ವಿಜಯ ಸಂಘರ್ಷ ನ್ಯೂಸ್
ಭದ್ರಾವತಿ: ಅನಾಥರಿಗೆ ಅನುಕಂಪ ತೋರದೆ ಆಶ್ರಯ ನೀಡುವಂತಾಗ ಬೇಕು, ಆಗಲೇ ಅವರ ಬಾಳಿನಲ್ಲಿ ಹೊಸ ಬೆಳಕು ನೀಡಿದಂತಾಗುತ್ತದೆ ಎಂದು ನಗರಸಭಾ ಸದಸ್ಯ ಚೆನ್ನಪ್ಪ ಹೇಳಿದರು.
ಅವರು ಈಚೆಗೆ ತಾಲ್ಲೂಕಿನ ಸಿರಿಯೂರು ವೀರಾಪುರದ ಹುಳಿಬಂಡೆ ದೇವಾಲಯದ ಮುಂಭಾಗ ಬೆಳಕು ಚಾರಿಟೇಬಲ್ ಟ್ರಸ್ಟ್ ವತಿಯಿಂದ ನೂತನ ಅನಾಥಾಶ್ರಮ ಮತ್ತು ವೃದ್ದಾಶ್ರಮ ಉದ್ಘಾಟಿಸಿ ಮಾತನಾಡಿ,
ಅನಾಥರ ಆಸರೆಯಾಗಿರಲು ಇಲ್ಲಿನ ಟ್ರಸ್ಟ್ ಪದಾಧಿಕಾರಿಗಳು ಕೈಗೊಂಡಿ ರುವ ಪ್ರಯತ್ನಗಳು ನೆರವೇರಲಿ ಎಂದು ಹರಿಸಿದರು.
ಆಶ್ರಮದ ಅಧ್ಯಕ್ಷ ಜಯಶೀಲ ಮಾತನಾಡಿ, ಮನೆಯಿಲ್ಲದ, ನಿರ್ಗತಿಕ ರಾದ ಅಥವಾ ಕುಟುಂಬದ ಆಶ್ರಯ ವಿಲ್ಲದ ಹಿರಿಯ ನಾಗರಿಕರಿಗೆ ಸುರಕ್ಷಿತ ಆಶ್ರಯ ನೀಡುವುದು ನಮ್ಮ ಗುರಿ ಯಾಗಿದೆ.ಉಚಿತ ವಸತಿ,ಊಟ, ವೈದ್ಯಕೀಯ ಆರೈಕೆಗಳು ಲಭ್ಯವಿದೆ. ಈ ಹಿನ್ನಲೆಯಲ್ಲಿ ಆಶ್ರಮಕ್ಕೆ ಸೇರಲು ಅಥವಾ ಸೇರಿಸಲು 8861629550, 9611610208 ಈ ನಂಬರ್ ಗೆ ಸಂಪರ್ಕ ಮಾಡಲು ಕೋರಿದರು.
ಈ ಸಂದರ್ಭದಲ್ಲಿ ನಗರಸಭಾ ಸದಸ್ಯರಾದ ಸುದೀಪ್, ಮೋಹನ್, ಸಂತೋಷ್ ತಾಲೂಕು ಶಿಕ್ಷಣ ಸುಧಾರಣ ಸಮಿತಿ ಅಧ್ಯಕ್ಷ ಸಿ.ಜಯಪ್ಪ,ಸದಸ್ಯ ಮಂಜುನಾಥ್, ಬಿಸಿ ಊಟ ಸಂಘದ ಜಿಲ್ಲಾಧ್ಯಕ್ಷೆ ಹನುಮಕ್ಕ, ಸಾಮಾಜಿಕ ಹೋರಾಟ ಗಾರ ತೀರ್ಥೇಶ್, ಪಾಸ್ಟರ್ ರೆಮಂಡ್, ಪಾಸ್ಟರ್ ಜಯಪ್ರಕಾಶ್, ಕಾರುಣ್ಯ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಜಿ.ರಾಜು ಸೇರಿದಂತೆ ಮತ್ತಿತರರು ಇದ್ದರು.