ವಿಜಯ ಸಂಘರ್ಷ ನ್ಯೂಸ್
ಭದ್ರಾವತಿ: ಮಹಿಳೆಯರಿಗೆ ಇನ್ನಷ್ಟು ಸ್ವಾತಂತ್ರ್ಯ ಅಗತ್ಯ ಇದೆ. ಹಾಗೆಯೇ ಸ್ವೇಚ್ಯಾಚಾರ ಸ್ವಾತಂತ್ರ್ಯ ಅಲ್ಲ ಎಂಬ ಅರಿವೂ ಇರಬೇಕು ಎಂದು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯ ಕೋಗಲೂರು ತಿಪ್ಪೇಸ್ವಾಮಿ ಹೇಳಿದರು.
ಅವರು ತಾಲ್ಲೂಕಿನ ಯರೇಹಳ್ಳಿ ಅರಿವು ಗ್ರಂಥಾಲಯದಲ್ಲಿ ಮಹಿಳಾ ದಿನಾಚರಣೆಯ ಸಮಾರಂಭದಲ್ಲಿ ಮಾತನಾಡಿ, ಅನೇಕ ಮಹಿಳೆಯರು ಸ್ವಾವಲಂಬನೆ ಸಾಧಿಸಲು ಸರ್ಕಾರ ಸಾಕಷ್ಟು ಯೋಜನೆಗಳನ್ನು ಜಾರಿಗೆ ತಂದಿದೆ.
ಅನೇಕ ಸಂಘ ಸಂಸ್ಥೆಗಳು ಈ ನಿಟ್ಟಿನಲ್ಲಿ ಮಹಿಳೆಯರನ್ನು ಪ್ರೋತ್ಸಾಹಿಸಿ ಬೆಳೆಯಲು ಬೆಂಬಲ ನೀಡುತ್ತಿವೆ.ಮನೆಯಿಂದ ಹೊರ ಬರಲಾಗದ ಕಾಲಘಟ್ಟದಿಂದ ಇಂದಿನ ವರೆಗೂ ಮಹಿಳೆ ಸಬಲೆಯಾಗುವತ್ತ ಸಾಗಿ ಸಾಕಷ್ಟು ಮುಂದಿದ್ದು ಸಾಧನೆ ಶಿಖರ ಏರುತ್ತಿ ದ್ದಾಳೆ. ಪುರುಷ ಪ್ರಧಾನ ಸಮಾಜದಲ್ಲಿ ನಿಧಾನವಾಗಿ ಸಮಾನತೆ ಯತ್ತ ಸಾಗುತ್ತಿದೆ.ಆದರೂ ಅಲ್ಲಲ್ಲಿ ಮಹಿಳೆಯರ ಮೇಲೆ ದೌರ್ಜನ್ಯಗಳು ನಡೆಯುತ್ತಿದ್ದೂ ಅದು ನಿಲ್ಲುವವರೆಗೆ ಹೋರಾಟ ಸಾಗಬೇಕು ಎಂದರು.
ಗ್ರಾಮ ಪಂಚಾಯತ್ ಆಡಳಿತಾಧಿಕಾರಿ ರಜಿಯಾ ಬೇಗಂ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಮಹಿಳೆಯರ ಪರವಾಗಿ ಇರುವ ಯೋಜನೆಗಳ ಸದುಪಯೋಗ ಎಲ್ಲರಿಗೂ ಸಿಗುವಂತೆ ನೋಡಿಕೊಳ್ಳಿ ಎಂದರು.
ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಕುಮಾರ್, ಸಿಆರ್ ಪಿ ಲಲಿತ ಮಾತನಾಡಿದರು.
ಸಮಾರಂಭದಲ್ಲಿ ಮಹಿಳಾ ಮಕ್ಕಳ ಇಲಾಖೆಯ ಅಧಿಕಾರಿಗಳು ಶಿಕ್ಷಕಿ ಯರು,ಗ್ರಾಮದ ಮಹಿಳೆಯರು ಭಾಗವಹಿಸಿದ್ದರು.
ಸುಮಾ ಸ್ವಾಗತಿಸಿ,ಅರಿವು ಕೇಂದ್ರದ ಗ್ರಂಥಾಲಯ ಮೇಲ್ವಿಚಾರಕಿ ಮಾಲ ನಿರೂಪಿಸಿ ವಂದಿಸಿದರು.
ಸಮಾರಂಭಕ್ಕೂ ಮುನ್ನ ಮಹಿಳೆ ಯರಿಗೆ ವಿವಿಧ ಆಟೋಟ ಸ್ಪರ್ಧೆಗಳನ್ನು ಆಯೋಜಿಸಲಾಗಿತ್ತು. ಸ್ಪರ್ಧೆಗಳಲ್ಲಿ ವಿಜೇತರದವರಿಗೆ ಬಹುಮಾನ ವಿತರಿಸಲಾಯಿತು.