ಭದ್ರಾವತಿ-ಮುನೀರ್ ಅಹಮದ್ ಕುಂಸಿ ನಿಧನ: ಸಂತಾಪ

ವಿಜಯ ಸಂಘರ್ಷ ನ್ಯೂಸ್ 
ಭದ್ರಾವತಿ: ನಗರದ ಅನ್ವರ್ ಕಾಲೋನಿ ಉಸ್ಮಾನಿಯಾ ಚಾರಿಟ ಬಲ್ ಟ್ರಸ್ಟ್ ಸಂಸ್ಥಾಪಕ ಕಾರ್ಯದರ್ಶಿ, ಸಮಾಜ ಸೇವಕರು, ಅಪ್ಪಟ ಕನ್ನಡ ಅಭಿಮಾನಿ ಮುನೀರ್ ಅಹಮದ್ ಕುಂಸಿ(74) ಗುರುವಾರ ನಿಧನ ಹೊಂದಿದರು. 

ಪತ್ನಿ, ಇಬ್ಬರು ಪುತ್ರರು, ಓರ್ವ ಪುತ್ರಿ ಇದ್ದಾರೆ. ಇವರ ಅಂತ್ಯಕ್ರಿಯೆ ಶುಕ್ರವಾರ ಕುಂಸಿಯಲ್ಲಿ ನಡೆಯಲಿದ್ದು, ನಗರದ ಅನ್ವರ್ ಕಾಲೋನಿಯಲ್ಲಿ ವಾಸವಿದ್ದ ಮುನೀರ್ ಅವರು ಕೆಲವು ವರ್ಷಗಳಿಂದ ಅನಾರೋಗ್ಯಕ್ಕೆ ಒಳಗಾಗಿದ್ದರು. ಪ್ರಗತಿಪರ ಸಂಘಟನೆ ಗಳ ಒಕ್ಕೂಟದಲ್ಲಿ ಗುರುತಿಸಿ ಕೊಂಡು ಹಲವಾರು ಹೋರಾಟಗಳಲ್ಲಿ ಪಾಲ್ಗೊಂಡಿದ್ದರು. 

   ಸಂತಾಪ: 
ಒಬ್ಬ ಅಪ್ಪಟ ಕನ್ನಡ ಅಭಿಮಾನಿ ಯಾಗಿ, ಕವಿಯಾಗಿ ಮತ್ತು ಸಾಹಿತಿ ಯಾಗಿ ಕನ್ನಡ ಭಾಷೆ ಹಾಗೂ ಸಾಹಿತ್ಯಕ್ಕೆ ಅವರು ನೀಡಿರುವ ಕೊಡುಗೆ ಅಪಾರವಾಗಿದೆ. ಭದ್ರಾವತಿ ಮತ್ತು ಶಿವಮೊಗ್ಗ ಭಾಗದ ಸಾಂಸ್ಕೃತಿಕ ಹಾಗೂ ಸಾಮಾಜಿಕ ಲೋಕದ ಕೊಂಡಿ ಯಾಗಿದ್ದರು. ನಗರದಲ್ಲಿ ಉಸ್ಮಾನಿಯಾ ಚಾರಿಟೇಬಲ್ ಟ್ರಸ್ಟ್ ಸಂಸ್ಥಾಪಕ ಕಾರ್ಯದರ್ಶಿಯಾಗಿ ನೂರಾರು ಜನೋಪಕಾರಿ ಕೆಲಸಗಳಿಗೆ ಅವರು ಭದ್ರಾ ಬುನಾದಿ ಹಾಕಿಕೊಟ್ಟಿದ್ದರು. ಇವರ ಅಗಲಿಕೆ ಕನ್ನಡ ಸಾರಸ್ವತ ಲೋಕಕ್ಕೆ ಮತ್ತು ಸಮಾಜ ಸೇವೆಯ ಕ್ಷೇತ್ರಕ್ಕೆ ದೊಡ್ಡ ನಷ್ಟವಾಗಿದೆ. ಅವರ ಆತ್ಮಕ್ಕೆ ಚಿರಶಾಂತಿ ಸಿಗಲಿ ಎಂದು ಪ್ರಾರ್ಥಿಸುತ್ತೇವೆ ಎಂದು ಉಸ್ಮಾನಿಯಾ ಚಾರಿಟಬಲ್ ಟ್ರಸ್ಟ್ ಸಂಸ್ಥಾಪಕ ಅಧ್ಯಕ್ಷ ಜೆಬಿಟಿ ಬಾಬು, ಪತ್ರಕರ್ತ ಅಬ್ದುಲ್ ಖದೀರ್, ಮಾಜಿ ಉಪ ಮೇಯರ್ ಮಹಮದ್ ಸನಾವುಲ್ಲಾ ಸೇರಿದಂತೆ ಇನ್ನಿತರರು ಸಂತಾಪ ಸೂಚಿಸಿದ್ದಾರೆ. 

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು