ಸಿಎಂ ಸ್ಥಾನಕ್ಕೆ ಬದಲಿ ಯಾರನ್ನೂ ಸೂಚಿಸಿಲ್ಲ : ಬಿ.ಎಸ್.ಯಡಿಯೂರಪ್ಪ

 


ವಿಜಯ ಸಂಘರ್ಷ

ಬೆಂಗಳೂರು: ಬಿಜೆಪಿ ಸರ್ಕಾರ ರಾಜ್ಯದಲ್ಲಿ ಅಸ್ತಿತ್ವಕ್ಕೆ ಬಂದು ಎರಡು ವರ್ಷ ತುಂಬಿದ ಸಂದರ್ಭದಲ್ಲೇ ಮುಖ್ಯಮಂತ್ರಿ ಸ್ಥಾನಕ್ಕೆ ಬಿ.ಎಸ್. ಯಡಿಯೂರಪ್ಪ ನೀಡಿದ ರಾಜೀನಾಮೆ ಯನ್ನು ರಾಜ್ಯಪಾಲರು ಅಂಗೀಕರಿಸಿದ್ದಾರೆ.

ಬಳಿಕ ಅವರು ಸುದ್ದಿಗಾರರಿಗೆ ಮಾತನಾಡಿದ ಅವರು ಬದಲಿ ವ್ಯವಸ್ಥೆ ಯಾಗುವವರೆಗೆ ಹುದ್ದೆಯಲ್ಲಿ ಮುಂದುವರೆಯುವಂತೆ ಸೂಚನೆ ನೀಡಿದ್ದಾರೆ ಎಂದರು.

ದೇಶದ ಪ್ರಧಾನಿ ನರೇಂದ್ರ ಮೋದಿ ಯವರಿಗೆ, ಅಮಿತ್ ಶಾಗೆ, ಜೆಪಿ ನಡ್ಡಾ ಅವರಿಗೆ ಕೃತಜ್ಞತೆಯನ್ನು ಸಲ್ಲಿಸುತ್ತೇನೆ. 75 ವರ್ಷ ದಾಟಿದಂತ ಯಾರಿಗೂ ದೇಶದಲ್ಲಿ ಎಲ್ಲಿಯೂ ಬಿಜೆಪಿ ಪಕ್ಷ ಅಧಿಕಾರ ನೀಡಿಲ್ಲ. ಹೀಗಾಗಿ ರಾಷ್ಟ್ರೀಯ ನಾಯಕರಿಗೆ ಅಭಿನಂದನೆ ಸಲ್ಲಿಸುವುದಾಗಿ ಹೇಳಿದರು. ಬದಲಿ ಸಿಎಂ ಸ್ಥಾನಕ್ಕೆ ಯಾರ ಹೆಸರನ್ನು ಸೂಚನೆ ಮಾಡಿಲ್ಲ ಎಂದು  ಸ್ಪಷ್ಟಪಡಿಸಿದರು.

ನನಗೆ ಇಲ್ಲಿಯವರೆಗೆ ಸಹಕಾರ ನೀಡಿದಂತ ಎಲ್ಲರಿಗೂ ಧನ್ಯವಾದಗಳು. ರಾಜ್ಯದ ಜನರಿಗೆ, ಶಿಕಾರಿಪುರ ಕ್ಷೇತ್ರದ ನನ್ನ ಜನತೆಗೆ ಧನ್ಯವಾದಗಳು. ಮುಂದಿನ ದಿನಗಳಲ್ಲಿ ಪಕ್ಷವನ್ನು ಸಂಘಟಿಸುವ ನಿಟ್ಟಿನಲ್ಲಿ ಕೆಲಸ ಮಾಡುತ್ತೇನೆ. ಆ ನಿಟ್ಟಿನಲ್ಲಿ ಎಲ್ಲರೂ ಕೆಲಸ ಮಾಡುವುದಾಗಿ ಯಡಿಯೂರಪ್ಪ ಹೇಳಿದರು.

ಸಡಗರ, ಸಂಭ್ರಮ ಪಡಬೇಕಾದ  ಸನ್ನಿವೇಶದಲ್ಲಿ ಕಣ್ಣೀರಿನ ವಿದಾಯ ಹೇಳಿದ್ದು ದುರಂತದ ಸಂಗತಿ. ಸಂತೋಷದಿಂದಲೇ ರಾಜೀನಾಮೆ ಕೊಡುತ್ತಿದ್ದೇನೆ ಎಂದು ಬಾಯಿ ಬಿಟ್ಟು ಹೇಳಿದರೂ ಅವರ ಮನಸ್ಸಿನ ದುಗುಡ ಕಣ್ಣೀರಿನ ಮೂಲಕವೇ ಹೊರಜಗತ್ತಿಗೆ ಕೊಡಬೇಕಾದ ಸಂದೇಶ ರವಾನೆ ಮಾಡುತ್ತಿದ್ದೇನೆ.

ಬಿಜೆಪಿ ವಿರುದ್ಧ ತೋಳಮಡಚಿ, ಸೆಟೆದು ಹೊರ ಹೋಗಿದ್ದ ಯಡಿಯೂರಪ್ಪ ಮತ್ತೆ ರಾಜಕೀಯ ಚದುರಂಗದಾಟದಲ್ಲಿ ಬಿಜೆಪಿಯ ಒಳಕ್ಕೆ ಬಂದು ಪಕ್ಷದ ಅಧ್ಯಕ್ಷರಾಗಿ, ನಂತರ ಮುಖ್ಯಮಂತ್ರಿ ಯಾಗಿ, ಎರಡು ವರ್ಷಗಳ ಅಧಿಕಾರವನ್ನು ಪೂರ್ಣ ಮಾಡಿದ್ದಾರೆ. ಚುನಾವಣಾ ಫಲಿತಾಂಶ ಬರುವುದಕ್ಕೂ ಮುನ್ನವೇ, ನಾನೇ ಮುಖ್ಯಮಂತ್ರಿ, ಇಂತಹ ದಿನವೇ ಮುಖ್ಯಮಂತ್ರಿಯಾಗಿ, ಪ್ರಮಾಣವಚನ ಸ್ವೀಕರಿಸುತ್ತೇನೆ ಎಂದು ಹೇಳಿ, ಅದರಂತೆ ಮಾಡಿ ತೋರಿಸಿದ ಛಲದಂಕಮಲ್ಲ ಯಡಿಯೂರಪ್ಪ ಇಂದು ಹೈಕಮಾಂಡ್ ವಿಶ್ವಾಸ ಕಳೆದುಕೊಂಡು ನಿರ್ಗಮಿಸಿದ್ದು ರಾಜಕೀಯ ಬದುಕಿನ ಪುಟಗಳಲ್ಲಿ ಮರೆಯಲಾಗದ ಅಧ್ಯಾಯ.
ಅಧಿಕಾರ ಕಳೆದುಕೊಂಡ ನೋವು, ಸಂಕಟ ಏನೇ ಇದ್ದರೂ ರಾಜ್ಯದ ಉದ್ದಗಲಕ್ಕೂ ಪ್ರವಾಸ ಮಾಡಿ ಎಲ್ಲರ ಸಹಕಾರದೊಂದಿಗೆ ಬಿಜೆಪಿಯನ್ನು ಮರಳಿ ಅಧಿಕಾರಕ್ಕೆ ತರುವವರೆಗೂ ವಿರಮಿಸುವುದಿಲ್ಲ. ನಾಳೆಯಿಂದಲೇ ಈ ಕೆಲಸ ಮಾಡುತ್ತೇನೆ ಎಂದು ಹೇಳುವ ಮೂಲಕ, ರಾಜ್ಯ ರಾಜಕೀಯದಲ್ಲಿ ಹಿಡಿತ ಸಾಧಿಸಿ , ಮಗನಿಗೆ ಉಜ್ವಲ ಭವಿಷ್ಯ ಕಟ್ಟಿ ಕೊಡುವ ಕನಸು ಕಟ್ಟಿಕೊಂಡಿರುವುದು ಅವರ ಮನಸ್ಸಿನ ಭಾವನೆಗಳಲ್ಲಿ ವ್ಯಕ್ತವಾಗಿದೆ.

ವಿಜಯ ಸಂಘರ್ಷಕ್ಕೆ ಸುದ್ದಿ ನೀಡಲು ಕರೆ ಮಾಡಿ +91 9743225795

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು