ವಿದ್ಯಾರ್ಥಿಗಳಿಗೆ SSLC ಪರೀಕ್ಷೆ ಉತ್ತಮ ಭವಿಷ್ಯದ ಹೆಬ್ಬಾಗಿಲು:ಮಣಿಶೇಖರ್

ವಿಜಯ ಸಂಘರ್ಷ ನ್ಯೂಸ್ 
ಭದ್ರಾವತಿ: ವಿದ್ಯಾರ್ಥಿಗಳಿಗೆ SSLC ಪರೀಕ್ಷೆ ಉತ್ತಮ ಭವಿಷ್ಯದ ಹೆಬ್ಬಾಗಿಲು ಆದ್ದರಿಂದ ವಿದ್ಯಾರ್ಥಿಗಳು ಉತ್ತಮ ಅಂಕ ತೆಗೆದುಕೊಂಡು ಉತ್ತಿರ್ಣ ರಾಗಿ ತಂದೆ,ತಾಯಿ, ಗುರುಗಳಿಗೆ ಮತ್ತು ಓದಿದ ಶಾಲೆಗೆ ಹೆಸರು ತನ್ನಿ ಎಂದು ತಾಲೂಕು ಬಗರ್ ಹುಕುಂ ಸಮಿತಿ ಅಧ್ಯಕ್ಷ ಮಣಿಶೇಖರ್ ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು.

ಸೋಮವಾರ ತಾಲ್ಲೂಕಿನ ಅರಳಿಹಳ್ಳಿ ಸರ್ಕಾರಿ ಪ್ರೌಢಶಾಲೆಯ SSLC ಪರೀಕ್ಷಾ ಕೇಂದ್ರದ ಅಭ್ಯರ್ಥಿಗಳಿಗೆ ಲೇಖನ ಸಾಮಗ್ರಿ ಮತ್ತು ಸಿಹಿ ವಿತರಿಸಿ ಅವರು ಮಾತನಾಡಿದರು.

ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷ ಪ್ರಕಾಶ್ ಮಾತನಾಡಿ, ಕೇವಲ ಪಾಸಾದ್ರೆ ಸಾಲದು, ವಿದ್ಯಾಭ್ಯಾಸ ಮುಂದುವರೆಸಿ ತಾಂತ್ರಿಕ ಕೋರ್ಸ್ ಮಾಡಿ ಹಳ್ಳಿಗಳನ್ನು ಸಬಲೀಕರಣ ಮಾಡಬೇಕೆಂದು ಕರೆ ನೀಡಿದರು.

ಪ್ರೌಢಶಾಲೆ ಉಪಾಧ್ಯಕ್ಷ ಸುರೇಶ್, ಹೇಮಾವತಿ, ಕಟ್ಟಡ ಕಾರ್ಮಿಕರ ಸಂಘದ ಉಪಾಧ್ಯಕ್ಷ ಅಬ್ದುಲ್ ಹಬೀಬ್, ಅನಿತಾ, ಗಣಪತಿ ಭಟ್, ಪಾರ್ಥಿಬನ್ ಪರೀಕ್ಷೆ ಬರೆಯುವ ವಿದ್ಯಾರ್ಥಿಗೆ ತಲಾ 2 ಪೆನ್ನುಗಳು, ಲೇಖನ ಸಾಮಗ್ರಿ ಮತ್ತು ಸಿಹಿ ವಿತರಿಸಿದರು.

ಈ ಸಂದರ್ಭದಲ್ಲಿ ಶಾಲೆಯ ಮುಖ್ಯೋಪಾಧ್ಯಾಯರು, ಸಹ ಶಿಕ್ಷಕರು ಸೇರಿದಂತೆ ಮಕ್ಕಳ ಪೋಷಕರು ಭಾಗವಹಿಸಿದ್ದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು