ವಿಜಯ ಸಂಘರ್ಷ
ಬೆಂಗಳೂರು: ಮುಂಬರುವ ಪದ್ಮ ಪುರಸ್ಕಾರಕ್ಕೆ ಅಭಿನಯ ಬ್ರಹ್ಮನಟ ಅನಂತನಾಗ್ ಅವರ ಹೆಸರು ನಾಮನಿರ್ದೇಶಿಸಲು ನಾವೆಲ್ಲರೂ ಒಂದಾಗೋಣ ಎಂದು ನಟ ರಿಷಭ್ ಶೆಟ್ಟಿ ಮನವಿ ಮಾಡಿದ್ದಾರೆ.
ದೇಶದ ಅತ್ಯುನ್ನತ ಗೌರವಗಳಾದ ಪದ್ಮಭೂಷಣ, ಪದ್ಮವಿಭೂಷಣ ಹಾಗೂ ಪದ್ಮಶ್ರೀ ಪ್ರಶಸ್ತಿಗಳಿಗೆ ಮುಂದಿನ ವರ್ಷ ಯಾರು ಭಾಜನರಾಗಬೇಕು ಎಂಬ ಆಯ್ಕೆಯನ್ನು ಪ್ರಧಾನಿ ನರೇಂದ್ರ ಮೋದಿಯವರು ಜನತೆಗೇ ನೀಡಿರುವ ಹಿನ್ನೆಲೆಯಲ್ಲಿ ರಿಷಭ್ ಶೆಟ್ಟಿ ಟ್ವಿಟರ್ ಮೂಲಕ ಆಗ್ರಹಿಸಿದ್ದಾರೆ.
ವಿಜಯ ಸಂಘರ್ಷಕ್ಕೆ ಸುದ್ದಿ ನೀಡಲು ಕರೆ ಮಾಡಿ
+91 9743225795
