ವಿಜಯ ಸಂಘರ್ಷ
ಭದ್ರಾವತಿ: ಶಿಕ್ಷಣ ಸಂಸ್ಥೆಗೆ ಏನನ್ನಾದರೂ ಕೊಡುಗೆ ನೀಡಬೇಕು ಎನ್ನುವ ಭಾವನೆಗಳು ವಿದ್ಯಾರ್ಥಿಗಳಲ್ಲಿ ಮೂಡಿಬರಲು ಶಾಲಾ ಕಾಲೇಜುಗಳು ನೀಡಿದ ಶಿಕ್ಷಣವೇ ಕಾರಣವಾಗಿದೆ ಎಂದು ಎಂಪಿಎಂ ಶಿಕ್ಷಣ ಮಂಡಳಿಯ ಖಜಾಂಚಿ ರವಿಕುಮಾರ್ ಅಭಿಪ್ರಾಯ ಪಟ್ಟರು.
ಎಂಪಿಎಂ ಇಎಸ್ ಆಡಳಿತ ಮಂಡಳಿಯ ಆಂಗ್ಲ ಶಾಲೆಯಲ್ಲಿ ಪಿಟಿಐಎಸ್ ಅಲ್ಯೂಮಿನಿಯಂ ಗ್ರೂಪ್ 2003-13 ನೇ ಸಾಲಿನ ಹಳೇಯ ವಿದ್ಯಾರ್ಥಿಗಳಿಂದ ಏರ್ಪಡಿಸಲಾಗಿದ್ದ ಡಿಜಿಟಲ್ ಕ್ಲಾಸ್ ರೂಂ ಉದ್ಘಾಟಿಸಿ ಮಾತನಾಡಿದರು.
ಎಂಪಿಎಂ ಇಎಸ್ ನ ಆಡಳಿತ ಕ್ಕೊಳಪಟ್ಟ ಶಾಲೆಯ ದುರಸ್ಥಿಗೊಳಿಸಿ ಮುಂದಿನ ವಿದ್ಯಾರ್ಥಿಗಳಿಗೂ ಅನುಕೂಲವಾಗಲೆಂದು ಆಲೋಚಿಸಿದ ಹಳೇಯ ವಿದ್ಯಾರ್ಥಿಗಳು ಡಿಜಿಟಲ್ ಕ್ಲಾಸ್ ಗೆ ಒತ್ತು ನೀಡಿ ಸ್ವಯಂ ಪ್ರೇರಿತರಾಗಿ ಮುಂದಾಗಿರುವುದು ಶ್ಲಾಘನೀಯ. ಇಂದಿನ ಡಿಜಿಟಲ್ ಯುಗಕ್ಕನುಸಾರವಾಗಿ ಡಿಜಿಟಲ್ ಕ್ಲಾಸ್ ರೂಂ ನೀಡಿರುವುದು ವಿದ್ಯಾರ್ಥಿ ಗಳಲ್ಲಿರುವ ಆಸಕ್ತಿ ವ್ಯಕ್ತವಾಗಿದೆ ಎಂದರು.
ಪ್ರಾಂಶುಪಾಲ ಸತೀಶ್ ಮಾತನಾಡಿ, ಹಳೇಯ ವಿದ್ಯಾರ್ಥಿಗಳು ತಮ್ಮ ಸಂಸ್ಥೆಗೆ ನೀಡಿದ ಕೊಡುಗೆ ಅಪಾರ. ಇಂದಿನ ವಿದ್ಯಾರ್ಥಿಗಳು ಶಿಕ್ಷಣ ನೀಡಿದ ಶಿಕ್ಷಕರನ್ನು ಕಂಡು ಕಾಣದ ರೀತಿಯಲ್ಲಿ ಹಿಂದಿರುಗಿ ಹೋಗುತ್ತಾರೆ. ಆದರೆ ಹಳೇಯ ವಿದ್ಯಾರ್ಥಿಗಳಲ್ಲಿರುವ ಆಸಕ್ತಿ, ಉತ್ಸುಕತೆ, ಶ್ರದ್ದೆ ನೋಡಿದ್ದಲ್ಲಿ ವಿದ್ಯಾದಾನ ನೀಡಿದ ಗುರುಗಳಿಗೆ ನೀಡುವ ದೊಡ್ಡ ಗುಣವಾಗಿದೆ ಎಂದು ಪ್ರಶಂಸೆ ವ್ಯಕ್ತಪಡಿಸಿದರು.
ಉಪ ಪ್ರಾಂಶುಪಾಲ ನಾಗರಾಜ್ ಮಾತನಾಡಿದರು. ಈ ಸಂದರ್ಭದಲ್ಲಿ ಪಿಟಿಐಎಸ್ ಅಲ್ಯೂಮಿನಿಯಂ ಗ್ರೂಪ್ ನ ಹಳೆಯ ವಿದ್ಯಾರ್ಥಿಗಳಾದ ವಿನುತನ್, ಮಮತ, ಪ್ರೀತಮ್, ಡಾ.ಮಹಾನಂದ, ಅರುಣ್ ಕುಮಾರ್, ದಿಲೀಪ್, ಶರತ್ ಇದ್ದರು.
ವಿಜಯ ಸಂಘರ್ಷಕ್ಕೆ ಸುದ್ದಿ ನೀಡಲು ಕರೆ ಮಾಡಿ +91 9743225795