ಅಭಿನಯ ನಿಲ್ಲಿಸಿದ ಜಯಂತಿ..!

 


ವಿಜಯ ಸಂಘರ್ಷ

ಬೆಂಗಳೂರು: ಅಭಿನಯ ಶಾರದೆ ಜಯಂತಿ ವಿಧಿವಶರಾಗಿದ್ದಾರೆ.

ಸುಬ್ರಹ್ಮಣ್ಯ ಸ್ವಾಮಿ ಹಾಗೂ ಸಂತಾನಲಕ್ಷ್ಮೀ ದಂಪತಿಯ ಹಿರಿಯ ಪುತ್ರಿ. ಗಡಿನಾಡು ಬಳ್ಳಾರಿಯಿಂದ ಬಂದು ಬೆಳೆದಿದ್ದೇ ರೋಚಕ.

76 ವರ್ಷ ವಯಸ್ಸಿನ ಜಯಂತಿ ಕನ್ನಡ, ತಮಿಳು, ತೆಲುಗು, ಹಿಂದಿ, ಮರಾಠಿ ಮಲಯಾಳಿ ಸೇರಿದಂತೆ ಆರು ಭಾಷೆಗಳ ಸುಮಾರು 500ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ್ದರು.

ಜೇನುಗೂಡು ಸಿನಿಮಾದ ಮೂಲಕ ನಾಯಕ ನಟಿಯಾಗಿ ಚಿತ್ರರಂಗಕ್ಕೆ ಕಾಲಿಟ್ಟಿದ್ದರು. ವರನಟ ರಾಜ್ ಕುಮಾರ್ ಜೊತೆ 47 ಸಿನಿಮಾಗಳಲ್ಲಿ ನಟನೆ ಮಾಡಿರುವುದು ದಾಖಲೆಯೇ ಸರಿ. ಮಯೂರ, ಎಡಕಲ್ಲುಗುಡ್ಡದ ಮೇಲೆ, ಮಸಣದ ಹೂವು ಸೇರಿದಂತೆ ಹಲವು ಹಿಟ್ ಚಿತ್ರಗಳಲ್ಲಿ ನಟಿಸಿದ್ದರು.

ಅಸ್ತಮಾ ಹಾಗೂ ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಅವರು ಮನೆಯಲ್ಲೇ ಕೊನೆಯ ಉಸಿರು ಎಳೆದಿದ್ದಾರೆ. ಕಳೆದ ಒಂದು ವರ್ಷದಿಂದ ತೀವ್ರ ಅಸ್ವಸ್ಥಗೊಂಡಿದ್ದರು. ಆಗಿದ್ದಾಂಗೆ ಆಸ್ಪತ್ರೆಗೆ ಹೋಗುತ್ತಿದ್ದರು.

ಬಳ್ಳಾರಿಯಲ್ಲಿ ಜನಿಸಿದ್ದ ಕಮಲಾ ಕುಮಾರಿ ಅವರಿಗೆ ಪುಟ್ಟಸ್ವಾಮಿ ಜಯಂತಿ ಎಂಬ ಹೆಸರು ನಾಮಕರಣ ಮಾಡಿದರು. ತಮಿಳು, ತೆಲುಗು ಭಾಷೆಯ ಸ್ಟಾರ್ ನಟರ ಫೇವರಿಟ್ ‌ನಟಿಯಾಗಿದ್ದರು. ತೆಲುಗಿನ ಆರಾಧ್ಯದೈವ ಎನ್. ಟಿ. ರಾಮರಾವ್ ಫೇವರಿಟ್ ನಟಿ ಆಗಿದ್ದರು.

ಅದ್ಭುತ ಕಲಾವಿದೆ ನಿಧನಕ್ಕೆ ಎಲ್ಲೆಡೆ ಸಂತಾಪ ವ್ಯಕ್ತವಾಗುತ್ತಿದೆ. ದೊಡ್ಡ ದೊಡ್ಡ ನಟ, ನಟಿಯರು ಸಂತಾಪ ಸೂಚಿಸಿದ್ದಾರೆ.

ವಿಜಯ ಸಂಘರ್ಷಕ್ಕೆ ಸುದ್ದಿ ನೀಡಲು ಕರೆ ಮಾಡಿ +91 9743225795

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು