ವಿಜಯ ಸಂಘರ್ಷ
ಭದ್ರಾವತಿ: ಬಿಪಿಎಲ್, ಅಂತ್ಯೋದಯ ಕಾರ್ಡ್ ಹೊಂದಿದ ಕುಟುಂಬಗಳಿಗೆ ನಗರಸಭೆ ವತಿಯಿಂದ ನೀಡುತ್ತಿರುವ ಪುಡ್ ಕಿಟ್ಅರ್ಹ ಫಲಾನುಭವಿಗಳಿಗೆ ಸ್ಥಳೀಯ ನ್ಯಾಯ ಬೆಲೆ ಅಂಗಡಿ ಯಿಂದಲೇ ನೀಡುವಂತೆ ಜೆಡಿಯು ರಾಜ್ಯ ಕಾರ್ಯದರ್ಶಿ ಶಶಿಕುಮಾರ್ ಎಸ್ ಗೌಡ ಒತ್ತಾಯಿಸಿದರು.
ಇಂದು ಮಿನಿ ವಿಧಾನ ಸೌಧ ಮುಂಭಾಗ ಏಕಾಂಗಿ ಪ್ರತಿಭಟನೆಯಲ್ಲಿ ಮಾತನಾಡಿ,
ನಗರಸಭೆ ವತಿಯಿಂದ ಬಡವರಿಗೆ ನೀಡಲಾಗುತ್ತಿರುವ ಕಿಟ್ ಗಳು ಅರ್ಹ ಫಲಾನುಭವಿಗಳಿಗೆ ಸಿಗುತ್ತಿಲ್ಲ.
ಈಗಾಗಲೇ ನಗರ ಪ್ರದೇಶದ ಕೆಲವು ವಾರ್ಡ್ ಗಳಲ್ಲಿ ಕಿಟ್ ಅವೈಜ್ಞಾನಿಕವಾಗಿ ಹಂಚಲಾಗಿದೆ. ವಾರ್ಡ್ ನ ಕೆಲ ರಾಜಕೀಯ ಮುಖಂಡರ ಹಾಗು ಚುನಾಯಿತ ಪ್ರತಿನಿಧಿಗಳಿಗೆ ಕೂಪನ್ ನೀಡಲಾಗುತ್ತಿದೆ ಎಂದು ಆರೋಪಿ ಸಿದರು.
ಕೂಪನ್ ಪಡೆದ ವ್ಯಕ್ತಿಗೆ ಸ್ಥಳೀಯ ವಾರ್ಡ್ ನಲ್ಲಿ ಕಿಟ್ ನ್ನು ನೀಡಬೇಕು, ಕಿಟ್ ಪಡೆದವರು ಬಿಪಿಎಲ್
ಅಂತ್ಯೋದಯ ಕಾರ್ಡ್ ಹೊಂದಿದ ಅರ್ಹ ಫಲಾನುಭವಿಗಳ ಎಂಬುದನ್ನು ತಿಳಿದು ನೀಡಬೇಕು.
ನಗರಸಭೆ ವ್ಯಾಪ್ತಿಯಲ್ಲಿ 27,300 ಸಾವಿರ ಬಿಪಿಎಲ್ ಹಾಗು 1500 ಅಂತ್ಯೋದಯ ಕಾರ್ಡ್ ಹೊಂದಿರುವ ಬಡ ಕುಟುಂಬಗಳು ವಾಸ ಮಾಡುತ್ತಿದ್ದಾರೆ. ನಗರದಲ್ಲಿರುವ ನ್ಯಾಯಬೆಲೆ ಅಂಗಡಿಗಳ ಮೂಲಕ ಪ್ರತಿ ಬಿಪಿಎಲ್, ಅಂತ್ಯೋದಯ ಪಡಿತರ ಹೊಂದಿದ ಬಡ ಕುಟುಂಬಗಳು ಯಾವ ನ್ಯಾಯಬೆಲೆ ಅಂಗಡಿಯಲ್ಲಿ ಪಡಿತರ ತಗೆದು ಕೊಳ್ಳುತ್ತಿದ್ದರೋ ಅಲ್ಲಿಯೆ! ಪಡಿತರ ದಾರರು ತಮ್ಮ BPL ಕಾರ್ಡ್ ಮತ್ತು ನಂಬರನ್ನೂ ನ್ಯಾಯಬೆಲೆ ಅಂಗಡಿ ಮಾಲಿಕನಿಗೆ ತೋರಿಸಿ ಫಲಾನುಭವಿಗಳ ಹೆಸರು ಮತ್ತು ಕಾರ್ಡ್ ನಂಬರ್ ನಮೂದು ಮಾಡಿ ಕಿಟ್ ನೀಡಬೇಕು.
ನ್ಯಾಯಬೆಲೆ ಅಂಗಡಿಗಳಿಗೆ ನೀಡುವಂತಹ ವ್ಯವಸ್ಥೆಯನ್ನು ತಾಲೂಕು ಆಡಳಿತ, ನಗರಸಭೆ ಪೌರಾಯುಕ್ತರು ಗಮನಹರಿಸಬೇಕು. ಇಲ್ಲವಾದಲ್ಲಿ, ಅರ್ಹ ಫಲಾನುಭವಿ ಗಳಿಗೆ ಕಿಟ್ ಸಿಗದೇ ಸರ್ಕಾರದ ಸದುದ್ದೇಶ ಹಳ್ಳ ಹಿಡಿದಂತಾಗುತ್ತದೆ.
ಈ ಯೋಜನೆ ತಕ್ಷಣಕ್ಕೆ ಜಾರಿಗೆ ಬರುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಬೇಕೆಂದು ಆಗ್ರಹಿಸಿದ ಅವರು, ಸರಿಪಡಿಸದಿದ್ದಲ್ಲಿ ಕಚೇರಿ ಮುಂದೆ ಉಗ್ರ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದು ಶಶಿ ಕುಮಾರ್ ಎಚ್ಚರಿಸಿದರು.
ನಂತರ ಶಾಸಕ ಬಿ. ಕೆ. ಸಂಗಮೇಶ್ವರ್ ಹಾಗೂ ತಹಸೀಲ್ದಾರ್ ರವರಿಗೆ ಮನವಿ ಸಲ್ಲಿಸಿದರು.
ವಿಜಯ ಸಂಘರ್ಷಕ್ಕೆ ಸುದ್ದಿ ನೀಡಲು ಕರೆ ಮಾಡಿ
+91 9743225795