ವಿಜಯ ಸಂಘರ್ಷ
ನವದೆಹಲಿ : ಬೆಲೆ ಏರಿಕೆಯಿಂದ ತತ್ತರಿಸಿರುವ ಗ್ರಾಹಕರಿಗೆ ಮತ್ತೊಂದು ಬಿಗ್ ಶಾಕ್ ಎದುರಾಗಿದ್ದು, ಸರ್ಕಾರಿ ಸ್ವಾಮ್ಯದ ತೈಲ ರೀಟೇಲರ್ ಗಳು ಅಡುಗೆ ಅನಿಲ ಸಿಲಿಂಡರ್ ಗಳ ಬೆಲೆ ಮತ್ತೆ 25 ರೂ. ಏರಿಕೆ ಮಾಡಿವೆ.
ಜು: 1ನೇ ತಾರೀಕಿನಂದು ಅಡುಗೆ ಅನಿಲ ಸಿಲಿಂಡರ್ ಗಳ ಬೆಲೆ 25.50 ರೂ. ಹೆಚ್ಚಳ ಮಾಡಲಾಗಿತ್ತು. ಇದೀಗ ಮತ್ತೆ 25 ರೂ. ಹೆಚ್ಚಿಸಿವೆ. ಬೆಂಗಳೂರಿನಲ್ಲಿ ಅಡುಗೆ ಅನಿಲ ಸಿಲಿಂಡರ್ ದರ 862.5 ರೂ, ದೆಹಲಿ 859.5 ರೂ, ಮುಂಬೈ 859.5 ರೂ. ಕೋಲ್ಕತ್ತಾ 886 ರೂ. ಮತ್ತು ಚೆನ್ನೈನಲ್ಲಿ 875.5 ರೂ ಇದೆ.
ಆ: 17 ರ ಮಂಗಳವಾರ ಎಲ್ಪಿಜಿ ಸಿಲಿಂಡರ್ ಗಳ ದರವು 25 ರೂ ಹೆಚ್ಚಳ ಮಾಡಲಾಗಿದೆ. ತೈಲ ಮಾರ್ಕೆಟಿಂಗ್ ಕಂಪೆನಿಗಳು ಪ್ರತಿ ತಿಂಗಳ ಮೊದಲ ದಿನದಂದು ಬೆಲೆ ಏರಿಕೆ ಮಾಡುತ್ತವೆ. ದೆಹಲಿಯಲ್ಲಿ ಈ ವರ್ಷದ ಆರಂಭದಲ್ಲಿ- ಅಂದರೆ 2021ರ ಶುರುವಿನಲ್ಲಿ ಸಿಲಿಂಡರ್ ಬೆಲೆ 694 ರೂಪಾಯಿ ಇತ್ತು. ಇದೀಗ ಎಂಟು ತಿಂಗಳಲ್ಲಿ 165 ರೂಪಾಯಿ ಹೆಚ್ಚಳ ಆಗಿದೆ.
ವಿಜಯ ಸಂಘರ್ಷಕ್ಕೆ ಸುದ್ದಿ ನೀಡಲು ಕರೆ ಮಾಡಿ +91 9743225795