ವಿಜಯ ಸಂಘರ್ಷ ನ್ಯೂಸ್
ಭದ್ರಾವತಿ: ಸಾರ್ವಜನಿಕವಾಗಿ ಮಹಿಳೆ ಯರನ್ನು ಚುಡಾಯಿಸಿದ್ದನ್ನು ಪ್ರಶ್ನಿಸಿದ್ದಕ್ಕೆ, ಗುಂಪುಕಟ್ಟಿಕೊಂಡು ಮನೆಗೆ ನುಗ್ಗಿ ಮಾರಣಾಂತಿಕ ಹಲ್ಲೆ ನಡೆಸಿದ್ದ ಹತ್ತು ಮಂದಿ ಆರೋಪಿಗಳಿಗೆ ಭದ್ರಾವತಿಯ ನ್ಯಾಯಾಲಯವು ಜೈಲು ಶಿಕ್ಷೆ ಹಾಗೂ ದಂಡ ವಿಧಿಸಿ ಮಹತ್ವದ ತೀರ್ಪು ನೀಡಿದೆ.
ಕಳೆದ 2019ರ ಮಾರ್ಚ್ 8ರಂದು ಶಿವರಾತ್ರಿ ಹಬ್ಬದ ಸಂದರ್ಭದಲ್ಲಿ ಹಂಚಿನ ಸಿದ್ಧಾಪುರ ಗ್ರಾಮದ ನಿವಾಸಿ ಸಾಕ್ಷಿ ಅಭಿಲಾಷ್ ದೇವಸ್ಥಾನಕ್ಕೆ ತೆರಳಿದ್ದಾಗ, ಆರೋಪಿ ರುದ್ರೇಶ್ ಮತ್ತು ತಂಡದವರು ಅವಹೇಳನ ಕಾರಿಯಾಗಿ ಮಾತನಾಡಿದ್ದರು. ಅದನ್ನು ಪ್ರಶ್ನಿಸಿದ್ದಕ್ಕೆ ಇದೇ ದ್ವೇಷವನ್ನು ಇಟ್ಟು ಕೊಂಡು ಅಂದು ಸಂಜೆ ಆರೋಪಿಗಳು ಫಿರ್ಯಾದಿ ದಾರರ ಮನೆಗೆ ಅತಿಕ್ರಮ ಪ್ರವೇಶ ಮಾಡಿದ್ದರು. ಮನೆಯವರ ಮೇಲೆ ಅವಾಚ್ಯ ಶಬ್ದಗಳಿಂದ ನಿಂದಿಸಿ, ಮಹಿಳೆಯರ ಮೇಲೆ ದೈಹಿಕ ದೌರ್ಜನ್ಯ ಎಸಗಿದ್ದಲ್ಲದೆ, ಮನೆಯ ಸಿಸಿ ಕ್ಯಾಮೆರಾ ಹಾಗೂ ವಾಹನದ ಗ್ಲಾಸ್ ಪುಡಿಮಾಡಿ ಸಾರ್ವಜನಿಕ ಆಸ್ತಿಗೆ ಹಾನಿ ಉಂಟುಮಾಡಿದ್ದರು.
ಗಲಾಟೆಯನ್ನು ತಡೆಯಲು ಬಂದ ರಾಜಪ್ಪ ಎಂಬುವವರ ಮೇಲೆ ಆರೋಪಿಗಳು ಅಮಾನವೀಯವಾಗಿ ಹಲ್ಲೆ ನಡೆಸಿದ್ದರು. ಈ ಸಂಬಂಧ ಹೊಳೆಹೊನ್ನೂರು ಪೊಲೀಸ್ ಠಾಣೆ ಯಲ್ಲಿ ಐಪಿಸಿ ವಿವಿಧ ಕಲಂ ಅಡಿಯಲ್ಲಿ ಪ್ರಕರಣ ದಾಖಲಾಗಿತ್ತು. ಅಂದಿನ ತನಿಖಾಧಿ ಕಾರಿಗಳಾದ ಎಎಸ್ಐ ಕೃಷ್ಣ ನಾಯ್ಕ್ ತನಿಖೆ ನಡೆಸಿ ನ್ಯಾಯಾಲಯಕ್ಕೆ ದೋಷಾ ರೋಪಣ ಪತ್ರ ಸಲ್ಲಿಕೆ ಮಾಡಿದ್ದರು.
ಭದ್ರಾವತಿಯ 1 ನೇ ಎ.ಸಿ.ಜೆ ಮತ್ತು ಜೆಎಂಎಫ್ ಸಿ ನ್ಯಾಯಾಲಯದಲ್ಲಿ ವಿಚಾರಣೆ ನಡೆದಿದ್ದು, ಸರ್ಕಾರದ ಪರವಾಗಿ ಅಪರ ಸರ್ಕಾರಿ ಅಭಿಯೋಜಕ ತಿಪ್ಪೇಶ್ ರಾವ್ ಅವರು ವಾದ ಮಂಡಿಸಿದ್ದರು. ಸಾಕ್ಷ್ಯಾಧಾರಗಳನ್ನು ಪರಿಶೀಲಿಸಿದ ನ್ಯಾಯಾಧೀಶರಾದ ರವಿಕುಮಾರ್ ವಿ. ಅವರು, ಆರೋಪಿಗಳಾದ ರುದ್ರೇಶ್, ವಿಶ್ವ, ಶಿವು, ಗಿರೀಶ್, ಶಶಿಧರ್, ಮಧು, ಶೇಖರಪ್ಪ, ರಾಜಪ್ಪ, ಮಲ್ಲಿಕಾ ಮತ್ತು ಹರೀಶ ಎಂಬ ಹತ್ತು ಮಂದಿಗೆ ತಲಾ 1 ವರ್ಷ ಜೈಲು ಶಿಕ್ಷೆ ಹಾಗೂ ತಲಾ 8000 ರೂಪಾಯಿ ದಂಡ ವಿಧಿಸಿ ಆದೇಶಿಸಿ ದ್ದಾರೆ. ಅಲ್ಲದೆ, ದಂಡದ ಮೊತ್ತದ ಪೈಕಿ ಒಟ್ಟು 80,000 ರೂಪಾಯಿ ಗಳನ್ನು ಸಂತ್ರಸ್ತ ಗಾಯಾಳುಗಳಿಗೆ ಪರಿಹಾರ ವಾಗಿ ನೀಡಲು ಸೂಚಿಸಿದ್ದಾರೆ.