ವಿಜಯ ಸಂಘರ್ಷ ನ್ಯೂಸ್
ಭದ್ರಾವತಿ : ವಿಐಎಸ್‌ಎಲ್ ಕಾರ್ಖಾನೆಗೆ ಸೇರಿದ ಸಾವಿರಾರು ಕ್ವಾಟ್ರಸ್ ಮನೆಗಳಿರುವ ಬಡಾವಣೆ ಗಳ ಎಲ್ಲೆಡೆ ಸ್ವಚ್ಚತೆ ಕಾಣದೆ ಎಲ್ಲೆಂದರಲ್ಲಿ ಕಸದ ರಾಶಿಗಳು ಬಿದ್ದು ಅಸಹ್ಯ ಹುಟ್ಟಿಸಿದೆ ನಗರಾಡಳಿತದಿಂದ ಕ್ರಮ ಅಗತ್ಯ ಮತ್ತು ಚರ್ಚ್ ಮೈದಾನ ದಲ್ಲಿ ಹಿಂದಿನಂತೆ ತಿಂಗಳ ಸಂತೆ ನಡೆಸಲು ಅವಕಾಶ ಕಲಿಸ ಬೇಕೆಂದು ಕಾರ್ಖಾನೆಯ ಕಾರ್ಯಪಾಲಕ ನಿರ್ದೇಶಕರಿಗೆ ಮತ್ತು ಮಾನವ ಸಂಪನ್ಮೂಲ ವಿಭಾಗದ ಹಿರಿಯ ಮಹಾ ಪ್ರಬಂಧಕರಿಗೆ ಸಾಮಾಜಿಕ ಹೋರಾಟಗಾರ ಶಶಿಕುಮಾರ್ ಎಸ್.ಗೌಡ ಮನವಿ ಸಲ್ಲಿಸಿದ್ದಾರೆ.
ನ್ಯೂಕಾಲೋನಿ, ನ್ಯೂಟೌನ್, ಜನ್ನಾಪುರ, ಹುತ್ತಾಕಾಲೋನಿ, ಗೋಲ್ಡನ್ ಜ್ಯೂಬಿಲಿ, ಮಹಡಿ " ಶರಾವತಿ ಮನೆಗಳು, ಮನೆಗಳು, ವುಡ್ಯಾರ್ಡ್,ಎಸ್‌ಎವಿ ಶಾಲೆ, ಅಮಲೋದ್ಭವಿ ಪಕ್ಕದ ಪಾರ್ಕ್ ರಸ್ತೆ, ಸೇಂಟ್ ಚಾರ್ಲ್, ಹುತ್ತಾಕಾಲೋನಿ ಸರಕಾರಿ ಪ್ರೌಢಶಾಲೆ ಆವರಣ ಮತ್ತು ಹೊರಭಾಗ ರಸ್ತೆ, ಅಂಡರ್ ಪಾಸ್ ಸೇರಿದಂತೆ ಹಲವೆಡೆ ಕ್ವಾಟ್ರಸ್‌ಗಳಿರುವ ಕಡೆಗಳಲ್ಲಿ ಸ್ವಚ್ಚತೆ ಇಲ್ಲದೆ ಎಲ್ಲಿ ನೋಡಿದ ರಲ್ಲಿ ಕಸದ ರಾಶಿ ಬಿದ್ದು ಅಸಹ್ಯ ಹುಟ್ಟಿಸಿದೆ. ತಿಂಗಳಾದರೂ ಕಸ ತೆಗೆಯದೆ ದುರ್ನಾತ ಮೂಗಿಗೆ ಬಡಿಯುತ್ತಿದೆ. ವಾಕಿಂಗ್ ಟ್ರ್ಯಾಕ್ ಗಳಲ್ಲಿ ಹಾಕಿರುವ ಟೈಲ್ಸ್ ಗಳ ಮಧ್ಯಭಾಗ ದಲ್ಲಿ ಹುಲ್ಲುಗಳು ಬೆಳೆದಿವೆ ಅಲ್ಲದೆ ಹಸು ಕರುಗಳ ಸಗಣಿ ಬಿದ್ದು ವಾಯು ವಿಹಾರಕ್ಕೆ ಕಾಲಿಡಲು ಆಗುತ್ತಿಲ್ಲ.
ಕಸದ ರಾಶಿಗಳಲ್ಲಿ ಸೇರಿಕೊಂಡಿ ರುವ ಸ್ಯಾನಿಟರಿ ಪ್ಯಾಡುಗಳು ಬಳಸಿದ ಇಂಜಕ್ಷನ್ ಗಳ ಪರಿಕರಗಳು ಇನ್ನಿತರೆ ತ್ಯಾಜ್ಯಗಳನ್ನು ಬೀದಿ ನಾಯಿಗಳು ಬಿಡಾಡಿ ಹಸುಗಳು, ಎಳೆದಾಡಿಕೊಂಡು ರಸ್ತೆಗೆ ಬಿಡುತ್ತಿವೆ. ಇದರಿಂದ ಜನರಿಗೆ ಮಾರಕ ರೋಗಗಳ ಭೀತಿ ಹೆಚ್ಚಾಗಿದೆ. ನಗರದ ಸ್ವಚ್ಚತೆಗೆ ಧಕ್ಕೆಯಾಗುತ್ತಿದೆ. ಸಾರ್ವಜನಿಕರಿಗೆ ಪಾದಚಾರಿಗಳಿಗೆ ಶಾಲಾ ಮಕ್ಕಳಿಗೆ ವಾಹನ ಸವಾರರಿಗೆ ತೊಂದರೆಯಾಗುತ್ತಿದೆ. ಕಸವನ್ನು ವಿಲೇವಾರಿ ಮಾಡದೇ ಇರುವುದು ಮತ್ತು ಕಸ ವಿಲೇವಾರಿಯ ಗುತ್ತಿಗೆದಾರರ ನಿರ್ಲಕ್ಷ್ಯ ಇದಕ್ಕೆ ಕಾರಣವಾಗಿದೆ. ಬೇಕಾಬಿಟ್ಟಿ ಕಸ ವಿಲೇವಾರಿ ಮಾಡುತ್ತಿರುವುದು ಮುಖ್ಯ ಕಾರಣವಾಗಿದೆ. ನಿರ್ಲಕ್ಷಿತ ಗುತ್ತಿಗೆ ದಾರನ ವಿರುದ್ಧ ಸೂಕ್ತ ಕ್ರಮ ಅಗತ್ಯ ತೆಗೆದು ಕೋಳ್ಳಬೇಕು.
ವಿಐಎಎಲ್ ಆಡಳಿತವು ಈ ಹಿಂದೆ ನ್ಯೂಟೌನ್ ಚರ್ಚ್ ಮೈದಾನದಲ್ಲಿ ಪ್ರತಿ ತಿಂಗಳು 8 ರಂದು ಸಂತೆ ನಡೆಸಲು ಅವಕಾಶ ನೀಡಿತ್ತು. ಇದರಿಂದ ಕಾರ್ಮಿಕ ಕುಟುಂಬ ಗಳಿಗೆ ಮತ್ತು ಸುತ್ತಮುತ್ತಲ ಪ್ರದೇಶ ಹಾಗೂ ಹಳೇನಗರದ ನಾಗರೀಕರಿಗೆ ವಿಶೇಷ ವಾಗಿ ಹಿರಿಯ ನಾಗರೀಕರಿಗೆ ಮಹಿಳೆ ಯರಿಗೆ ವರದಾನವಾಗಿತ್ತು. ನಂತರ ಎದುರಾದ ಮಾರಕ ಕೊರೋನಾ ದಿಂದಾಗಿ ನಿಂತ ಸಂತೆ ಇಂದಿಗೂ ಆರಂಭಗೊಂಡಿಲ್ಲ. ಕಾರ್ಖಾನೆಯ ಆಡಳಿತ ವರ್ಗವು ಪರಿಶೀಲನೆ ನಡೆಸಿ ತಿಂಗಳ ಸಂತೆಗೆ ಪುನಹ ಅವಕಾಶ ಕಲಿಸ ಬೇಕು. ಜನರಿಗೆ ಅನುಕೂಲ ಸಿಂಧುವಾಗ ಬೇಕು. ಇದರಿಂದ ಕಾರ್ಖಾನೆಯ ಆಡಳಿತದ ಬೊಕ್ಕಸಕ್ಕೆ ಆದಾಯ ಹೆಚ್ಚಾಗಲಿದೆ ಎಂದು ಸಾಮಾಜಿಕ ಹೋರಾಟಗಾರ ಶಶಿಕುಮಾರ್ ಎಸ್.ಗೌಡ ಮನವಿ ಮಾಡಿದ್ದಾರೆ.