ಜನಸಂಖ್ಯೆ ನಿಯಂತ್ರಣದ ಅವಶ್ಯಕತೆ ಇದೆ : ಡಾ. ಅಶೋಕ್

 

ವಿಜಯ ಸಂಘರ್ಷ


ಭದ್ರಾವತಿ: ಪ್ರಸ್ತುತ ದೇಶದಲ್ಲಿ ಜನಸಂಖ್ಯೆ ನಿಯಂತ್ರಣದ ಅವಶ್ಯಕತೆ ಇದ್ದು, ಎಲ್ಲರೂ ಜಾಗೃತಿರಾಗಬೇಕಾಗಿದೆ ಎಂದು ಟಿಎಚ್ ಓ  ಡಾ.ಎಂ.ವಿ ಅಶೋಕ್ ಹೇಳಿದರು.

ಅವರು ಇಂದು ಸಾರ್ವಜನಿಕ ಸರ್ಕಾರಿ ಆಸ್ಪತ್ರೆಯ ಸಭಾಂಗಣದಲ್ಲಿ ಹಮ್ಮಿ ಕೊಳ್ಳಲಾಗಿದ್ದ ವಿಶ್ವ ಜನಸಂಖ್ಯಾ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.

ಜನಸಂಖ್ಯೆ ಹೆಚ್ಚಳದಿಂದ ಲಿಂಗಾನು ಪಾತ ಉಂಟಾಗುವ ಜೊತೆಗೆ ದೇಶದಲ್ಲಿ ಹಲವಾರು ಸಮಸ್ಯೆಗಳು ಎದುರಾಗ ಲಿವೆ ಎಂದು ವಿವರಿಸಿದರು.

ತಹಸೀಲ್ದಾರ್ ಜಿ. ಸಂತೋಷ್‌ಕುಮಾರ್ ಕಾರ್ಯಕ್ರಮ ಉದ್ಘಾಟಿಸಿದರು. ಸರ್ಜನ್ ಡಾ. ಶಿವಪ್ರಕಾಶ್ ಮತ್ತು ಸ್ತ್ರೀ ರೋಗ ತಜ್ಞೆ ಡಾ. ವರ್ಷ ಮಾತನಾಡಿ, ಜನಸಂಖ್ಯಾ ನಿಯಂತ್ರಣದ ವಿಧಾನಗಳ ಬಗ್ಗೆ ಮಾಹಿತಿ ನೀಡಿದರು.

ಆಸ್ಪತ್ರೆಯ ಮುಖ್ಯ ವೈದ್ಯಾಧಿಕಾರಿ ಡಾ. ಓ. ಮಲ್ಲಪ್ಪ, ರೇವತಿ, ಆನಂದ ಮೂರ್ತಿ, ರಾಜೇಗೌಡ, ವಸಂತ ಹಾಗೂ ನೇತ್ರಾ ಸೇರಿದಂತೆ ಮತ್ತಿತರರಿದ್ದರು.

ವಿಜಯ ಸಂಘರ್ಷಕ್ಕೆ ಸುದ್ದಿ ನೀಡಲು ಕರೆ ಮಾಡಿ +91 9743225795

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು