ವಿಜಯ ಸಂಘರ್ಷ
ಶಿವಮೊಗ್ಗ: ರಾಜ್ಯ ಪಾಲರಿಗೆ ಬೇಟಿಮಾಡಿ ಮುಖ್ಯಮಂತ್ರಿ ಸ್ಥಾನಕ್ಕೆ ಬಿ.ಎಸ್ ಯಡಿಯೂರಪ್ಪ ರಾಜಿನಾಮೆ ನೀಡಿದ ಹಿನ್ನೆಲೆ ಸ್ವಕ್ಷೇತ್ರ ಶಿಕಾರಿಪುರದಲ್ಲಿ ಕಾರ್ಯಕರ್ತರ ಪ್ರತಿಭಟನೆ ಪ್ರಾರಂಭವಾಗಿದೆ.
ಪಟ್ಟಣದ ಮುಖ್ಯ ರಸ್ತೆಗಳಲ್ಲಿ ಜಮಾಯಿಸಿದ ಅಭಿಮಾನಿಗಳು ಕೇಂದ್ರ ಬಿ.ಜೆ.ಪಿ ರಾಷ್ಟ್ರೀಯ ನಾಯಕರ ವಿರುದ್ಧ ಘೋಷಣೆಗಳನ್ನ ಕೂಗಿ ಪ್ರತಿಭಟನೆ ನಡೆಸಿದರು. ಪಕ್ಷಕಟ್ಟುವಲ್ಲಿ ಯಡಿಯೂರಪ್ಪನವರು ಪ್ರಮುಖರು. ಅವರು ಕಟ್ಟಿರುವ ಕೋಟೆಯಲ್ಲಿ ಮತ್ತೊಬ್ಬರು ಅಧಿಕಾರ ನಡೆಸೋಕೆ ಮುಂದಾಗಿರೋದು ದುರಂತ. ಇದನ್ನು ತೀರ್ವವಾಗಿ ಖಂಡಿಸುವುದಾಗಿ ಎಚ್ಚರಿಸಿದರು.
ಯಡಿಯೂರಪ್ಪ ರಾಜಿನಾಮೆ ನೀಡಿರೋ ಕಾರಣ ಪಟ್ಟಣದಲ್ಲಿ ಸ್ಮಶಾನ ಮೌನವಾಗಿದೆ, ಬಿ.ಎಸ್.ವೈ ರಾಜಿನಾಮೆ ಬಿ.ಜೆ.ಪಿಯ ಸರ್ವನಾಶಕ್ಕೆ ನಾಂದಿಯಾಗಿದೆ, ಬಿ.ಜೆ.ಪಿಯವರಿಗೆ ತಾಕತ್ ಇದ್ದಲ್ಲಿ ಸ್ವಂತಬಲದಿಂದ ಪಕ್ಷಕಟ್ಟಿ ಅಧಿಕಾರಕ್ಕೆ ಬರಬೇಕಿತ್ತು ಆದರೆ ಯಡಿಯೂರಪ್ಪನವರು ಕಟ್ಟಿರೋ ಪಕ್ಷದಲ್ಲಿ ಅಧಿಕಾರ ನಡೆಸಲು ಹಕ್ಕಿಲ್ಲಾ ಎಂದು ಅಭಿಮಾನಿಗಳು ಪ್ರತಿಭಟನೆ ನಡೆಸಿದ್ದಾರೆ.
ವಿಜಯ ಸಂಘರ್ಷಕ್ಕೆ ಸುದ್ದಿ ನೀಡಲು ಕರೆ ಮಾಡಿ +91 9743225795