ವಿಜಯ ಸಂಘರ್ಷ
ಭದ್ರಾವತಿ: ಹೈವೇ ಪಕ್ಕದ ವೈನ್ ಸ್ಟೋರ್ ಗಳನ್ನು ತೆರವುಗೊಳಿಸ ಬೇಕೆಂದು ಆಗ್ರಹಿಸಿ ಜೆಡಿಯು ಮುಖಂಡ ಶಶಿಕುಮಾರ್ ಎಸ್.ಗೌಡ ಅಬಕಾರಿ ಕಚೇರಿ ಮುಂಭಾಗ ಏಕಾಂಗಿ ಪ್ರತಿಭಟನೆ ನಡೆಸಿದರು.
ಸರ್ವೋಚ್ಚ ನ್ಯಾಯಾಲಯದ ಆದೇಶದನ್ವಯ ಹೆದ್ದಾರಿ ವ್ಯಾಪ್ತಿ ಯೊಳಗಿರುವ ಮದ್ಯದಂಗಡಿಗಳನ್ನು ತೆರವುಗೊಳಿಸುವಂತೆ ಆದೇಶ ವಿದ್ದರೂ ಪರಿಗಣಿಸದೆ ಮೀನಾ ಮೇಷ ವೆಣಿಸುತ್ತಿರುವುದು ಖಂಡನೀಯ. ಅಬಕಾರಿ ಅಧಿಕಾರಿಗಳು 500 ಮೀಟರ್ ವ್ಯಾಪ್ತಿ ಒಳಗಿರುವ ಮದ್ಯದಂಗಡಿಗಳ ವಿರುದ್ಧ ಯಾವುದೇ ಕ್ರಮ ತೆಗೆದುಕೊಂಡಿರುವುದಿಲ್ಲ .
ಹೆದ್ದಾರಿ ಪಕ್ಕದಲ್ಲಿರುವ ಮದ್ಯದಂಗಡಿ ಗಳನ್ನು ತೆರವುಗೊಳಿಸಲು ಸರ್ವೋಚ್ಚ ನ್ಯಾಯಾಲಯವು ನೀಡಿರುವ ಆದೇಶವನ್ನೇ ಪಾಲಿಸುವಂತೆ 2021ರ ಆಗಸ್ಟ್ ತಿಂಗಳಲ್ಲಿ ಆದೇಶ ಹೊರಡಿಸಿದ್ದು ಸಂಬಂಧಪಟ್ಟ ಅಧಿಕಾರಿಗಳು ತಾಲ್ಲೂಕಿನಲ್ಲಿರುವ ಹಾಗೂ ಹೊಸದಾಗಿ ಹೆದ್ದಾರಿ ಪಕ್ಕದಲ್ಲಿರುವ ಮದ್ಯದಂಗಡಿಗಳನ್ನು ತೆರೆಯಲು ಅವಕಾಶ ಮಾಡಿಕೊಡ ಬಾರದೆಂದು ಒತ್ತಾಯಿಸಿದರು.
ರಾಷ್ಟ್ರೀಯ ಹೆದ್ದಾರಿ ಸಚಿವಾಲಯದ ಮಾಹಿತಿ ಪ್ರಕಾರ ದೇಶದಲ್ಲಿ 2019 ರಿಂದ ಇಲ್ಲಿಯವರೆಗೂ 4.50 ಲಕ್ಷ ಅಪಘಾತಗಳು ವರದಿಯಾಗಿದ್ದು ಅದರಲ್ಲಿ 1.55.000 ಮಂದಿ ಮೃತಪಟ್ಟಿದ್ದು ಅವುಗಳನ್ನು ಮದ್ಯಪಾನ ಮಾಡಿ ವಾಹನ ಚಲಾಯಿಸಿ ಅಪಘಾತ ದಿಂದ ಸಾವನ್ನಪ್ಪಿರುವವರ ಸಂಖ್ಯೆ 1ಲಕ್ಷ ಇದ್ದು ಅದೇ ರೀತಿ 2ಲಕ್ಷ ಮಂದಿ ಮದ್ಯಪಾನ ಮಾಡಿ ವಾಹನ ಚಲಾಯಿಸಿ ಅಪಘಾತದಿಂದ ಶೇಕಡಾ 75 ರಷ್ಟು ಅಂಗವೈಕಲ್ಯ ಹೊಂದಿರು ತ್ತಾರೆ ಎಂಬುದನ್ನು ಹೆದ್ದಾರಿ ಸಚಿವಾಲಯ ಖಚಿತಪಡಿಸಿರುತ್ತದೆ.
ಆದರೂ ಅಬಕಾರಿ ಇಲಾಖೆ ಗಂಭೀರವಾಗಿ ಪರಿಗಣಿಸಿರುವುದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಡೈರಿ ಸರ್ಕಲ್ ನಲ್ಲಿ 2 ವೈನ್ ಸ್ಟೋರ್ ಗಳಿದ್ದು ಅವುಗಳು ಸಹ ಹೆದ್ದಾರಿ ಪಕ್ಕದ 500 ಮೀಟರ್ ವ್ಯಾಪ್ತಿಯೊಳಗೆ ಇದ್ದು ಇತ್ತೀಚೆಗೆ ವೈನ್ ಸ್ಟೋರ್ ಗಳಲ್ಲಿ ಮದ್ಯಪಾನ ಮಾಡಿ ಪದೇ ಪದೇ ಗಲಾಟೆಗಳಾಗುತ್ತಿದ್ದವು. ಈ ಸಂಬಂಧ ಪೊಲೀಸ್ ಠಾಣೆಗಳಲ್ಲಿ ದೂರು ದಾಖಲಾಗಿವೆ.
ಆ ಮದ್ಯದಂಗಡಿಗಳ ಸಮೀಪ 2 ಮೀಟರ್ ಅಂತರದಲ್ಲಿ ಹೆದ್ದಾರಿ ಇದ್ದು ಪಕ್ಕದಲ್ಲಿ ಆಯುರ್ವೇದ ಕಾಲೇಜು ಮತ್ತು ಆಸ್ಪತ್ರೆ ಇದ್ದು, ಆ ಕಾಲೇಜಿಗೆ ವಿದ್ಯಾರ್ಥಿ, ವಿದ್ಯಾರ್ಥಿನಿಯರು ಮತ್ತು ಚಿಕಿತ್ಸೆಗೆಂದು ಬರುವ ರೋಗಿಗಳು ಹಿರಿಯ ನಾಗರಿಕರು, ಕೆ.ಎಸ್. ಆರ್. ಪಿ, ಗಾರ್ಮೆಂಟ್ಸ್ ಮಹಿಳೆಯರು ಹಾಗೂ ಜಯಂತಿ ಗ್ರಾಮ, ನವುಲೆ, ಬಸಾಪುರ, ಹೊನ್ನವಿಲೆ, ಮಜ್ಜಿಗೆಹಳ್ಳಿ ಇರುವ ಗ್ರಾಮಸ್ಥರು ಶಿವಮೊಗ್ಗ- ಭದ್ರಾವತಿಗೆ ಕೂಲಿ ಕೆಲಸಕ್ಕೆ ಮಾರುಕಟ್ಟೆಗೆ ತೆರಳಲು ಡೈರಿ ಸರ್ಕಲ್ ಗೆ ಬರಬೇಕಾಗಿದೆ.
ಈ ಮದ್ಯದಂಗಡಿಗಳಿಂದ ಎಲ್ಲಾ ನಾಗರಿಕರಿಗೂ ಮಹಿಳೆಯರಿಗೂ ವಿದ್ಯಾರ್ಥಿನಿಯರಿಗೂ ಓಡಾಡಲು ತೊಂದರೆಯಾಗುತ್ತಿದೆ. ಇದೇ ವಿಚಾರವಾಗಿ ಹಲವಾರು ಸಂಘ ಸಂಸ್ಥೆಗಳ ಮುಖಂಡರು ಹಿರಿಯ ನಾಗರಿಕರು ದೂರು ನೀಡಿದರೂ ಸಹ ಯಾವುದೇ ಪ್ರಯೋಜನ ವಾಗಿರುವುದಿಲ್ಲ. ಕೂಡಲೇ ಪರಿಶೀಲಿಸಿ ನ್ಯಾಯಾಲಯದ ಆದೇಶವನ್ನು ಪಾಲನೆ ಮಾಡಿ ಹೆದ್ದಾರಿ ಪಕ್ಕದಲ್ಲಿರುವ ಮದ್ಯದಂಗಡಿಗಳನ್ನು ತೆರವುಗೊಳಿಸಿ ನಾಗರಿಕರಿಗೆ ನ್ಯಾಯ ಒದಗಿಸಿ ಕೊಡ ಬೇಕೆಂದು ಒತ್ತಾಯಿಸಿದ ಅವರು ಕೂಡಲೇ ಕ್ರಮಕ್ಕೆ ಮುಂದಾಗದಿದ್ದಲ್ಲಿ ಕಚೇರಿ ಮುಂಭಾಗ ಉಪವಾಸ ಸತ್ಯಾಗ್ರಹ ಹಮ್ಮಿಕೊಳ್ಳುವುದಾಗಿ ಎಚ್ಚರಿಕೆ ನೀಡಿದರು.
ವಿಜಯ ಸಂಘರ್ಷಕ್ಕೆ ಸುದ್ದಿ ನೀಡಲು ಕರೆ ಮಾಡಿ +91 9743225795