ವಿಜಯ ಸಂಘರ್ಷ
ಕೆ. ಆರ್. ಪೇಟೆ : ಶಾಸಕ ಡಾ. ಕೆ.ಸಿ ನಾರಾಯಣಗೌಡ ಎರಡನೇ ಬಾರಿಗೆ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸುತ್ತಿದ್ದಂತೆ ಸ್ಥಳೀಯ ಬಿಜೆಪಿ ಪಕ್ಷದ ನೂರಾರು ಕಾರ್ಯಕರ್ತರು ಜಮಾಯಿಸಿ ಪಟ್ಟಣದ ಟಿಬಿ ಸರ್ಕಲ್ ನಲ್ಲಿ ಪಟಾಕಿ ಸಿಡಿಸಿ ಸಿಹಿ ಹಂಚಿ ಸಂಭ್ರಮಿಸಿದರು.
ಸಿಎಂ ಬಸವರಾಜು ಬೊಮ್ಮಾಯಿ ಸಂಪುಟದಲ್ಲಿ ಎರಡನೇ ಬಾರಿ ಸಚಿವರಾಗುವ ಅವಕಾಶ ಸಿಕ್ಕಿ ಪ್ರಮಾಣವಚನ ಸ್ವೀಕರಿಸಿದ ಹಿನ್ನೆಲೆಯಲ್ಲಿ ಪಟ್ಟಣದ ಟಿಬಿ ಸರ್ಕಲ್ ನಲ್ಲಿ ಬಿಜೆಪಿ ಪಕ್ಷದ ಕಾರ್ಯಕರ್ತರು ಹಾಗೂ ಅಭಿಮಾನಿಗಳ ಸಂಭ್ರಮ ಮುಗಿಲು ಮುಟ್ಟಿತ್ತು, ಶಾಸಕರ ಕಚೇರಿ ಬಳಿ ಹಾಗೂ ಟಿಬಿ ಸರ್ಕಲ್ ಬಳಿ ಪಟಾಕಿ ಸಿಡಿಸಿ, ಸಿಹಿ ಹಂಚಿ ಸಂಭ್ರಮಿಸಿದರು,
ಇದೆ ಸಂದರ್ಭದಲ್ಲಿ ಪಕ್ಷದ ವರಿಷ್ಠರಿಗೆ ಹಾಗೂ ಪ್ರಧಾನಿ ನರೇಂದ್ರಮೋದಿ ರವರಿಗೆ ಜಯ ಘೋಷಗಳನ್ನು ಕೂಗಿ ಸಂಭ್ರಮಿಸಿದರು. ನಂತರ ಬಿಜೆಪಿ ಮುಖಂಡ ನೀಲಕಂಠ ಮಾತನಾಡಿ ತಾಲೂಕಿಗೆ ನಿಕಟ ಪೂರ್ವ ಸಿಎಂ ಬಿಎಸ್ ಯಡಿಯೂರಪ್ಪನವರ ನೇತೃತ್ವದ ಸರ್ಕಾರದಲ್ಲಿ ಜಿಲ್ಲಾದ್ಯಂತ ಉನ್ನತ ಮಟ್ಟದಲ್ಲಿ ಅಭಿವೃದ್ಧಿ ಮಾಡಿದ್ದಾರೆ. ಸಾವಿರಾರು ಕೋಟಿ ಅನುದಾನವನ್ನು ತಂದು ಅಭಿವೃದ್ಧಿಗೆ ಶ್ರಮಿಸಿದ್ದಾರೆ. ಸಚಿವ ನಾರಾಯಣ ಗೌಡರಿಗೆ ಎರಡನೇ ಬಾರಿ ಸಚಿವ ಸ್ಥಾನ ದೊರೆತ್ತಿರುವುದು ಸಂತಸ. ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ, ಪ್ರಧಾನಿ ನರೇಂದ್ರ ಮೋದಿ, ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ನವರಿಗೆ ಪಕ್ಷದ ಪರವಾಗಿ ಹಾಗೂ ಕಾರ್ಯಕರ್ತರ ಪರವಾಗಿ ಅಭಿನಂದನೆಗಳನ್ನು ಸಲ್ಲಿಸುತ್ತೇವೆ ಎಂದು ತಿಳಿಸಿದರು...
ಈ ಸಂದರ್ಭದಲ್ಲಿ ಬಿಜೆಪಿ ಮಹಿಳಾ ಘಟಕದ ಅಧ್ಯಕ್ಷೆ ಲತಾ ಮುರುಳಿ,ನಗರ ಘಟಕದ ಅಧ್ಯಕ್ಷೆ ಚಂದ್ರಕಲ, ಕಬ್ಬು ಬೆಳೆಗಾರರ ಅಧ್ಯಕ್ಷ ಕಾರಿಗನಹಳ್ಳಿ ಕುಮಾರ್, ಎಸ್ ಸಿ ಘಟಕದ ಅಧ್ಯಕ್ಷ ರವಿಶಿವಕುಮಾರ್, ಯುವಮೋರ್ಚಾ ಅಧ್ಯಕ್ಷ ಮಂಜುನಾಥ್, ಹೊಸಹೊಳಲು ಮುಖಂಡರಾದ ಯೋಗೇಶ್ ಗೌಡ, ಕಲ್ಪನಾ ದೇವರಾಜ್, ಗಿರೀಶ್, ಮೋದೂರು ಮಂಜು,ಅಪ್ಪಾಜಿ, ಪ್ರಭಾಕರ್,ಸಂಪತ್ ಕುಮಾರ್, ಜಗದೀಶ್, ಬಸವರಾಜ್ ಹಾಗೂ ಕಾರ್ಯಕರ್ತರು ಅಭಿಮಾನಿಗಳು ಉಪಸ್ಥಿತರಿದ್ದರು....
ವರದಿ : ಸಿ.ಆರ್. ಜಗದೀಶ್, ಕೆ.ಆರ್. ಪೇಟೆ
ವಿಜಯ ಸಂಘರ್ಷಕ್ಕೆ ಸುದ್ದಿ ನೀಡಲು ಕರೆ ಮಾಡಿ +91 9743225795
BOMBAY GANG MOVING FORWARD
ಪ್ರತ್ಯುತ್ತರಅಳಿಸಿ