ವಿಜಯ ಸಂಘರ್ಷ
ಬೆಂಗಳೂರು : ವಸತಿ ಸಚಿವ ವಿ.ಸೋಮಣ್ಣ ಜನ್ಮ ದಿನದ ಅಂಗವಾಗಿ ಅವರನ್ನು ಶಾಸಕ ಮುನಿರತ್ನ ಭೇಟಿ ಮಾಡಿ ಅಭಿನಂದಿಸಿದರು.
ನಂತರ ಮಾತನಾಡಿದ ಅವರು ಗುಡಿಸಲು ಮುಕ್ತ ರಾಜ್ಯವನ್ನಾಗಿಸುವ ದಿಕ್ಕಿನತ್ತ ದೃಢ ಹೆಜ್ಜೆ ಇಟ್ಟಿರುವ ವಸತಿ ಸಚಿವ ವಿ ಸೋಮಣ್ಣ ಅವರ ಕಾರ್ಯ ನಮ್ಮೆಲ್ಲರಿಗೂ ಮಾದರಿಯಾಗಿದೆ. ಜನಪರ ಕಾಳಜಿಯ ಅಭಿವೃದ್ಧಿಯ ಹರಿಕಾರರಾಗಿ ಗಮನಸೆಳೆದಿರುವ ಸಚಿವರು ಗೋವಿಂದರಾಜನಗರ ವಿಧಾನಸಭಾ ಕ್ಷೇತ್ರವನ್ನು ಮಾದರಿ ಕ್ಷೇತ್ರವಾಗಿ ಸುತ್ತ ಅವರ ಅಭಿವೃದ್ಧಿಪರ ದೂರದೃಷ್ಟಿ ಚಿಂತನೆಯ ಕಾರ್ಯವೈಖರಿ ಶ್ಲಾಘನೀಯವಾಗಿದೆ ಎಂದರು.
ಬಡವರು,ದೀನ ದಲಿತರ ಬಗ್ಗೆ ಅಪಾರ ಕಾಳಜಿ ಹೊಂದಿರುವ ಸಚಿವರು ನಗರದ ಕೊಳಗೇರಿಗಳನ್ನು ಅಭಿವೃದ್ಧಿ ಪಡಿಸುವ ಮೂಲಕ ಅವಕಾಶ ವಂಚಿತ ಸಮುದಾಯಗಳ ಏಳಿಗೆಗಾಗಿ ಹಗಲಿರುಳು ಶ್ರಮಿಸುತ್ತಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಮೂಲಭೂತ ಸೌಕರ್ಯಗಳಿಂದ ವಂಚಿತವಾಗಿದ್ದ ನಾಗರಿಕರಿಗೆ ಅಗತ್ಯ ಮೂಲಭೂತ ಸೌಕರ್ಯಗಳ ಒದಗಿಸಿ ಗುಡಿಸಲು ಮುಕ್ತ ಕೊಳೆಗೇರಿಗಳ ನ್ನಾಗಿಸುವ ಮೂಲಕ ಅತ್ಯಂತ ವ್ಯವಸ್ಥಿತ ಸುಸಜ್ಜಿತ ಹಾಗು ಎಲ್ಲಾ ವ್ಯವಸ್ಥೆಗಳನ್ನು ಒಳಗೊಂಡ ವಸತಿ ಸಮುಚ್ಚಯ ನಿರ್ಮಾಣ ಮಾಡುವ ಮೂಲಕ ಬಡವರಿಗೆ ಸೂರನ್ನು ಒದಗಿಸುವ ಮಹತ್ಕಾರ್ಯದಲ್ಲಿ ಭಾಗಿಯಾಗಿದ್ದಾರೆ ಎಂದು ತಿಳಿಸಿದರು.
ಇದೇ ವೇಳೆ ಕ್ಷೇತ್ರ ವ್ಯಾಪ್ತಿಯ ವಿವಿಧ ವಾರ್ಡಗಳಲ್ಲಿ ವಸತಿ ಸಚಿವ ವಿ.ಸೋಮಣ್ಣ ಅವರ ಹುಟ್ಟುಹಬ್ಬದ ಅಂಗವಾಗಿ ಪೌರಕಾರ್ಮಿಕರಿಗೆ, ಬಡವರಿಗೆ 3000 ಸೀರೆ ಹಾಗೂ ಇನ್ನಿತರ ವಸ್ತುಗಳನ್ನು ನೀಡಲಾಯಿತು.
ವಿಜಯ ಸಂಘರ್ಷಕ್ಕೆ ಸುದ್ದಿ ನೀಡಲು ಕರೆ ಮಾಡಿ +91 9743225795
