸಿದ 5 ಸಾವಿರಕ್ಕೂ ಹೆಚ್ಚು ಭಕ್ತರಿಗೆ ಗ್ರಾಮಸ್ಥರ ಸಹಕಾರದಿಂದ ಅನ್ನಸಂತರ್ಪಣೆ ಏರ್ಪಡಿಸಲಾಗಿತ್ತು,
ವಿಶೇಷ ಪೂಜಾ ಕಾರ್ಯಕ್ರಮದಲ್ಲಿ ಕೈಮಗ್ಗ ಅಭಿವೃದ್ಧಿ ನಿಗಮದ ಅಧ್ಯಕ್ಷ ಐಪನಹಳ್ಳಿ ನಾಗೇಂದ್ರ ಕುಮಾರ್, ಮೂಡ ಮಾಜಿ ಅಧ್ಯಕ್ಷ ಕೆ.ಶ್ರೀನಿವಾಸ್, ನಿಗಮದ ಮಾಜಿ ಅಧ್ಯಕ್ಷ ಮತ್ತಿಘಟ್ಟ ಕೃಷ್ಣಮೂರ್ತಿ,ತಾ.ಪಂ ಮಾಜಿ ಅಧ್ಯಕ್ಷ ನಂಜುಂಡೇಗೌಡ, ಗ್ರಾಮದ ಯಜಮಾನರುಗಳಾದ ತಮ್ಮೆಗೌಡ, ನಾಗರಾಜು, ವಿಜಯ ಕುಮಾರ್, ಬಸವರಾಜ್, ಶಿವರಾಮು, ಚಂದ್ರೆಗೌಡ, ಮಂಜುನಾಥ್, ರಾಜು ನಾಯ್ಕ, ವಿಶ್ವನಾಥ್, ಮಸ್ತಿಗೌಡ, ಸುಜೇಂದ್ರ, ಮಹೇಶ್,ಗ್ರಾ.ಪಂ ಅಧ್ಯಕ್ಷ ಮಹಮದ್ ಹತಿಕ್, ಗ್ರಾ.ಪಂ ಸದಸ್ಯರಾದ ರವಿ, ಎ. ರಾಜು,ಸೊಸೈಟಿ ಅಧ್ಯಕ್ಷ ಮೋಹನ್,ಮಾಜಿ ಅಧ್ಯಕ್ಷ ಕರೀಶೆಟ್ಟಿ, ಮುಸ್ಲಿಂ ಮುಖಂಡ ಸಿದ್ದಿಕ್, ಪಠಾಣ್,ಯುವ ಮುಖಂಡ ಮೂರ್ತಿ, ಗ್ರಾಮದ ಮುಖಂಡರು ಸೇರಿದಂತೆ ಉಪಸ್ಥಿತರಿದ್ದರು.
*✍️ಸುದ್ದಿಯೊಂದಿಗೆ ಮನು ಮಾಕವಳ್ಳಿ ಕೆ ಆರ್ ಪೇಟೆ*
Tags
ಕೆ ಆರ್ ಪೇಟೆ ವರದಿ