ಅಧಿಕಾರಿಗಳೆ ಇತ್ತಕಡೆ ಗಮನ ಹರಿಸಿ : ಹೂಳು ತುಂಬಿದ ಚರಂಡಿ-ಕೆರೆ ಯಾಗುತ್ತಿದೆ ಹೆದ್ದಾರಿ

 

ವಿಜ


ಯ ಸಂಘರ್ಷ

ತೀರ್ಥಹಳ್ಳಿ: ಪಟ್ಟಣ ಪಂಚಾಯತಿ ವ್ಯಾಪ್ತಿಯ ವಾರ್ಡ್ ನಂಬರ್ 14 ರ ಕುರುವಳ್ಳಿ ದತ್ತಣ್ಣ ಮನೆಯ ಎದುರು ಚರಂಡಿಯಲ್ಲಿ ಹೂಳು ತುಂಬಿಕೊಂಡು ಸಮರ್ಪಕವಾದ ಚರಂಡಿ ವ್ಯವಸ್ಥೆ ಇಲ್ಲದೇ ರಸ್ತೆಯಲ್ಲಿಯೇ ನೀರು ಹರಿಯುತ್ತಿದೆ.

ಕುರುವಳ್ಳಿ ಪೋಸ್ಟ್ ಆಫೀಸ್ ಎದುರು ತಿರುವಿನಲ್ಲಿ ರಸ್ತೆ ಕೆರೆಯಂತಾಗಿದೆ. ಈ ರಸ್ತೆಯ ಚರಂಡಿಗಳು ಅನೇಕ ವರ್ಷಗಳ ಹಿಂದೆ ಮಾಡಿದ್ದಾದರೂ ಚರಂಡಿ ನಿರ್ವಹಣೆ ಸಮರ್ಪಕವಾಗಿ ಮಾಡದೇ ಚರಂಡಿಯ ಎರಡೂ ಇಕ್ಕೆಲಗಳಲ್ಲಿ ಮಣ್ಣು ತುಂಬಿ ಚರಂಡಿ ಕಾಣದಂತಾಗಿದೆ. ಮಳೆಗಾಲ ಆರಂಭಕ್ಕೂ ಮೊದಲು ಹೂಳು ತೆಗೆದಿದ್ದರೆ  ಮಳೆ ನೀರು ಸಮಸ್ಯೆಯಿಂದ ಕೃತಕಕೆರೆ ಆಗುತ್ತಿರಲಿಲ್ಲ ಎಂಬುದು ಸ್ಥಳೀಯರ ದೂರಾಗಿದೆ.



ರಸ್ತೆಯಲ್ಲಿ ಕೃತಕ ಕೆರೆ: ಅಪಘಾತ ಸಂಭವ:

ಕೊಪ್ಪ ತೀರ್ಥಹಳ್ಳಿ  ರಾಷ್ಟ್ರೀಯ ಹೆದ್ದಾರಿ 169ರ ರಸ್ತೆಯಲ್ಲಿ ವಾಹನ ದಟ್ಟಣೆ ಹೆಚ್ಚಿದ್ದು ಈ ರಸ್ತೆಯಲ್ಲಿ ನಿರ್ಮಾಣವಾದ ನೀರಿನಿಂದ ಆವೃತ್ತವಾದ ಕೃತಕ ಕೆರೆಯನ್ನು ತಪ್ಪಿಸಲು ಹೋಗಿ‌ ದ್ವಿಚಕ್ರ ವಾಹನಗಳು ಅಪಘಾತಕ್ಕೀಡಾಗುವ ಸಂಭವವಿದ್ದು ಹಾಗೂ ಪಾದಾಚಾರಿಗಳಿಗೆ ಕೆಸರು ನೀರು ಹಾರುತ್ತಿದ್ದು ಅನಾಹುತವಾಗುವ ಮುನ್ನ ಚರಂಡಿಯ ಮಣ್ಣು ತೆರವು ಮಾಡುವ ಕಾರ್ಯ ಅಧಿಕಾರಿಗಳಿಂದ ಕೂಡಲೇ ಆಗಬೇಕಾಗಿದೆ. ಸಂಬಂಧ ಪಟ್ಟ ಅಧಿಕಾರಿಗಳು ತಕ್ಷಣ ಗಮನಿಸಿ ಸಾರ್ವಜನಿಕರಿಗೆ ಆಗುತ್ತಿರುವ ತೊಂದರೆಯನ್ನು ಸರಿಪಡಿಸಲಿ ಎಂಬುದು ಸಾರ್ವಜನಿಕರು ಒತ್ತಾಯಿಸಿದ್ದಾರೆ.

✍🏻: ರಶ್ಮಿ ಶ್ರೀಕಾಂತ್ ನಾಯಕ್
         ತೀರ್ಥಹಳ್ಳಿ

ವಿಜಯ ಸಂಘರ್ಷಕ್ಕೆ ಸುದ್ದಿ ನೀಡಲು ಕರೆ ಮಾಡಿ +91 9743225795

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು