ವಿಜಯ ಸಂಘರ್ಷ ನ್ಯೂಸ್
ಭದ್ರಾವತಿ: ನಿರೀಕ್ಷಿತ ಆದಾಯ ಮತ್ತು ವೆಚ್ಚಗಳ ಬಗ್ಗೆ ನಗರಸಭಾ ವತಿಯಿಂದ ಗುರುವಾರ ನಗರಸಭಾ ಸಭಾಂಗಣ ದಲ್ಲಿ ನಗರಸಭಾ ಅಧ್ಯಕ್ಷೆ ಗೀತಾ ರಾಜಕುಮಾರ ಅಧ್ಯಕ್ಷತೆಯಲ್ಲಿ 2026-2027 ನೇ ಸಾಲಿಗೆ ಸಭೆ ನಡೆಸಲಾಯಿತು.
ನಗರಸಭೆಯ ಸ್ವಂತ ಆದಾಯಗಳಾದ ಸ್ವಯಂಘೋಷಿತ ಆಸ್ತಿ ತೆರಿಗೆ, ನೀರಿನ ತೆರಿಗೆ ಇತರೆ ಆದಾಯ ಸರ್ಕಾರದ ಅನುದಾನಗಳು ಸೇರಿ ಒಟ್ಟು 11429.10 ಲಕ್ಷಗಳ ನಿರೀಕ್ಷೆ ಯನ್ನು ನಗರಸಭೆ ಹೊಂದಿದ್ದು ನಗರದ ಅಭಿವೃದ್ಧಿ ಹಾಗೂ ನಿರ್ವಹಣೆಗಾಗಿ 26-27 ನೇ ಸಾಲಿನ ಬಜೆಟ್ ತಯಾರಿಸಿದೆ.
ನಿರೀಕ್ಷಿತ ಆದಾಯಗಳಲ್ಲಿ ಆಸ್ತಿ ತೆರಿಗೆ ಯಿಂದ 8 ಕೋಟಿ 70.00 ಲಕ್ಷ, ನೀರಿನ ಶುಲ್ಕದಿಂದ 4 ಕೋಟಿ 80 ಲಕ್ಷ, ಬಾಡಿಗೆ ಗಳಿಂದ 25 ಲಕ್ಷ, ಉದ್ದಿಮೆ ಪರವಾನಿಗೆ ಯಿಂದ 38 ಲಕ್ಷದ10 ಸಾವಿರ, ಇತರೆ ಆದಾಯಗಳಾದ ಅಭಿವೃದ್ಧಿ ಶುಲ್ಕ ದಿಂದ 80 ಲಕ್ಷ ಬ್ಯಾಂಕ್ ಬಡ್ಡಿ , ಸುಂಕ ವಸೂಲಾತಿ ಆದಾಯಗಳಿಂದ 1 ಕೋಟಿ 25 ಲಕ್ಷ, ರಾಜ್ಯ ಸರ್ಕಾರದ ಅನುದಾನಗಳಾದ ಎಸ್ ಎಫ್. ಸಿ. ಮುಕ್ತ ನಿಧಿಯಿಂದ 5 ಕೋಟಿ 50 ಲಕ್ಷ, ಎಸ್ ಎಫ್. ಸಿ. ವೇತನ ನಿಧಿಯಿಂದ 11 ಕೋಟಿ 81 ಲಕ್ಷ, ಎಸ್ ಎಫ್. ಸಿ.ವಿದ್ಯುತ್ ನಿಧಿಯಿಂದ 1650 ಲಕ್ಷಗಳು, ಎಸ್ ಎಫ್. ಸಿ. ಕುಡಿಯುವ ನೀರಿನ ಅನುದಾನದಿಂದ 10 ಲಕ್ಷ ಮತ್ತು ಎಸ್ ಎಫ್ ಸಿ ವಿಶೇಷ ಅನುದಾನದಿಂದ 2700 ಲಕ್ಷಗಳು ಸೇರಿ ಒಟ್ಟು 6091 ಲಕ್ಷಗಳು ಅನುದಾನ ಬರುವ ನಿರೀಕ್ಷೆಯನ್ನು ಹೊಂದಿದೆ.
ಕೇಂದ್ರ ಸರ್ಕಾರದ ಅನುದಾನಗಳಾದ ಅಮೃತ್ ನಗರ ಯೋಜನೆ ಅನುದಾನ ದಿಂದ 2000 ಲಕ್ಷಗಳು, ನಲ್ಮ್ ಯೋಜನೆ ಅನುದಾನದಿಂದ 70 ಲಕ್ಷ, ಎಸ್ ಬಿ ಎಂ 2. 0 ಯೋಜನೆ ಅಡಿ 300 ಲಕ್ಷ ಹಾಗೂ ಹದಿನಾರನೇ ಹಣಕಾಸು ಯೋಜನೆ ಅನುದಾನ 1350 ಲಕ್ಷಗಳು ಸೇರಿ ಒಟ್ಟು 11429.10 ಲಕ್ಷಗಳ ಅನುದಾನವನ್ನು ನಗರಸಭೆ ನಿರೀಕ್ಷಿಸಿದೆ.
ನಿರೀಕ್ಷಿತ ಒಟ್ಟು ವೆಚ್ಚವಾಗಿ ರಸ್ತೆಗಳ ಅಭಿವೃದ್ಧಿ ಮತ್ತು ನಿರ್ವಹಣೆಗೆ ನಗರಸಭಾ ನಿಧಿ 50.00 ಲಕ್ಷ ಹಾಗೂ ಸರ್ಕಾರದ ಅನುದಾನ 1236.00 ಸೇರಿ ಒಟ್ಟು 1286.00, ಚರಂಡಿಗಳ ಅಭಿವೃದ್ಧಿ ಮತ್ತು ನಿರ್ವಹಣೆ ನಗರಸಭಾ ನಿಧಿ 30.00 ಲಕ್ಷ ಹಾಗೂ ಸರ್ಕಾರದ ಅನುದಾನ 1147.00 ಸೇರಿ ಒಟ್ಟು 1177.00, ಒಳಚರಂಡಿ ಕಾಮಗಾರಿಗೆ ನಗರಸಭಾ ನಿಧಿಯಿಂದ 20.00 ಲಕ್ಷ ಹಾಗೂ ಸರ್ಕಾರದ ಅನುದಾನ ವಾಗಿ 1025 ಲಕ್ಷಗಳು ಸೇರಿ ಒಟ್ಟು 1045 ಲಕ್ಷಗಳ ವೆಚ್ಚ, ಹೊರ ಗುತ್ತಿಗೆ ನೀರು ಸರಬ ರಾಜು ಸಿಬ್ಬಂದಿ ಗಳ ವೇತನ ಪಾವತಿಗೆ ನಗರಸಭಾ ದಿಂದ 394 ಲಕ್ಷಗಳು, ನೈರ್ಮಲಿಕರಣ ಹೊರಗುತ್ತಿಗೆ ನೇರ ಪಾವತಿ ಸಿಬ್ಬಂದಿ ಗಳ ವೇತನ ನಗರಸಭೆಯಿಂದ 421 ಲಕ್ಷ ಸರ್ಕಾರದ ಅನುದಾನ 2016 ಲಕ್ಷ ಒಟ್ಟು 637 ಲಕ್ಷ, ಬೀದಿ ದೀಪಗಳ ನಿರ್ವಹಣೆಗೆ ನಗರಸಭೆಯಿಂದ 168 ಲಕ್ಷ, ನೀರು ಸರಬರಾಜು ನಿರ್ವಹಣೆ ಮತ್ತು ಅಭಿವೃದ್ಧಿಗೆ ನಗರಸಭೆಯಿಂದ 178 ಲಕ್ಷ ಸರ್ಕಾರದ ಅನುದಾನ 10:25 ಲಕ್ಷ ಸೇರಿ ಒಟ್ಟು 12 03 ಲಕ್ಷಗಳು,ಪ.ಜಾ./ ಪ. ಪಂ / ಇತರೆ ಶೇ. ಗಳಾದ 24.10, 7.25 ಮತ್ತು ಶೇ. 5 ಸಮುದಾಯದ ಅಭಿವೃದ್ಧಿಗಾಗಿ ನಗರಸಭೆಯಿಂದ 10 ಲಕ್ಷ ಸರಕಾರದ ಅನುದಾನ 200 ಲಕ್ಷ ಸೇರಿ 210 ಲಕ್ಷ, ನಲ್ಮ್ ಯೋಜನೆಗೆ ಸರ್ಕಾರದ ಅನುದಾನ 70ಲಕ್ಷ,, ಸ್ವಚ್ಛ ಭಾರತ್ ಮಿಷನ್ ಕಾಮಗಾರಿಗಳಗಾಗಿ ಸರ್ಕಾರದ ಅನುದಾನದಿಂದ 300 ಲಕ್ಷ, ಘನ ತ್ಯಾಜ್ಯ ವಸ್ತುಗಳ ವಿಲೇವಾರಿ ಘಟಕದ ಅಭಿವೃದ್ಧಿ ಕಾಮಗಾರಿಗಾಗಿ ಸರ್ಕಾರದ ಅನುದಾನದಿಂದ 896 ಲಕ್ಷ, ಉದ್ಯಾನವನ ಮತ್ತು ಕೆರೆ ಅಭಿವೃದ್ಧಿ ಗಾಗಿ ಅಮೃತ್ಯು ಯೋಜನೆ ಅಡಿಯಲ್ಲಿ ನಗರಸಭೆಯಿಂದ 2.1 0 ಲಕ್ಷ ಸರ್ಕಾರದ ಅನುದಾನ 524 ಲಕ್ಷ ಸೇರಿ ಒಟ್ಟು 526.10 ಲಕ್ಷ, ವಿದ್ಯುತ್ ಬಿಲ್ ಪಾವತಿಗಾಗಿ ನಗರಸಭೆಯಿಂದ 20 ಲಕ್ಷ ಸರ್ಕಾರದ ಅನುದಾನದಿಂದ 1720 ಲಕ್ಷ ಸೇರಿ ದ್ 1740 ಲಕ್ಷ, ಖಾಯಂ ಮತ್ತು ಹೊರಗುತ್ತಿಗೆ ನೌಕರರ ವೇತನ ನಗರಸಭೆ ಯಿಂದ 120ಲಕ್ಷ ಸರಕಾರದ ಅನುದಾನ ದಿಂದ 1181 ಲಕ್ಷ ಸೇರಿ 1301 ಲಕ್ಷ ವಾಹನ ಗಳ ದುರಸ್ತಿ ಮತ್ತು ನಿರ್ವಹಣೆ ಹಾಗೂ ಇಂಧನದ ವೆಚ್ಚ ನಗರಸಭೆಯಿಂದ 226 ಲಕ್ಷ ದಸರಾ ಆಚರಣೆ ಮತ್ತು ರಾಷ್ಟ್ರೀಯ ಹಬ್ಬಗಳ ಆಚರಣೆಗೆ ನಗರಸಭೆಯಿಂದ 55 ಲಕ್ಷ ಕಚೇರಿಯ ಇತರೆ ವೆಚ್ಚಗಳಾಗಿ 195 ಲಕ್ಷ ಸೇರಿ ಒಟ್ಟು ನಗರಸಭಾ ನಿಧಿಯಿಂದ 1889. 10. ಲಕ್ಷ ಸರ್ಕಾರದ ಅನುದಾನದಿಂದ 9540 ಲಕ್ಷ ಸೇರಿ ಒಟ್ಟು12429.10 ಲಕ್ಷ ರೂಗಳ ಅಯ- ವ್ಯಯ ಗಳಿಗೆ ನಗರ ಸಭೆಯಿಂದ ಇಂದು ಕರೆದಿದ್ದ ಬಜೆಟ್ ಪೂರ್ವಸಭೆಯಲ್ಲಿ ಅಂಕಿ ಅಂಶಗಳನ್ನು ಮಂಡಿಸಲಾಯಿತು.
ಇದೇ ಸಂದರ್ಭದಲ್ಲಿ ಸಭೆಯಲ್ಲಿ ಉಪಸ್ಥಿತ ರಿದ್ದ ಸಂಘ-ಸಂಸ್ಥೆಗಳ ಅಧ್ಯಕ್ಷರು ಪದಾಧಿ ಕಾರಿಗಳು ಸ್ವಚ್ಛತೆ ನೀರು ಸರಬರಾಜು ರಸ್ತೆ ಅಗಲೀಕರಣ, ಪರಿಹಾರ ನೀಡಿದರು. ಕಟ್ಟಡಗಳ ತೆರವು ಆಗದಿರುವುದು ಅಂಬೇಡ್ಕರ್ ಭವನದ ಉದ್ಘಾಟನೆಗೆ ಅಗತ್ಯವಿರುವ ಹಣ ಬಿಡುಗಡೆಗೆ ಸರ್ಕಾರಿ ಶಾಲೆಗಳ ನಿರ್ವಹಣೆಗೆ ಹಾಗೂ ಶಾಲೆಗಳ ಸುತ್ತಮುತ್ತಲಿನ ಕಾಲಿ ಪ್ರದೇಶಗಳಲ್ಲಿ ಉದ್ಯಾನವನ ನಿರ್ಮಿಸುವ ಬಗ್ಗೆ ಕೆರೆ ಅಭಿವೃದ್ಧಿ ಬಗ್ಗೆ ಅಂಗಡಿಗಳ ಪರವಾನಿಗೆ ಶುಲ್ಕ ಸೇರಿದಂತೆ ಇತರೆ ಶುಲ್ಕಗಳ ಬಗ್ಗೆ ಸಹ ಚರ್ಚಿಸಲಾಯಿತು ಮನೆ ಮಾಲೀಕರ ಸಂಘದ ವತಿಯಿಂದ ಮನವಿ ನೀಡುವ ಬಗ್ಗೆ ಚರ್ಚಿಸಿ ಸಲಹೆ ನೀಡಲಾಯಿತು.
ಪರಿಹಾರ ನೀಡಿದರು ಕಟ್ಟಡಗಳು ತೆರವಾಗದರ ಬಗ್ಗೆ ಮಾಹಿತಿ ನೀಡಿದ ಪೌರಾಯುಕ್ತರು ಕ್ರೆಡಿಲ್ ವತಿಯಿಂದ ರಸ್ತೆ ಅಭಿವೃದ್ಧಿ ಮತ್ತು ರಸ್ತೆ ಅಗಲೀಕರಣಗಳನ್ನು ನಡೆಸಲಾಗುತ್ತಿದೆ ಅಧಿಕಾರಿಗಳು ಮತ್ತು ನಗರಸಭೆ ಅಧಿಕಾರಿಗಳ ಒಳಪಟ್ಟ ಸಮಿತಿಯು ಈಗಾಗಲೇ ಕ್ರಮ ಕೈಗೊಂಡಿದ್ದು ಮುಂದಿನ ಮೂರು ತಿಂಗಳ ಒಳಗಾಗಿ ಕ್ರಮ ಜರುಗಿಸಲಾಗುವುದು ಎಂದರು ಬೀದಿ ನಾಯಿಗಳ ಹಾವಳಿ ಬಗ್ಗೆ ಮಾತನಾಡಿದ ಪೌರಾಯುಕ್ತರು ನಾಯಿಗಳಿಗೆ ಸಂತಾನ ಹರಣ ಚಿಕಿತ್ಸೆಯನ್ನು ನಡೆಸಲಾಗುತ್ತಿದೆ ಎಂದರು ಭದ್ರಾ ನದಿಗೆ ಕಸವನ್ನು ಹಾಕುತ್ತಿರುವ ವಿಷಯವನ್ನು ಸಭೆಯಲ್ಲಿ ಪ್ರಸ್ತಾಪಿಸಿ ಸೇತುಗಳ ಮೇಲೆ ತಂತಿ ಬೇಲಿಯನ್ನು ನಿರ್ಮಿಸಿ ಎಂಬ ಸಲಹೆ ಯನ್ನು ಸಹ ನೀಡಿದರು ವೃತ್ತಗಳಲ್ಲಿ ಸಿ ಸಿ ಕ್ಯಾಮೆರಾ ಅಳವಡಿಸುವಂತೆ ಬಿ.ಎನ್.ರಾಜು ಸಲಹೆ ನೀಡಿ ಇದರಿಂದ ಅಪಘಾತಗಳು ಅನೈತಿಕ ಚಟುವಟಿಕೆಗಳ ನಿಲ್ಲುವಿಕೆ ಸೇರಿ ಹೆಲ್ಮೆಟ್ ಧರಿಸುವುದು ಖಡ್ಡಾಯ ವಾಗುತ್ತದೆ ಎಂದರು.
ನಗರಸಭಾ ಅಧ್ಯಕ್ಷ ಗೀತಾ ರಾಜಕುಮಾರ್ ಸವೆಯ ಅಧ್ಯಕ್ಷತೆ ವಹಿಸಿದ್ದರು ಉಪಾಧ್ಯಕ್ಷ ಬಶೀರ್ ಅಹ್ಮದ್ ಸ್ಥಾಯಿ ಸಮಿತಿ ಅಧ್ಯಕ್ಷ ಪ್ರೇಮ ಬದರಿನಾರಾಯಣ್ ಪೌರಾಯುಕ್ತ ಹೇಮಂತ್ ವೇದಿಕೆ ಯಲ್ಲಿದ್ದು ಸಭೆಗೆ ಮಾಹಿತಿಗಳನ್ನು ನೀಡಿದರು.
ವಿವಿಧ ಸಂಘಸಂಸ್ಥೆ ಮುಖಂಡರಾದ ಟಿ ಜಿ ಬಸವರಾಜಯ್ಯ, ಎಲ್ ವಿ ರುದ್ರಪ್ಪ, ಸಿ ಎನ್ ಗಿರೀಶ್ ಬಿ.ಎಲ್. ಚಂದ್ರಪ್ಪ, ಬಿ.ಎನ್. ರಾಜು, ವಸಂತ ಕುಮಾರ್ ವೆಂಕಟೇಶ್ ಸೇರಿದಂತೆ ಇತರರು ಸಭೆಯಲ್ಲಿ ಪಾಲ್ಗೊಂಡಿದ್ದರು.