ಭದ್ರಾವತಿ-ಚಾನಲ್ ಗೆ ಉರುಳಿಬಿದ್ದ ಕಾರು: ಚಾಲಕ ಪಾರು..!

ವಿಜಯ ಸಂಘರ್ಷ ನ್ಯೂಸ್ 
ಭದ್ರಾವತಿ: ತಾಲ್ಲೂಕಿನ ಬಾರಂದೂರಿನ ಸಮೀಪದ ಚಾನೆಲ್ ವೊಂದಕ್ಕೆ ಇಟಿಯಸ್ ವಾಹನ ಉರುಳಿ ಬಿದ್ದಿದ್ದು, ಚಾಲಕ ಪ್ರಾಣಾಪಾಯದಿಂದ ಪಾರಾಗಿರುವ ಘಟನೆ ಶುಕ್ರವಾರ ನಡೆದಿದೆ. 

ಪರಿಚಯಸ್ಥರನ್ನ ಡ್ರಾಪ್ ಮಾಡಿ ತರೀಕೆರೆ ಯಿಂದ ಹೊರಟ ಕಾರು ಬಾರಂದೂರಿನ ಬಳಿ ಚಾನೆಲ್ ಗೆ ಇಳಿದಿದೆ. ಚಾಲಕ ಕರೀಮ್ ಒಬ್ಬರೆ ಕಾರು ಚಲಾಯಿಸುತ್ತಿದ್ದು ಪ್ರಾಣಾ ಪಾಯದಿಂದ ಪಾರಾಗಿದ್ದಾರೆ. 

ಕರೀಮ್(39) ಅನ್ವರ್ ಕಾಲೋನಿಯ ನಿವಾಸಿಯಾಗಿದ್ದಾರೆ. ಮತ್ತೊಬ್ಬರ ಬಳಿ ಚಾಲಕ ವೃತ್ತಿಯಲ್ಲಿ ತೊಡಗಿ ಕೊಂಡಿದ್ದಾರೆ. ನಿತ್ರಾಣದಿಂದಾಗಿ ಚಾಲನೆಯಲ್ಲಿ ತೊಂದರೆ ಉಂಟಾದ ಪರಿಣಾಮ ಈ ಘಟನೆ ನಡೆದಿದೆ ಎನ್ನಲಾಗಿದೆ. 

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು