ಭದ್ರಾವತಿ-11 ಪ್ರಕರಣಗಳಲ್ಲಿ ಬೇಕಾಗಿದ್ದ ಆರೋಪಿ ಅರೆಸ್ಟ್

ವಿಜಯ ಸಂಘರ್ಷ ನ್ಯೂಸ್ 
ಭದ್ರಾವತಿ: ಜಾನುವಾರುಗಳನ್ನ ಅಪಹರಿಸು ವುದು ಮತ್ತು ದ್ವಿಚಕ್ರ ವಾಹನಗಳನ್ನ ಕದಿಯುವುದನ್ನೇ ಕಾಯಕ ಮಾಡಿಕೊಂಡಿದ್ದ ಆರೋಪಿ ಯನ್ನು ನ್ಯೂಟೌನ್ ಪೊಲೀಸರು ಬಂಧಿಸಿದ್ದಾರೆ. 
ಈತನ ಬಂಧನದಿಂದಾಗಿ 11 ಪ್ರಕರಣ ಗಳು ಬಯಲಿಗೆ ಬಂದಿವೆ. 2025ರ ಸೆಪ್ಟೆಂಬರ್ 24 ರಂದು ಹೊಸ ಸಿದ್ದಾಪುರ ಗ್ರಾಮದ ರಂಜಿತ್ ಎಂಬುವವರ ಕೊಟ್ಟಿಗೆಯಲ್ಲಿದ್ದ ಎರಡು ಹಸು ಹಾಗೂ ಒಂದು ಕರು ಕಳು ವಾಗಿತ್ತು. ಈ ಬಗ್ಗೆ ದಾಖಲಾಗಿದ್ದ ದೂರಿನ ಆಧಾರದ ಮೇಲೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿ.ನಿಖಿಲ್ ಅವರ ಮಾರ್ಗದರ್ಶನದಲ್ಲಿ ವಿಶೇಷ ತನಿಖಾ ತಂಡ ರಚಿಸಲಾಗಿತ್ತು.

ವಿಶೇಷ ತಂಡವು ಅಪ್ಪರ್ ಹುತ್ತಾ ನಿವಾಸಿ ದಿಲೀಪ ಅಲಿಯಾಸ್‌ ಕರಿಯ (20) ಎಂಬಾತನನ್ನು ಬಂಧಿಸಿದೆ. 5 ಜಾನುವಾರು ಕಳ್ಳತನ ಪ್ರಕರಣ, 4 ಬೈಕ್ ಕಳ್ಳತನ ಪ್ರಕರಣ, ಒಂದು ಕೊಲೆ ಯತ್ನ ಮತ್ತು ಹಲ್ಲೆ ಪ್ರಕರಣಗಳು ಸೇರಿದಂತೆ ಒಟ್ಟು 11 ಪ್ರಕರಣಗಳು ಪತ್ತೆಯಾಗಿವೆ.

ಆರೋಪಿಯಿಂದ ಅಂದಾಜು ₹95,500 ಮೌಲ್ಯದ 4 ದ್ವಿಚಕ್ರ ವಾಹನಗಳು ಹಾಗೂ ₹20,500 ನಗದು ಸೇರಿ ಒಟ್ಟು ₹1,16,000 ಮೌಲ್ಯದ ಸ್ವತ್ತನ್ನು ವಶಪಡಿಸಿಕೊಳ್ಳಲಾಗಿದೆ.

ವಿಶೇಷ ತಂಡದಲ್ಲಿ ಡಿವೈಎಸ್‌ಪಿ ಪ್ರಕಾಶ್‌ ರಾಥೋಡ್‌, ನಗರ ಇನ್ಸ್‌ಪೆಕ್ಟರ್‌ ಕೆ.ನಾಗಮ್ಮ ಮೇಲ್ವಿಚಾ ರಣೆಯಲ್ಲಿ, ನ್ಯೂಟೌನ್ ಪಿಎಸ್‌ಐ ಕವಿತಾ, ಸಿಬ್ಬಂದಿ ನವೀನ್.ಟಿ, ಆದರ್ಶ, ಆರ್, ಪ್ರಕಾಶ.ಜಿ.ಕೆ ಮತ್ತು ಪ್ರಸನ್ನ.ಹೆಚ್ ತಂಡದ ಆರೋಪಿ ಯನ್ನು ಬಂಧಿಸಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು